ದೇವರು

ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ರೆ ,ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ರೆ 108 ಬಾರಿ ಕುಬೇರನ ಈ ಮಂತ್ರವನ್ನ ತಪ್ಪದೆ ಪಠಿಸಿ ಸಾಕು

ನೂರಾ ಎಂಟು ಬಾರಿ ಕುಬೇರನ ಈ ಮಂತ್ರವನ್ನು ಪಠಿಸಿದರೆ ಕುಬೇರರಾಗುವುದು ಖಂಡಿತವಾಗಿಯೂ ನಿಶ್ಚಿತ .

 

ಹಣ, ಸಂಪತ್ತು ನಿಮ್ಮ ಕಡೆಗೆ ಆಕರ್ಷಿಸಲು ಕುಬೇರ ಕುಬೇರ ಮಂತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈಗ ತಿಳಿದುಕೊಳ್ಳೋಣ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವತೆ ಮತ್ತು ದೇವರ ಸೃಷ್ಟಿಗೆ ಒಂದು ನಿರ್ದಿಷ್ಟವಾದ ಕಾರಣ ಹಾಗೂ ಉದ್ದೇಶ ಇರುತ್ತದೆ ಲಕ್ಷ್ಮೀ ದೇವಿಯು ಸಂಪತ್ತಿನ ಅಧಿದೇವತೆಯಾಗಿದ್ದಾಳೆ ಕುಬೇರ ದೇವನು ಲಕ್ಷ್ಮಿ ದೇವಿಯ ಪುರುಷನ ಪ್ರತಿರೂಪ ಎಂದು ಹೇಳಲಾಗುತ್ತದೆ .

 

 

ಪುರಾಣದ ಪ್ರಕಾರ ಕುಬೇರ ಮಂತ್ರ ಯಾವುದು ಯಾವ ಮಂತ್ರದ ಮೂಲಕ ಹಣ ಹಾಗೂ ಸಂಪತ್ತನ್ನು ಆಕರ್ಷಿಸಬಹುದು ಎಂಬುದನ್ನು ನಾವು ತಿಳಿದುಕೊಳ್ಳೋಣ ..

ಜೀವನದ ಗುಣಮಟ್ಟ ಸುಧಾರಿಸಲು ಶ್ರೀಮಂತರಾಗಬೇಕು ಎಂಬ ಅಪೇಕ್ಷೆ ಪ್ರತಿಯೊಬ್ಬ ಮನುಷ್ಯನಲ್ಲೂ ಸಹ ಇದ್ದೇ ಇರುತ್ತದೆ ಜೀವನದಲ್ಲಿ ಹಣ ಮತ್ತು ಸಂಪತ್ತನ್ನು ಸಂಪಾದಿಸಲು ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ ಆದರೂ ಸಹ ಒಮ್ಮೊಮ್ಮೆ ನಮ್ಮ ಪ್ರಾಮಾಣಿಕತೆಗೆ ಅಥವಾ ಕಷ್ಟ ಪಟ್ಟ ಶ್ರಮ ಮತ್ತು ದುಡಿಮೆಗೆ ತಕ್ಕ ಫಲ ಸಿಗುವುದಿಲ್ಲ.

ಲಕ್ಷ್ಮಿ ದೇವತೆಯಿಂದ ಕುಬೇರನು ವರ ಪಡೆದು ಸಂಪತ್ತಿಗೆ ಪುರುಷ ರೂಪದ ಅಧಿಪತಿಯಾದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ ಲಕ್ಷ್ಮಿ ಪೂಜೆ ಹೇಗೋ ಅದೇ ರೀತಿ ಕುಬೇರನ ಪೂಜೆಯಿಂದ ಸಹ ಹಣ ಸಂಪತ್ತನ್ನು ನಿಮ್ಮ ಕಡೆಗೆ ಆಕರ್ಷಿಸಬಹುದು .

ಪ್ರಾಮಾಣಿಕತೆಯಿಂದ ಇದ್ದು ಹಣದ ಸಮಸ್ಯೆ ನಿಮಗೆ ಇದ್ದರೆ ಕುಬೇರ ಅಂತ ಬಹಳಷ್ಟು ಸಹಾಯ ಮಾಡುತ್ತದೆ ನಂಬಿಕೆ ಇರಬೇಕು ಅಷ್ಟೇ ನಂಬಿಕೆ ಶ್ರದ್ಧೆ ಭಕ್ತಿ ಏಕಾಗ್ರತೆಯಿಂದ ಯಾವುದೇ ಕೆಲಸವನ್ನು ಮಾಡಿದರೂ ಸಹ ಅದರ ಫಲವು ನಮಗೆ ದೊರೆಯುತ್ತದೆ.

 

 

ಕುಬೇರ ಮಂತ್ರಗಳು ಹೀಗಿದೆ..

 

“ ಓಂ ಶ್ರೀಮ್ ಹ್ರೀಮ್ ಕ್ಲೀಮ್ ಶ್ರೀಮ್ ಕ್ಲೀಮ್ ವಿಠೇಶ್ವರಾಯ ನಮಃ “

“ ಓಂ ಹ್ರೀಮ್ ಶ್ರೀಮ್ ಕ್ರೀಮ್  ಶ್ರೀಮ್ ಕುಭೆರಾಯ ಅಷ್ಟ-ಲಕ್ಷ್ಮೀ ಮಾಮಾ ಗ್ರಿಯೆ ಧನಮ್ ಪುರಾಯಾ ಪುರಾಯಾ ನಮಃ”

“ಓಂ ಯಕ್ಷಾಯ ಕುಭೇರಾಯ ವೈಶ್ರವನಾಯ ಧನ ಧಾನ್ಯಧಿಪತಯೇ ಧನ ಧಾನ್ಯಸಮೃದ್ಧಿಮ್ ಮೇ ದೇಹಿ ದಸಾಯ ಸ್ವಾಹ ”

 

ಪೂಜಾ ವಿಧಾನ.

 

1.ಮನೆಯಲ್ಲಿ ಕುಬೇರ ಯಂತ್ರಕ್ಕೆ ಪೂಜೆ ಮಾಡುತ್ತಾ ಕುಬೇರ ಮಂತ್ರವನ್ನು ಪಠಿಸಬಹುದು. ಕುಬೇರ ಯಂತ್ರವು  ವಿವಿಧ ಗಾತ್ರಗಳಲ್ಲಿ ತಾಮ್ರದ ಲೋಹದ ತಟ್ಟೆಯ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ.

2.ಸ್ನಾನ ಮಾಡಿದ ನಂತರ ಕುಬೇರ ಯಂತ್ರಕ್ಕೆ ನಾಲ್ಕು ಮೂಲೆಗಳಲ್ಲಿ ಮತ್ತು ಮದ್ಯ ಭಾಗದಲ್ಲಿ  ಅರಿಶಿನ ಕುಂಕುಮವನ್ನು ಸಮರ್ಪಿಸಬೇಕು ಅಂದರೆ ಹಚ್ಚಬೇಕು .

3.ನಂತರ ಹಳದಿ ಹಕ್ಕಿ ಹಾಗೂ ಹಳದಿ ಹೂವುಗಳನ್ನು ಕುಬೇರ ಮಂತ್ರದ ಮುಂದೆ ಒಂದು ತಟ್ಟೆಯಲ್ಲಿ ಇಟ್ಟು ಕುಬೇರನಿಗೆ ಸಮರ್ಪಿಸಬೇಕು.

4.ಪೂಜಾ ಸಮಯ ಅಥವಾ ಪೂಜಾ ಮಂತ್ರ ಪಠಿಸುವಾಗ ದೈಹಿಕ ಶುದ್ಧತೆಯ ಜೊತೆಗೆ ಮಾನಸಿಕ ಶುದ್ಧ ಸ್ಥಿತಿಯನ್ನು ಸಹ ಕಾಪಾಡಿಕೊಳ್ಳಬೇಕು .

5.ಒಳ್ಳೆಯ ಫಲಿತಾಂಶಕ್ಕೆ ಕುಬೇರ ಮಂತ್ರಗಳನ್ನು ನೂರಾ ಎಂಟು ಬಾರಿ ಪಠಿಸಿ ಮತ್ತು ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಇಪ್ಪತ್ತ್ ಒಂದು ದಿನಗಳವರೆಗೆ ಇದೇ ಪ್ರಕ್ರಿಯೆಯನ್ನು ಮುಂದುವರಿಸಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top