ದೇವರು

ವಿಜ್ಞಾನಿಗಳಿಗೂ ಕೂಡ ಆಶ್ಚರ್ಯಕಾರಿಯಾಗಿರುವ ಈ ದೇವಾಲಯದ ರಹಸ್ಯಗಳನ್ನು ಇನ್ನು ಭೇದಿಸಲು ಸಾಧ್ಯವಾಗಿಲ್ಲ

ವಿಜ್ಞಾನಿಗಳಿಗೂ ಕೂಡ ಆಶ್ಚರ್ಯಕಾರಿಯಾಗಿರುವ ಈ  ದೇವಾಲಯದ ರಹಸ್ಯಗಳು. ಆ ರಹಸ್ಯವನ್ನು ಇನ್ನೂ ಕಂಡು ಹಿಡಿಯಲು ಆಗಿಲ್ಲ ಈಗಿರುವ ವಿಜ್ಞಾನಿಗಳಿಗೆ.

ಪುರಾತನ ಕಾಲದಲ್ಲಿ ಅದೆಷ್ಟು ದೊಡ್ಡ ವ್ಯಕ್ತಿಗಳು ತುಂಬಾನೇ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ, ಅವು ಈಗ ಕಣ್ಮರೆಯಾಗಿವೆ. ಆದರೆ ಆ ದಿನಗಳಲ್ಲಿಯೂ ಕೂಡ ವಿಜ್ಞಾನ ತುಂಬಾ ಅಭಿವೃದ್ಧಿ ಹೊಂದಿತ್ತು ಎನ್ನುವ ವಿಷಯವನ್ನು ಯಾರೂ ಕೂಡ ವಿರೋಧ ಮಾಡುವ ಹಾಗಿಲ್ಲ. ಇಂದು ನಾವು ಆ ಪುರಾತನ ಶಿವ ಮಂದಿರದ ರಹಸ್ಯಗಳನ್ನು ತಿಳಿದುಕೊಳ್ಳೋಣ.

 

 

ಇದನ್ನು ಪರಿಶೀಲಿಸಿದ ವಿಜ್ಞಾನಿಗಳಿಗೆ ಶಾಕ್ ಆಗಿದೆ . ಯಾಕೆಂದರೆ ಅಂತಹ ಒಂದು ದೇವಾಲಯವನ್ನು ನಿರ್ಮಿಸಬೇಕೆಂದರೆ ಈ ದಿನಗಳಲ್ಲಿ ಆಧುನಿಕ ವಿಜ್ಞಾನಕ್ಕೂ  ಕೂಡ ದೊಡ್ಡ ಸವಾಲಿನ ಹಾಗೆ ಮತ್ತೆ ಆ ತರಹದ ಆ ದೇವಾಲಯವನ್ನು ಆ ದಿನಗಳಲ್ಲಿಯೂ ಕೂಡ ಹೇಗೆ ನಿರ್ಮಿಸುತ್ತಾರೆ. ಅದರ ವಿಶೇಷತೆ ಏನು ? ಆದರೆ ವಿಜ್ಞಾನಿಗೂ ಕೂಡ ಆಶ್ಚರ್ಯ ಪಡಿಸುವ ಆ ವಿಷಯಗಳು ಇಲ್ಲಿ ಏನಿದೆ ?  ಆ ವಿವರಗಳನ್ನು ಇಂದು ನಾವು ತಿಳಿದುಕೊಳ್ಳೋಣ..

ಈ ದೇವಾಲಯವು ಮಹಾರಾಷ್ಟ್ರ ರಾಜ್ಯದಲ್ಲಿನ ಔರಂಗಾಬಾದ್ ಜಿಲ್ಲೆಯಲ್ಲಿದೆ. ಇದನ್ನು ಕೈಲಾಸ ಮಂದಿರ ಎಂದು ಕರೆಯುತ್ತಾರೆ. ಈ ದೇವಾಲಯವು ವಿಜ್ಞಾನಿಗಳನ್ನು ಅನಿಶ್ಚಿತತೆಯಲ್ಲಿ ಮುಳುಗಿಸಿದೆ. ಯಾಕೆಂದರೆ ಈ ದೇವಾಲಯದ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯಗಳು ಬೇರೆ ಬೇರೆಯದಾಗಿದೆ. ಕೆಲವು ಶಾಸ್ತ್ರಜ್ಞರು ಈ ದೇವಾಲಯವು 1900 ವರ್ಷಗಳ ಪುರಾತನ ದೇವಾಲಯವನ್ನು ಭಾವಿಸಿದರೆ ಇನ್ನು ಕೆಲವು ಶಾಸ್ತ್ರಜ್ಞರು ಈ ದೇವಾಲಯವು ಆರು ಸಾವಿರ ವರ್ಷಗಳ ಪುರಾತನ ವಾದುದೆಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಎಲ್ಲದಕ್ಕಿಂತಲೂ ಆಶ್ಚರ್ಯ ಪಡಿಸುವ ವಿಷಯ ಏನಪ್ಪಾ ಅಂದ್ರೆ ಈ ದೇವಾಲಯವನ್ನು ಇಟ್ಟಿಗೆಯಲ್ಲಾಗಲಿ ಕಲ್ಲಿನಿಂದಾಗಲಿ ಜೋಡಿಸಿ ನಿರ್ಮಿಸಿಲ್ಲ.

ಕೇವಲ ಒಂದೇ ಒಂದು ಬಂಡೆ ಕಲ್ಲಿನಿಂದ ಕೆತ್ತನೆ  ಮಾಡುತ್ತಾ ಈ ಸುಂದರ ದೇವಾಲಯವನ್ನು ನಿರ್ಮಿಸಿದ್ದಾರೆ. ಆದ್ದರಿಂದಲೇ ಈ ದೇವಾಲಯವನ್ನು ಯಾವಾಗ ನಿರ್ಮಿಸಿದ್ದಾರೆ ಎಂದು ಯಾರಿಗೂ ಸಹ ಹೇಳಲಾಗುತ್ತಿಲ್ಲ. ಯಾಕೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಉಪಯೋಗಿಸಿದ ಕಲ್ಲುಗಳನ್ನು  ಕಾರ್ಬನ್ ಡೇಟಿಂಗ್ ಪರೀಕ್ಷೆ ಮಾಡಿದಾಗ ಆ ಬಂಡೆಗಲ್ಲು ಅತಿ ಪುರಾತನ ಕಾಲದ್ದೆಂದು ತಿಳಿಯುತ್ತದೆ. ಆದರೆ ಈ ದೇವಾಲಯವನ್ನು ಯಾವಾಗ ನಿರ್ಮಿಸಿದ್ದಾರೆ ಎಂದು ಗೊತ್ತಾ ?

 

 

ಈ ದೇವಾಲಯದಲ್ಲಿ ನಮಗೆ ಆಧಾರ ಸಿಗುವಂತಹ ಯಾವುದೇ ರೀತಿಯ ವಸ್ತುಗಳು ಕೂಡ ಇಲ್ಲ. ಈ ದೇವಾಲಯವನ್ನು ನಿರ್ಮಿಸುವುದಕ್ಕೆ ಸುಮಾರು ಹದಿನೆಂಟು ವರ್ಷಗಳು ಬೇಕಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ. ಆದರೆ ವಿಜ್ಞಾನಿಗಳು ಮಾತ್ರ ನೂರು ಅಡಿ ಎತ್ತರವಿರುವ  ಇಂತಹ ಮಹಾಶಿವನ ದೇವಾಲಯವನ್ನು ಹದಿನೆಂಟು ವರ್ಷಗಳಲ್ಲಿ ನಿರ್ಮಿಸುವುದೆಂದರೆ ಈ ದಿನಗಳಲ್ಲಿ ಇರುವ ಟೆಕ್ನಾಲಜಿಗೂ ಕೂಡ ತುಂಬಾ ಕಷ್ಟ ಎಂದು ಹೇಳುತ್ತಿದ್ದಾರೆ. ಇದಕ್ಕಿಂತಲೂ ಇನ್ನೊಂದು ವಿಚಿತ್ರವಾದ ವಿಷಯ ಏನೆಂದರೆ.

ಈ ದೇವಾಲಯವನ್ನು ಕೆಳಗಡೆಯಿಂದ ಮೇಲೆ ನಿರ್ಮಿಸಿಲ್ಲ. ಮೇಲಿನಿಂದ ಕೆಳಗಡೆಗೆ ನಿರ್ಮಿಸಿದ್ದಾರೆ. ಅಂದರೆ ಮೇಲಿಂದ ಕೆಳಗಡೆ ಕೆತ್ತನೆ ಮಾಡುತ್ತಾ ನಿರ್ಮಿಸಿದ್ದಾರೆ. ಒಂದು ವೇಳೆ ಹಾಗೆಯೇ   ಆಗಿದ್ದಲ್ಲಿ ಈ ದೇವಾಲಯವನ್ನು ನಿರ್ಮಿಸುವುದಕ್ಕೆ ಐದು ಲಕ್ಷ ಟನ್ಗಳಷ್ಟು ಕಲ್ಲನ್ನು ಹೊರಗೆ ತೆಗೆಯಬೇಕಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡುತ್ತಾ ಇದನ್ನು  ಹದಿನೆಂಟು ವರ್ಷಗಳಲ್ಲಿ ಪೂರ್ತಿ ಮಾಡಿದ್ದಲ್ಲಿ ಪ್ರತಿದಿನ ಒಬ್ಬ ವ್ಯಕ್ತಿ ನೂರ ಐವತ್ತು ಟನ್ಗಳಷ್ಟು ಕಲ್ಲುಗಳನ್ನು ಹೊರಗೆ ತೆಗೆಯಬೇಕಾಗುತ್ತದೆ. ಆದರೆ ಇದು ಅಸಂಭವ. ಒಂದು ವೇಳೆ ಈಗ ಇಂತಹ ಒಂದು ಈ ದೇವಾಲಯವನ್ನು ಈಗಿನ ಕಾಲದಲ್ಲಿ ನಿರ್ಮಿಸಬೇಕು ಎಂದರೆ ಹದಿನೆಂಟು ವರ್ಷಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ .

ಯಾಕೆಂದರೆ ಇಂತಹ ದೇವಾಲಯಗಳನ್ನು ನಿರ್ಮಿಸಬೇಕೆಂದರೆ ಮೃದುವಾಗಿ ತುಂಬಾ  ಜಾಗ್ರತೆಯಿಂದ ನೈಪುಣ್ಯತೆಯಿಂದ ಕೆತ್ತನೆ ಮಾಡಬೇಕಾಗುತ್ತದೆ. ವಿಜ್ಞಾನಿಗಳು ನಮ್ಮ ವೇದಗಳಲ್ಲಿ ಒಂದು ಅಸ್ತ್ರದ  ಬಗ್ಗೆ ಹೇಳುತ್ತಾರೆ. ಆ ಅಸ್ತ್ರವನ್ನು ಬಳಸಿ ನಿರ್ಮಿಸಿರಬಹುದು. ಆ ಅಸ್ತ್ರದ ಹೆಸರೇ ಬಹುಮಾಸ್ತ್ರ. ಈ ಅಸ್ತ್ರವನ್ನು ಉಪಯೋಗಿಸಿಕೊಂಡು ಕಲ್ಲನ್ನು ಕೂಡ ಅರ್ಥ ಪೂರ್ಣವಾಗಿ ಬದಲಾಯಿಸಬಹುದು.

ಆದ್ದರಿಂದ ಈ ದೇವಾಲಯವನ್ನು ಹಾಗೆ ನಿರ್ಮಿಸುವ ಅವಕಾಶ ಇದೆ. ಈ ದೇವಾಲಯದಲ್ಲಿ ಒಂದು ರಹಸ್ಯವೂ ಕೂಡ ಅಡಗಿದೆ. ಆ ರಹಸ್ಯವೇ ಈ ದೇವಾಲಯದ ಕೆಳಗಡೆ ಹಾದು ಹೋಗುವ ಗುಹೆಗಳು. ವಾಸ್ತವವಾಗಿ 1976 ನೇ ವರ್ಷದಲ್ಲಿ ಇಂಗ್ಲೆಂಡ್ ದೇಶದ ಆಧ್ಯಾತ್ಮಿಕ ತಜ್ಞ  ಎಮ್ ಆ್ಯಂಡ್ರಿಕ್  ಒಂದು ಪುಸ್ತಕವನ್ನು ಬರೆಯುತ್ತಾರೆ. ಆ ಪುಸ್ತಕದಲ್ಲಿ ತನ್ನ ಅನುಭವಗಳನ್ನು ಹೇಳುತ್ತಾರೆ. ಈ ಕೈಲಾಸ ಮಂದಿರದ ಕೆಳ ಭಾಗದಲ್ಲಿರುವ ಗುಹೆಗಳನ್ನು ಕೂಡ ಪರಿಶೀಲಿಸಿದ್ದರೆ.

 

 

ತನಗೆ ಅಲ್ಲಿ ಒಬ್ಬ ವ್ಯಕ್ತಿ ಭೇಟಿ ಮಾಡಿದ್ದರೆಂದು ಅವರೊಂದಿಗೆ ಆ ಕೆಳಗಿರುವ ಗುಹೆಗಳ ಒಳಗೆ ಹೋಗಿದ್ದರೆಂದು ಅಲ್ಲಿ ಒಂದು ದೇವಾಲಯವಿದೆ ಎಂದು ಅವರು ಹೇಳಿದ್ದಾರೆ. ಈ ಪುಸ್ತಕವನ್ನು ಓದಿದ ನಂತರ ತುಂಬಾ ಮಂದಿ ವಿಜ್ಞಾನಿಗಳು ಇದರಲ್ಲಿರುವ ರಹಸ್ಯಗಳನ್ನು ಭೇದಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ನಂತರದ ಸಮಯದಲ್ಲಿ ಈ ಗುಹೆಗಳನ್ನು ಸ್ವತಃ ಸರ್ಕಾರ ಮುಚ್ಚಿ ಹಾಕಿದೆ. ಅದು ಈಗಲೂ ಕೂಡ ಮುಚ್ಚಲ್ಪಟ್ಟಿದೆ.

ಕೊನೆಯದಾಗಿ ಆ ಗುಹೆಗಳಲ್ಲಿ ಏನಿದೆ ? ಅಲ್ಲಿ ಸಂಶೋಧನೆ ಮಾಡಲು ಸರ್ಕಾರ ಏಕೆ ನಿಷೇಧಿಸುತ್ತದೆ ? ನಮ್ಮ ಪುರಾತನ ವಿಜ್ಞಾನ ಈಗಿರುವ ವಿಜ್ಞಾನಕ್ಕಿಂತ ಹೆಚ್ಚಿನದಾಗಿ ಅಭಿವೃದ್ಧಿ ಹೊಂದಿತ್ತು ಎಂದು ಈ ದೇವಾಲಯವನ್ನು ನೋಡಿದರೆ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಅಷ್ಟೇ ಅಲ್ಲ ಈ ದೇವಾಲಯದ ಕೆಳಗಡೆ ಇರುವ ಗುಹೆಗಳಲ್ಲಿ ಯಾವುದಾದರೂ ಆಧಾರವೂ ಕೂಡ ಸಿಗಬಹುದು.

ಯಾಕೆಂದರೆ ನಮ್ಮ ಹಿಂದೂ ಧರ್ಮದಲ್ಲಿ ಹೇಳುತ್ತಿರುತ್ತಾರೆ. ಆ ಮಹಾಶಿವನ ಆಧಾರಗಳು ಈಗಲೂ ಈ ಪ್ರಪಂಚದಲ್ಲಿ ಹುಡುಕಿದರೆ ತುಂಬಾ ಕಡೆ ಸಿಗುತ್ತದೆ ಎಂದು. ಆದರೆ ಅದನ್ನು ನಾವು ನೋಡಬೇಕು ಎಂದರೆ ನಮ್ಮ ಮನಸ್ಸಿನಲ್ಲಿಯೂ ಕೂಡ ಆ ಮಹಾಶಿವನು ಖಂಡಿತವಾಗಿಯೂ ಇರಲೇಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top