ಆರೋಗ್ಯ

ಮನುಷ್ಯನ ದೇಹದಲ್ಲಿರುವ ಎಲ್ಲಾ ಚಕ್ರಗಳಿಗೂ ಆಸರೆ ಮೂಲಾಧಾರ ಚಕ್ರ ಈ ಚಕ್ರ ಏರುಪೇರಾದ್ರೆ ಈ ಖಾಯಿಲೆಗಳು ಬರ್ತವೆ !

ಮನುಷ್ಯನ ದೇಹದಲ್ಲಿರುವ ಎಲ್ಲಾ ಚಕ್ರಗಳಿಗೂ ಆಸರೆ ಮೂಲಾಧಾರ ಚಕ್ರ.

 

 

 

 

 

 

 

 

ನಮ್ಮ ದೇಹದಲ್ಲಿ ಒಟ್ಟು ಏಳು ಚಕ್ರಗಳಿವೆ. ಅವುಗಳಿಂದಲೇ ಮೂಲಾಧಾರ ,ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ ಮತ್ತು ಸಹಸ್ರರ ಎಂಬ ಚಕ್ರಗಳು.

ಇಂದು ನಾವು ಮೂಲಾಧಾರ ಚಕ್ರದ ಮಹತ್ವವನ್ನು ತಿಳಿಯೋಣ ಬನ್ನಿ …

 

ಪ್ರತಿ ಚಕ್ರವನ್ನು ಹಾಗೂ ಸೂಕ್ಷ್ಮ ದೇಹವನ್ನು ಪ್ರಚೋದಿಸಲು ಯೋಗದಲ್ಲಿ ಹಲವು ವಿಧಾನಗಳಿವೆ .ಉದಾಹರಣೆಗೆ ಆಸನ, ಪ್ರಾಣಾಯಾಮ, ಮುದ್ರಾ, ಬಂಧ ಮತ್ತು ಹಠಯೋಗ .

ಮೂಲಾಧಾರ ಚಕ್ರ.

 

ಮೂಲಾ ಎಂದರೆ ಮದ್ಯ, ಬೇರು, ಉಗಮ ಸ್ಥಾನ ಎಂದು ಸಹ ಕರೆಯಬಹುದು. ಆಧಾರವೆಂದರೆ ಸ್ಥಳ ,ಆಸರೆ ಎಂದರ್ಥ. ಇದನ್ನು ಒಟ್ಟಾಗಿ ಮೂಲ ಸ್ಥಳ ಅಥವಾ ಶಕ್ತಿಯ ಕೇಂದ್ರ ಬಿಂದು, ಶಕ್ತಿಯ ಸ್ಥಳ ಎಂದು  ಸಹ ಉಲ್ಲೇಖಿಸಬಹುದಾಗಿದೆ.

ಮುಂದಿನ ಎಲ್ಲ ಚಕ್ರಗಳಿಗೂ ಇದೇ ಆಧಾರ. ಪಂಚ ಪ್ರಾಣಗಳಲ್ಲಿ ಒಂದಾದ ಅಪಾನವಾಯು ಈ ಚಕ್ರದ ಮೂಲ. ಈ ಚಕ್ರವು ಗುದದ್ವಾರದಿಂದ ಎರಡು ಬೆರಳಿನಷ್ಟು ಮೇಲೆ ಜನನೇಂದ್ರಿಯದಿಂದ ಎರಡು ಬೆರಳುಗಳಷ್ಟು ಕೆಳಗೆ ಇರುವ ಮದ್ಯದ ಸ್ಥಳದಲ್ಲಿ ಇರುತ್ತದೆ . ಬೆನ್ನು ಮೂಳೆಯ ಹತ್ತಿರ ಮತ್ತು ಬೆನ್ನು ಹುರಿಯಲ್ಲಿ ಈ  ಚಕ್ರವಿದೆ.

 

 

 

 

 

 

 

 

ಇದೇ ಮೂಲ ಚಕ್ರ ಆದ್ದರಿಂದ ಇದೇ ಬದುಕುವುದಕ್ಕೆ ಮೂಲ ಅರ್ಥವಾಗಿ ಒಬ್ಬ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎನ್ನುವ ಜ್ಞಾನ ಮತ್ತು ಬುದ್ಧಿ ಇದರಿಂದಲೇ ಹುಟ್ಟುವುದು. ಈ ಭೂಮಿಯ ಮೇಲೆ ನಾವು  ಜೀವಿಸಬೇಕು ಎನ್ನುವ ಬುದ್ಧಿಯೂ ಸಹ ಈ ಮೂಲಾಧಾರ ಚಕ್ರದಿಂದಲೇ ಬರುವುದು. ಇದು ಕೆಂಪು ಬಣ್ಣದಲ್ಲಿದೆ. ನಾನು ಸುರಕ್ಷಿತವಾಗಿದ್ದೇನೆ. ನನಗೆ ಯಾವುದೇ ತೊಂದರೆಯಾಗಿಲ್ಲ . ನಾನು ಕ್ಷೇಮವಾಗಿದ್ದೇನೆ ಎಂದರೆ ಅದಕ್ಕೆ ಮೂಲಾಧಾರ ಚಕ್ರದ ಸಮತೋಲನವೇ ಕಾರಣ.

ಇದರ ಬೀಜ ಮ೦ತ್ರ  “ಲ೦” . ಬ್ರಹ್ಮ ಈ ಚಕ್ರದ ದೇವನಾಗಿದ್ದಾನೆ. ವ್ಯಕ್ತಿಯಲ್ಲಿ ಜನ್ಮಜಾತನಾಗಿ ಕ್ರೂಢೀಕರಣಗೊ೦ಡು ಲೈಂಗಿಕ ಆಸೆ, ಆಕಾಂಕ್ಷೆಗಳು, ಮೂಲಾಧಾರ ಚಕ್ರದಲ್ಲಿರುವ ಬ್ರಹ್ಮ ಗ್ರಂಥಿಯಲ್ಲಿ ಅಡಗಿರುತ್ತವೆ.

ಆಸೆ, ಹೆದರಿಕೆ, ಕೋಪ, ಗಾಬರಿ ,ಉದ್ದೀಪನ ಮತ್ತು  ಆಕ್ರಮಣಕಾರಿತನ ಇತ್ಯಾದಿ ಈ ಚಕ್ರದ ಹತೋಟಿಯಲ್ಲಿ ಇರುತ್ತವೆ.

 

ಪ್ರಯೋಜನಗಳು.

 

 

 

 

 

 

 

ಈ ಚಕ್ರದ ಮೇಲೆ ಧ್ಯಾನಿಸಿ ಪೃಥ್ವಿ ತತ್ವದ ಕೊರತೆಯನ್ನು ಅಂದರೆ ವ್ಯಕ್ತಿಯಲ್ಲಿ ಅತಿ ತೂಕ ಹಾಗೂ ಕಡಿಮೆ ತೂಕ ಉಳ್ಳಂತಹ ಸಮಸ್ಯೆಯನ್ನು   ಹೋಗಲಾಡಿಸಬಹುದು .

ಮೂಲಾಧಾರ ಚಕ್ರದ ಅಸ್ಥಿರತೆಯಿಂದ ಹುಟ್ಟಿಕೊಳ್ಳುವ ಕಾಯಿಲೆಗಳು ಮಲಬದ್ಧತೆ, ಕಾಲು ನೋವು, ಸಮಯಕ್ಕೆ ತಕ್ಕಂತೆ ಹಸಿವು ಬಾಯಾರಿಕೆ ಆಗದೇ ಇರುವುದು, ಸಂಧಿವಾತದಂತಹ  ಖಾಯಿಲೆಗಳು ಸಹ ಹುಟ್ಟಿಕೊಳ್ಳುವವು.  ಮೊಳಕೆ ರೋಗ , ಫಿಸ್ಟುಲಾ, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ಇದಕ್ಕೆ ಸೂಕ್ತ ಆಹಾರವನ್ನು ಸೇವಿಸುವುದು ಉತ್ತಮ .ಕೆಂಪು ಬಣ್ಣದ ತರಕಾರಿ ಮತ್ತು ಹಣ್ಣುಗಳಾದ ಸೇಬು ಕ್ಯಾರೆಟ್ ಬೀಟ್ರೂಟ್ ಪರಂಗಿ ಹಣ್ಣು ಕುಂಬಳ ಕಾಯಿ ಇವುಗಳನ್ನು ಸೇವಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top