ದೇವರು

ಒಂದು ಲೋಟ ನೀರಿನಿಂದ ಈ ಉಪಾಯಗಳನ್ನ ಪ್ರತಿದಿನ ಮಾಡ್ತಾ ಬಂದ್ರೆ ಜಾತಕದಲ್ಲಿರೋ ದೋಷಗಳು ದೂರವಾಗಿ ಕಷ್ಟಗಳು ನಿವಾರಣೆಯಾಗುತ್ತೆ

ಒಂದು ಲೋಟ ನೀರಿನಿಂದ ಮಾಡಬೇಕಾದ ಉಪಾಯಗಳು ಇದರಿಂದ ಆಗುವ ಲಾಭಗಳನ್ನು ತಿಳಿದುಕೊಳ್ಳಿ .

 

 

 

 

 

 

ಒಂದು ಲೋಟ ನೀರಿನಿಂದ ಈ ಉಪಾಯಗಳನ್ನು ನೀವು ಪ್ರತಿದಿನ ಮಾಡುತ್ತ ಬಂದರೆ ನಿಮ್ಮ ಜಾತಕದಲ್ಲಿರುವ ದೋಷಗಳು ದೂರವಾಗಿ ನಿಮ್ಮ ಜಾತಕ ಉತ್ತಮ ತಕವಾಗಿ ಬದಲಾಗುವುದು ಎಲ್ಲ ಕಷ್ಟಗಳು ನಿವಾರಣೆಯಾಗುವವು. ಜಾತಕದಲ್ಲಿ ಕಾಣಿಸಿಕೊಳ್ಳುವ ದೋಷ ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಜಾತಕ ದೋಷದಿಂದಾಗಿ ಎಷ್ಟು ಪ್ರಯತ್ನ ಪಟ್ಟರೂ ಸಹ ವೈಫಲ್ಯ ಬೆನ್ನು ಬಿಡುವುದಿಲ್ಲ.

ಆದರೆ ನಮ್ಮ ಗ್ರಂಥಗಳಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಜಾತಕ ದೋಷವನ್ನು ಸರಳ ಉಪಾಯಗಳಿಂದ ಕಡಿಮೆ ಮಾಡಿಕೊಂಡು ಸಫಲತೆಯನ್ನು ಯಶಸ್ಸನ್ನು ಕಾಣಬಹುದಾಗಿದೆ.

ಶಿವಪುರಾಣದ ಪ್ರಕಾರ ಪ್ರತಿ ದಿನ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ ಪೂಜೆ ಪ್ರಾರ್ಥನೆಯನ್ನು ಮಾಡುವುದರಿಂದ ಶಿವ ಪ್ರಸನ್ನನಾಗುತ್ತಾನೆ. ಭಕ್ತರು ಸಹ ಅವರ ಆಸೆಯನ್ನು ಶಿವ ಈಡೇರಿಸುತ್ತಾನೆ.

 

 

 

 

 

 

 

ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. “ ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ಸಹ ಜಪಿಸಬೇಕು.

ರಾತ್ರಿ ಮಲಗುವ ಸಮಯದಲ್ಲಿ ತಲೆದಿಂಬಿನ ಬದಿಯಲ್ಲಿ ತಾಮ್ರದ ಲೋಟದಲ್ಲಿ ನೀರನ್ನು ಇಟ್ಟು ಮಲಗಿ ಬೆಳಗ್ಗೆ ಎದ್ದ ತಕ್ಷಣ ಏಳು ಬಾರಿ ಆ ಲೋಟವನ್ನು ನೀರಿನ ಸಮೇತ ತಲೆಗೆ ಸುತ್ತಿಸಿದ ನಂತರ ಆ ನೀರನ್ನು ಒಂದು ಮುಳ್ಳಿನ ಗಿಡಕ್ಕೆ ಹಾಕಬೇಕು. ನಿಮ್ಮ ಮನೆಯ ಬಳಿ ಮುಳ್ಳಿನ ಗಿಡ ಇಲ್ಲ ಎಂದಾದರೆ ಬೇರೆ ಯಾವುದಾದರೂ ಗಿಡದ ಬುಡಕ್ಕೂ ಸಹ ಹಾಕಬಹುದು .

 

 

 

 

 

 

 

 

ಪ್ರತಿದಿನ ಬೆಳಗ್ಗೆ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ ಸ್ನಾನದ ನಂತರ ತಾಮ್ರದ ಲೋಟದಲ್ಲಿ ನೀರನ್ನು ಅರ್ಪಿಸಿ . ಆ ನೀರಿನೊಳಗೆ ಕೆಂಪು ಹೂವು, ಕುಂಕುಮ ಮತ್ತು  ಅಕ್ಕಿಯನ್ನು ಸೇರಿಸಿ ನಂತರ ಸೂರ್ಯದೇವನಿಗೆ ಅರ್ಪಿಸಬೇಕು.

 

 

 

 

 

 

 

“ಓಂ ಸೂರ್ಯಾಯ ನಮಃ” ಎಂಬ ಸೂರ್ಯನ ಮಂತ್ರವನ್ನು ಪಠಿಸಿರಿ. ಪ್ರತಿದಿನ ಹೀಗೆ ಮಾಡಿದರೆ ಸಮಾಜದಲ್ಲಿ ನಿಮಗೆ ಗೌರವ ಪ್ರಾಪ್ತಿಯಾಗಿ ಜಾತಕದ ಎಲ್ಲ ದೋಷಗಳು ಸಹ ಬಗೆಹರಿಯವು.

 

 

 

 

 

 

 

 

ಶುಭಮುಹೂರ್ತದಲ್ಲಿ ಅಶ್ವತ್  ಮರ ಅಂದರೆ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ವಿಷ್ಣುವಿನ ಒಂದು ರೂಪವೇ ಆಗಿರುವ ಅಶ್ವತ್ಥ ಮರದಲ್ಲಿ ಎಲ್ಲ ದೇವಾನುದೇವತೆಗಳು ಸಹ ವಾಸ ಮಾಡುತ್ತಾರೆ  ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪ್ರತಿದಿನ ಅಶ್ವಥ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಸುಖ ಶಾಂತಿ ಸಮೃದ್ಧಿ ಪ್ರಾಪ್ತಿಯಾಗಲಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top