ಉಪಯುಕ್ತ ಮಾಹಿತಿ

ಮೊಬೈಲ್ ನೀರಿಗೆ ಬಿತ್ತಾ? ಚಿಂತೆ ಮಾಡ್ಬೇಡಿ ಈ ರೀತಿ ಮಾಡಿ..! ನಯಾಪೈಸೆ ಖರ್ಚಿಲ್ಲದೆ ನಿಮ್ ಮೊಬೈಲ್ ರಿಪೇರಿಯಾಗುತ್ತೆ.

ಮೊಬೈಲ್ ನೀರಿಗೆ ಬಿತ್ತಾ? ಚಿಂತೆ ಮಾಡ್ಬೇಡಿ ಈ ರೀತಿ ಮಾಡಿ..! ನಯಾಪೈಸೆ ಖರ್ಚಿಲ್ಲದೆ ನಿಮ್ ಮೊಬೈಲ್ ರಿಪೇರಿಯಾಗುತ್ತೆ.

 

 

 

 

 

 

 

ಇದು ಮೊಬೈಲ್ ಯುಗ. ಈ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದವರಿಲ್ಲ..ಅದರಲ್ಲೂ ಈಗ ಎಲ್ಲರ ಕೈಯಲ್ಲಿ ದೊಡ್ಡ ದೊಡ್ಡ ಸ್ಮಾರ್ಟ್ ಫೋನ್ ಗಳು ಬಂದಿವೆ. ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ. ಆಗ ಮೊಬೈಲ್ ನೀರಲ್ಲಿ ಬಿದ್ದೋತಲ್ಲ ಏನ್ ಮಾಡೋದು? ಇದನ್ನ ರಿಪೇರಿ ಮಾಡ್ಸಕ್ಕೆ ಎಸ್ಟ್ ಖರ್ಚಾಗುತ್ತೋ ಏನೋ ಅಂತ ಚಿಂತೆ ಮಾಡೋ ಬದ್ಲು ಈ ಕೆಳಗಿನ ವಿಧಾನಗಳನ್ನ ಪಾಲಸಿದ್ರೆ ನಿಮ್ಮ ಫೋನ್ ಸರಿಯಾಗುತ್ತೆ. ಮುಂದೆ ಓದಿ

 

 

 

 

ನಿಮ್ಮ ಮೊಬೈಲ್ ನೀರಿಗೆ ಬಿದ್ದ ಕೂಡಲೇ ನೀವು ಮಾಡಬೇಕಾದ ಕೆಲಸಗಳು.

 

1.ಮೊಬೈಲ್ ಸ್ವಿಚ್’ಆಫ್ ಮಾಡಿ:

 

 

 

 

 

 

ನಿಮ್ಮ ಮೊಬೈಲ್ ಅಕಸ್ಮಾತಾಗಿ ನೀರಿನಲ್ಲಿ ಬಿದ್ದ ಕೂಡಲೇ ನೀವು ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕು. ಸ್ವಿಚ್ ಆಫ್ ಮಾಡೋದ್ರಿಂದ ಫೋನ್’ನೊಳಗೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯನ್ನ ತಡೆಯಬಹುದು.

2.ಫೋನಿನಲ್ಲಿಯ ಬಿಡಿಭಾಗಗಳನ್ನು ಬೆರ್ಪಡಿಸಿ:

 

 

 

 

 

 

ಮೊಬೈಲ್ ಸ್ವಿಚ್ ಆಫ್ ಮಾಡಿದ ನಂತರ ನಿಮ್ಮ ಫೋನ್’ನ ಬಿಡಿ ಭಾಗಗಳನ್ನು ಸಾಧ್ಯವಾದಷ್ಟೂ ತೆಗೆದುಹಾಕಿ., ಬ್ಯಾಟರಿ(ತೆಗೆಯುವಂತಿದ್ದರೆ ಮಾತ್ರ), ಸಿಮ್ ಕಾರ್ಡ್ಸ್, ಮೆಮೋರಿ ಕಾರ್ಡ್. ಪ್ಯಾನೆಲ್ ಇತ್ಯಾದಿ ಬಿಡಿಭಾಗಗಳನ್ನ ಫೋನ್’ನಿಂದ ಹೊರತೆಗೆಯಿರಿ.

3.ಒಣ ಬಟ್ಟೆ/ಹತ್ತಿ ಬಳಸಿ ಒರೆಸಿ:

 

 

 

 

 

 

ಮೆತ್ತಗಿರುವ ಒಣ ಬಟ್ಟೆಯನ್ನು ಬಳಸಿ ಫೋನಿನ ಪ್ರತಿಭಾಗವನ್ನು ಒರೆಸಿ, ಬಳಿಕ ಹೆಡ್’ಫೋನ್ ಜ್ಯಾಕ್’ನಲ್ಲಿ, ಚಾರ್ಜಿಂಗ್ ಪೋರ್ಟ್’ನಿಂದ ನೀರು ಹೊರಬರುವಂತೆ ಫೋನನ್ನ ಮೆತ್ತಗೆ ಅಲ್ಲಾಡಿಸಿ..

4.ಅಕ್ಕಿಯೊಳಗೆ ಹುದುಗಿಸಿಡಿ:

 

 

 

 

 

 

ಇದು ನಿಮ್ಮನ್ನು ಆಶ್ಚರ್ಯಗೊಳಿಸಬಹುದು ಆದರೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ಒಣ ಡಬ್ಬಿಯಲ್ಲಿ ಅಕ್ಕಿಯನ್ನ ತುಂಬಿ ನಿಮ್ಮ ಮೊಬೈಲನ್ನ ಹುಡುಗಿಸಿಡಿ. ಆ ಡಬ್ಬಿಯನ್ನು ತೇವಾಂಶ ಇಲ್ಲದ ಒಣ ಜಾಗದಲ್ಲಿ 2 ದಿನ ಇಡಿ. 2 ದಿನಗಳ ವರೆಗೆ ಮೊಬೈಲ್ ಅನ್ನು ಮುಟ್ಟಬೇಡಿ. ಏಕೆಂದರೆ ಅಕ್ಕಿ ನೀರನ್ನು ಹೀರಿಕೊಳ್ಳುವ ಅದ್ಭುತ ಗುಣವನು ಹೊಂದಿರುತ್ತದೆ.

 

 

 

 

 

 

 

2 ದಿನಗಳ ನಂತರ ಅಕ್ಕಿಯಿಂದ ಫೋನನನ್ನು ತೆಗೆದು ಸ್ವಿಚ್ ಆನ್ ಮಾಡಿ. ಬಹುತೆಗ ಕೇಸ್ ಗಳಲ್ಲಿ ಈ ವಿಧಾನ ಕೆಲಸಮಾಡುತ್ತದೆ. ಒಂದು ವೇಳೆ ಮೇಲೆ ಹೇಳಿದಂತೆ ಮಾಡಿದರೂ ಮೊಬೈಲ್ ಕೆಲಸ ಮಾಡದೇ ಮೊಬೈಲ್ ಸರ್ವಿಸ್ ಸೆಂಟರ್ ಗೆ ಭೇಟಿಕೊಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top