ಉಪಯುಕ್ತ ಮಾಹಿತಿ

ನಿಮ್ಮ ದೇಹದಲ್ಲಿನ ಮಚ್ಚೆಗಳು ನಿಮ್ಮ ಅದೃಷ್ಟ, ದುರಾದೃಷ್ಟ ಮತ್ತು ವ್ಯಕ್ತಿತ್ವ ಸಕ್ಕತ್ತಾಗಿ ಹೇಳುತ್ತೆ

ದೇಹದಲ್ಲಿನ ಮಚ್ಚೆಗಳು ನಿಮ್ಮ ಅದೃಷ್ಟ ದುರಾದೃಷ್ಟ ಮತ್ತು ನಿಮ್ಮ ವ್ಯಕ್ತಿತ್ವದ ಸಂಕೇತವಾಗಿವೆ.

 

 

 

 

 

 

ಮಚ್ಚೆಗಳ ರಹಸ್ಯ… ಒಂದೊಂದು ಭಾಗದಲ್ಲಿನ ಮಚ್ಚೆಗಳು ಒಂದೊಂದು ಅದೃಷ್ಟ ನೀಡುತ್ತವೆ.ಮಚ್ಚೆಗಳು ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಸೂಚಿಸುವುದರ ಜೊತೆಗೆ ಅದರಲ್ಲಿ ನಿಮ್ಮ ಮುಂದಿನ ಭವಿಷ್ಯ ಕೂಡ ಅಡಗಿದೆ.ಮಚ್ಚೆಗಳು ಕೂಡ ವಿವಿಧ ಸ್ಥಾನಗಳಲ್ಲಿ ವಿವಿಧ ರೀತಿಯ ಪರಿಣಾಮ ಬೀರುತ್ತವೆ.ಮಚ್ಚೆಗಳು ಕಪ್ಪು ಬಣ್ಣದಲ್ಲಿ ಇರುತ್ತವೆ.ಬಿಳಿ ಬಣ್ಣದ ಮೇಲೆ ಕಪ್ಪು ಮಚ್ಚೆಗಳು ಮುಖದ ಮೇಲಿನ ಸುಂದರತೆಯನ್ನು ಹೆಚ್ಚಿಸುತ್ತವೆ.

 

ಶರೀರದ ಇತರೆ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ…

 

 

 

 

 

 

ನಿಮ್ಮ ಬಲ ಭಾಗದ ಹಣೆಯ ಮೇಲೆ ಮಚ್ಚೆ ಇದ್ದರೆ ಅದು ಹೆಸರು ಖ್ಯಾತಿ,ಗೌರವ,ಯಶಸ್ಸು ಮತ್ತು ಸಂಪತ್ತನ್ನು ಸೂಚಿಸುವುದು.

ನಿಮ್ಮ ಕಣ್ಣಿನ ಉಬ್ಬಿನ ಕೆಳಗೆ ಮಚ್ಚೆ ಇದ್ದರೆ ಅದು ನಿಮ್ಮ ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯನ್ನು ಸೂಚಿಸುತ್ತದೆ.

ಮೂಗಿನ ಮೇಲೆ ಮಚ್ಚೆ ಇದ್ದರೆ ಬೇಗನೇ ಕೋಪಗೊಳ್ಳುವ ಸ್ವಭಾವ ಹೊಂದಿರುವರು ಮತ್ತು ಶೋಧನೆ ಮಾಡುವ ಗುಣ ಹೊಂದಿರುವರು.

 

 

 

 

 

 

ಕಿವಿಯ ಮೇಲೆ ಮಚ್ಚೆ ಇದ್ದರೆ ಅದೃಷ್ಟ ಎಂದು ಪರಿಗಣಿಸಲಾಗಿದೆ.ಬಲ ಕಿವಿಯ ಮೇಲೆ ಮಚ್ಚೆ ಇದ್ದರೆ ವ್ಯಕ್ತಿಯು ತುಂಬಾ  ದೈರ್ಯಶಾಲಿಯಾಗಿದ್ದು ಅಷ್ಟೇ ಗಟ್ಟಿಯಾದ ಮನಸ್ಸನ್ನು  ತಮ್ಮ ಪರಿವಾರ ಮತ್ತು ಅವರದ್ದೇ ಆದ ಬದ್ಧತೆಗಳನ್ನು ಜೀವನದಲ್ಲಿ  ಪಾಲಿಸುತ್ತಾರೆ.

ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ.

ಎರಡೂ ಭುಜಗಳ ಮದ್ಯೆ ಮಚ್ಚೆ ಇದ್ದವರು ಪರೋಪಕಾರಿ ಮತ್ತು ಉದಾರಿಯಾಗಿರುತ್ತಾರೆ.

ಕಪಾಳದ ಮೇಲೆ ಅಂದರೆ ಕೆನ್ನೆಯ  ಮೇಲೆ ಮಚ್ಚೆ ಇರುವವರು ಧನಿಕರು ಅಥವಾ ವ್ಯಸನಿಗಳಾಗಿರುತ್ತಾರೆ.

ಮೂಗಿನ ಮೇಲೆ ಬಲ ಭಾಗದಲ್ಲಿ ಮಚ್ಚೆ ಇದ್ದವರಿಗೆ ಧನ ಸಂಪತ್ತು ಮತ್ತು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಮತ್ತು ಸಫಲತೆಯನ್ನು ಅನುಭವಿಸುತ್ತಾರೆ.

 

 

 

 

 

 

ಬಲಭಾಗದ ಗಲ್ಲದ ಮೇಲೆ ಮಚ್ಚೆ ಇದ್ದವರು ಉನ್ನತಶೀಲರು  ಮತ್ತು ಮೇಧಾವಿಗಳಾಗುವ ಸೂಚನೆ ನೀಡುತ್ತದೆ.

ಎಡ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗುವುದಿಲ್ಲ.ಇವರಿಗೆ ಗೃಹಸ್ತ ಜೀವನದಲ್ಲಿ ಹಣದ ಅಭಾವವಿರುತ್ತದೆ.

ಗದ್ದದ ಮೇಲೆ ಮಚ್ಚೆ ಇರುವವರ  ಆರೋಗ್ಯವಂತರು ವ್ಯಕ್ತಿವಾದಿ,ಸ್ವತಃ ದಾರಿ ಕಂಡುಕೊಳ್ಳುವರು  ಮತ್ತು ಸಮಾಜದಿಂದ ದೂರವೇ ಉಳಿಯುತ್ತಾರೆ.

 

 

 

 

 

ಕಂಠದ ಮೇಲೆ ಮಚ್ಚೆ ಇರುವವರು ಜಾತಕದ ಪ್ರಕಾರ ಚಾಣಾಕ್ಷರಾಗಿರುತ್ತಾರೆ,  ಧನ ಗಳಿಕೆಯಲ್ಲಿ ಸಫಲರಾಗುತ್ತಾರೆ ಮತ್ತು ಸ್ವಾವಲಂಭಿಗಳಾಗಿರುತ್ತಾರೆ.

ಬಲಗೈನ ಅಂಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಲಿದೆ.ಎಡಗೈನ ಅಂಗೈ  ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ.

 

 

 

 

 

 

ಗುಪ್ತಾoಗದ ಮೇಲೆ ಮಚ್ಚೆ ಇದ್ದವರು ಹೆಚ್ಚು ಕಾಮಾಸಕ್ತರಾಗಿರುತ್ತಾರೆ ಮತ್ತು ಅನೇಕ ಸ್ತ್ರೀ ಅಥವಾ ಪುರುಷರೊಂದಿಗೆ ಸಂಬಂಧ ಬೆಳೆಸಿರುತ್ತಾರೆ.

ಈ ಪ್ರಕಾರವಾಗಿ ಮಚ್ಚೆಗಳು ಕೂಡ ಶುಭ ಅಶುಭದ ಸಂಕೇತವಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top