ಆರೋಗ್ಯ

ಗ್ರಾಹಕರೇ ಹುಷಾರ್ ರಿಫೈನ್ಡ್ ಆಯಿಲ್ ದೇಹಕ್ಕೆ ಅಪಾಯಕಾರಿಯಾಗಬಹುದು!!!

 

 

 

 

 

 

 

ದಿನವೂ ಟಿವಿ ಗಳಲ್ಲಿ ವಿಧ ವಿಧವಾದ ಬ್ರಾಂಡ್ ಗಳ ಜಾಹಿರಾತುಗಳಿಗೆ ಮಾರು ಹೋಗಿ ನಮ್ಮ ದಿನ ನಿತ್ಯದ ಬಳಕೆಗಲ್ಲಿ ರಿಫೈನ್ಡ್ ಆಯಿಲ್ ಗಳನ್ನೂ ಹೆಚ್ಚಾಗಿ ಬಳಸಲಾಗುತ್ತಿದೆ. ಜಾಹಿರಾತುಗಳು ಸಹ ಈ ತರಹದ ಆಯಿಲ್ ಗಳನ್ನೂ ಸೇವಿಸಿದರೆ ಕೊಲೆಸ್ಟ್ರಾಲ್ ಹಾಗು ಹೃದಯ  ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು ಎಂಬ ತಪ್ಪು ಕಲ್ಪನೆಯನ್ನು ಜನರಲ್ಲಿ ಉಂಟು ಮಾಡುತ್ತಿದೆ. ನಿಜವಾಗಿಯೂ ಈ ರಿಫೈನ್ಡ್ ಆಯಿಲ್ ಗಳ ಸೇವನೆ ಆರೋಗ್ಯಕರವ ಅಲ್ಲವಾ ಮುಂದೆ ಓದಿ…

 

ಸಂಸ್ಕರಣಾ ಕ್ರಿಯೆ: ( ರಿಫೈನಿಂಗ್):

 

 

 

 

 

 

 

 

ತರಕಾರಿ ಹಾಗು ಬೀಜಗಳಿಂದ ತೆಗೆಯುವ ಕಚ್ಚಾ ತೈಲವನ್ನು ವಿಧ ವಿಧವಾದ ಪರೀಕ್ಷೆಗೊಳಪಡಿಸಿ ಅವುಗಳ ಅನಗತ್ಯ ಬಣ್ಣ, ರುಚಿ, ವಾಸನೆಗಳನ್ನು ತೆಗುದುಹಾಕಿ ಜೀವಿತಾವಧಿಯನ್ನು ಹೆಚ್ಚಿಸುವ ಒಂದು ಕ್ರಿಯೆ. ಈ ಪ್ರಕ್ರಿಯೆಯಲ್ಲಿ ತೈಲವು ತನ್ನ ನೈಸರ್ಗಿಕ ರುಚಿ, ವಾಸನೆ, ಹಾಗು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಕಳೆದುಕೊಳ್ಳುತ್ತದೆ.

ಮೊದಲನೆಯದಾಗಿ ಕಚ್ಚಾ ತೈಲಕ್ಕೆ ನೀರು, ಲವಣ ಅಥವಾ ಆಮ್ಲ ( ಆಸಿಡ್) ಸೇರಿಸಿ ಅದರಲ್ಲಿರುವ ಮೇಣ, ಫಾಸ್ಫೇಟ್ ಹಾಗು ಇತರ ಕಲ್ಮಶಗಳನ್ನು ತೆಗೆಯಲಾಗುತ್ತದೆ. ನಂತರ ತೈಲವನ್ನು ನ್ಯೂಟ್ರಲೈಜ್ ಗೊಳಿಸಿ ಅದಿಕ್ಕೆ ಕ್ಷಾರ ( alkali) ಬೆರೆಸಿ ೧೮೦ ಡಿಗ್ರಿ F ವರೆಗೂ ಕುದಿಸಿ ಸೆಪರೇಟರ್  ಮೂಲಕ ಸೋಪ್ ಅನ್ನು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಡಿಸಿದ ತೈಲವನ್ನು ಭೌತಿಕ ಪರಿಷ್ಕರಣೆಗೊಳಪಡಿಸಿ ವ್ಯಾಕೂಮ್ ಸ್ಟೀಮ್ ಡಿಸ್ಟಿಲೇಷನ್ ( ನಿರ್ವಾತ ಉಗಿ ಇಳಿಸುವಿಕೆ) ಪ್ರಕ್ರಿಯೆ ಮೂಲಕ ವಾಸನೆಯನ್ನು ತೆಗೆದು ಹಾಕಿ ತಣ್ಣಗಾಗಲು ಬಿಡುತ್ತಾರೆ.

 

 

 

 

 

 

 

 

ಹೀಗೆ ತಣ್ಣಗಾದ ತೈಲದಿಂದ ಗಟ್ಟಿಯಾದ ಕೊಬ್ಬನ್ನು ಶೋಧಿಸಿ ತೆಗಿಯಲಾಗುತ್ತದೆ. ಸೋಸಿದ ತೈಲಕ್ಕೆ ಮಣ್ಣನ್ನು (ಕ್ಲೇ) ಬೆರೆಸಿ ಪುನಃ ೧೪೦ ಡಿಗ್ರಿ F ನಲ್ಲಿ ಕುದಿಸಿ ಅದರ ಬಣ್ಣವನ್ನು ತೆಗೆಯಲಾಗುತ್ತದೆ.ಬಣ್ಣ ರಹಿತ ತೈಲವನ್ನು ಹೈಡ್ರೋಜನ್ ಗ್ಯಾಸ್ ಗಳ ಮೂಲಕ ನಿಕೆಲ್ ಸಹಾಯದಿಂದ ಹೈಡ್ರೋಜೀನೇಷನ್ ಪ್ರಕ್ರಿಯೆಗೊಳಪಡಿಸಿ ಸರಿಸುಮಾರು ೨೦೦ ಡಿಗ್ರಿ ತಾಪಮಾನದವರೆಗೂ ಕುದಿಸಿ ಆರಿಸಿ ಬಾಟಲ್ ಗಳಲ್ಲಿ ತುಂಬಲಾಗುತ್ತದೆ.

ಕೊನೆಯದಾಗಿ ನಮಗೆ ಸಿಗುವುದು ಬಣ್ಣ, ವಾಸನೆ, ರುಚಿ ರಹಿತ  ನೈಸರ್ಗಿಕವಾಗಿ ಹಾಗು ಅರೋಗ್ಯ ಪೂರ್ಣ ದೃಷ್ಟಿಇಂದ  ತನ್ನ ತನವನ್ನು ಕಳೆದು ಕೊಂಡ ನಿಷ್ಪ್ರಯೋಜಕ ಎಣ್ಣೆ. ಇದನ್ನು ನಾವು ಅರೋಗ್ಯಕ್ಕೆ  ಒಳ್ಳೆಯದೆಂದು ಸೇವಿಸುತ್ತಾ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಖಾಯಿಲೆಗಳ ದಾಸರಾಗುತ್ತಿದ್ದೇವೆ. ಈಗಲಾದರೂ ಸಂಸ್ಕರಿಸಿದ ಎಣ್ಣೆಯನ್ನು ತ್ಯಜಿಸಿ ಕೋಲ್ಡ್ ಪ್ರೆಸ್ಸ್ಡ್ ಆಯಿಲ್ ಗಳ ಬಳಕೆ ಮಾಡಿ ಅರೋಗ್ಯ ಪೂರ್ಣ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top