ಹೆಚ್ಚಿನ

ಅಧಿಕ ಮಾಸವು ಮೇ 16 ನೇ ತಾರೀಖಿನಿಂದ ಜೂನ್ 16 ನೇ ತಾರೀಖಿನವರಿಗೂ ಇರುತ್ತದೆ .ಅಧಿಕ ಮಾಸ 3 ವರ್ಷಗಳಿಗೆ ಒಮ್ಮೆ ಯಾಕೆ ಬರುತ್ತದೆ ? ಈ ಮಾಸದ ಮಹತ್ವವೇನು ಹಾಗೂ ಈ ಮಾಸವನ್ನು 3 ವಿವಿಧ ಹೆಸರುಗಳಿಂದ ಯಾಕೆ ಕರೆಯುತ್ತಾರೆ , ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಅಧಿಕ ಮಾಸವು ಮೇ 16 ನೇ ತಾರೀಖಿನಿಂದ ಜೂನ್ 16 ನೇ ತಾರೀಖಿನವರಿಗೂ ಇರುತ್ತದೆ .ಅಧಿಕ ಮಾಸ 3 ವರ್ಷಗಳಿಗೆ ಒಮ್ಮೆ ಯಾಕೆ ಬರುತ್ತದೆ ? ಈ ಮಾಸದ ಮಹತ್ವವೇನು ಹಾಗೂ ಈ ಮಾಸವನ್ನು 3 ವಿವಿಧ ಹೆಸರುಗಳಿಂದ ಯಾಕೆ ಕರೆಯುತ್ತಾರೆ , ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಜ್ಯೇಷ್ಠ ಮಾಸದಲ್ಲಿ ಪರಮ ಪಾವನವಾದ ಅಧಿಕ ಮಾಸವು ಇದೇ ಮೇ ತಿಂಗಳಿನ 16 ನೇ ತಾರೀಖಿನಿಂದ ಪ್ರಾರಂಭವಾಗುತ್ತಿದೆ.
ಪರಮ ಪಾವನವಾದ ಈ ಅಧಿಕ ಮಾಸವು ಇದೇ ಮೇ ತಿಂಗಳು ಹದಿನಾರನೇ ತಾರೀಖಿನಿಂದ ಪ್ರಾರಂಭವಾಗಿ ಜೂನ್ ತಿಂಗಳ ಹದಿಮೂರನೇ ತಾರೀಕಿನವರೆಗೂ ಇರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಬಾರಿ ಹೆಚ್ಚುವರಿಯಾಗಿ ಈ ಮಾಸವು ಬರುವುದು ಅದಕ್ಕೆ ಅಧಿಕ ಮಾಸ, ಮಲ ಮಾಸ, ಪುರುಷೋತ್ತಮ ಮಾಸ ಅಥವಾ ದಾಮೋದರ ಮಾಸ ಎಂಬ ಹೆಸರಿನಿಂದ ಕರೆಯಲಾಗುತ್ತದೆ .

 

 

ಹಿಂದೂ ಧರ್ಮದಲ್ಲಿ ಈ ಮಾಸಗಳಿಗೆ ವಿಶೇಷ ಮಹತ್ವವಿದೆ. ಸಂಪೂರ್ಣ ಭಾರತದಲ್ಲಿ ಹಿಂದೂ ಧರ್ಮದವರು ಈ ಮಾಸವನ್ನು ಆಚರಿಸುತ್ತಾರೆ. ಈ ಮಾಸದಲ್ಲಿ ಸಂಪೂರ್ಣವಾಗಿ ಪೂಜೆ, ಪ್ರಾರ್ಥನೆಯನ್ನು ಭಗವಂತನ ಮೇಲಿನ ಭಕ್ತಿಯನ್ನು ವ್ರತಾಚರಣೆ, ಉಪವಾಸ , ಜಪ, ಯೋಗ, ಧ್ಯಾನ ಮತ್ತು ಧಾರ್ಮಿಕ ಕಾರ್ಯಗಳನ್ನು ಆಚರಣೆ ಮಾಡುತ್ತಾರೆ .

ಅಧಿಕ ಮಾಸದಲ್ಲಿ ಮಾಡುವ ಧಾರ್ಮಿಕ ಕಾರ್ಯಗಳಿಗೆ ಯಾವುದೇ ಅನ್ಯ ಮಾಸಗಳಲ್ಲಿ ಮಾಡುವ ಪೂಜಾ ಪ್ರಾರ್ಥನೆಗಿಂತ ಹತ್ತು ಪಟ್ಟು ಅಧಿಕ ಫಲವು ದೊರೆಯುತ್ತದೆ. ಇದೇ ಕಾರಣದಿಂದ ಜನರು ಶ್ರದ್ಧೆ, ಭಕ್ತಿಯಿಂದ ಈ ಮಾಸದಲ್ಲಿ ಭಗವಂತನನ್ನು ಪ್ರಸನ್ನಗೊಳಿಸುತ್ತಾರೆ.

ಈ ಮಾಸವು ಅತ್ಯಂತ ಪ್ರಭಾವಶಾಲಿ ಮತ್ತು ಅಷ್ಟೇ ಪವಿತ್ರವಾದ್ದದಾಗಿದೆ. ಇದು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಯಾಕೆ ಬರುತ್ತದೆ ? ಯಾಕೆ ಯಾವ ಕಾರಣದಿಂದ ಈ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಪರಿಗಣಿಸಲಾಗಿದೆ ? ಇಲ್ಲಿ ಒಂದೇ ಒಂದು ಮಾಸವನ್ನು ಮೂರು ವಿವಿಧ ಹೆಸರುಗಳಿಂದ ಯಾಕೆ ಕರೆಯಲಾಗುತ್ತದೆ ? ಈ ರೀತಿಯ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಇಂದು ಅದೇ ರೀತಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಮತ್ತು ಅಧಿಕ ಮಾಸದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.

 

 

ಪ್ರತಿ ಮೂರು ವರ್ಷಗಳಿಗೊಮ್ಮೆ ಯಾಕೆ ಅಧಿಕ ಮಾಸವು ಬರುತ್ತದೆ ?
ವಸಿಷ್ಠ ಸಿದ್ಧಾಂತದ ಪ್ರಕಾರ, ಭಾರತೀಯ ಹಿಂದೂ ಕ್ಯಾಲೆಂಡರ್ ಸೂರ್ಯ ಮಾಸ ಮತ್ತು ಚಂದ್ರ ಮಾಸವನ್ನು ಗಣನೆಯ ಪಕಾರವೇ ರಚನೆಗೊಂಡು ಸಾಗುತ್ತಿದೆ. ಅಧಿಕ ಮಾಸವು ಚಂದ್ರ ವರ್ಷದಲ್ಲಿ ಒಂದು ಹೆಚ್ಚುವರಿ ಭಾಗವಾಗಿ ಇದು ಮೂವತ್ತೆರಡು ಮಾಸಗಳಿಗೆ ಒಮ್ಮೆ, ಹದಿನಾರು ದಿನ ಮತ್ತು ಎಂಟು ಗಂಟೆಯ ಅಂತರದಲ್ಲಿ ಬರುತ್ತದೆ. ಇದರ ಪ್ರಯುಕ್ತ ಸೂರ್ಯ ವರ್ಷ ಮತ್ತು ಚಂದ್ರ ವರ್ಷದ ಮಧ್ಯದಲ್ಲಿ ಅಂದರೆ ಅಂತರದಲ್ಲಿ ಸಮತೋಲನವನ್ನು ಕಾಯ್ದಿರಿಸಲು ಆಗಿದೆ.
ಭಾರತೀಯ ಗಣನೆಯ ಪದ್ಧತಿಯ ಪ್ರಕಾರ ಪ್ರತ್ಯೇಕವಾಗಿ ಸೂರ್ಯ ವರ್ಷ 365 ದಿನ ಮತ್ತು ಆರು ಗಂಟೆಯಾಗಿರುತ್ತದೆ. ಅದೇ ಚಂದ್ರ ವರ್ಷ 354 ದಿನ ಎಂದು ಪರಿಗಣಿಸಲಾಗಿದೆ. ಇವೆರಡು ವರ್ಷಗಳ ಮಧ್ಯೆ ಹನ್ನೊಂದು ದಿನಗಳ ಅಂತರ ಭಾಗಶಃ ಇರುತ್ತದೆ. ಆದ್ದರಿಂದ ಪ್ರತಿ ಮೂರು ವರ್ಷದಲ್ಲಿ ಒಂದು ವಾಸಕ್ಕೆ ಸಮನಾಗುತ್ತದೆ. ಈ ಅಂತರವನ್ನು ಭಾಗ ಮಾಡುವುದರಿಂದ ಪ್ರತಿ ಮೂರು ವರ್ಷದಲ್ಲಿ ಒಮ್ಮೆ ಚಂದ್ರ ಮಾಸದ ಅಸ್ತಿತ್ವದಲ್ಲಿ ಬರುತ್ತದೆ. ಇದು ಹೆಚ್ಚುವರಿಯಾಗಿರುವ ಕಾರಣ ಅಧಿಕ ಮಾಸದ ಎಂಬ ಹೆಸರನ್ನು ಇಡಲಾಗಿದೆ.

 

 

ಈ ಮಾಸದಲ್ಲಿ ಭಗವಂತನಾದ ವಿಷ್ಣು ಮತ್ತು ರಾಧಾ ಕೃಷ್ಣನ ಪೂಜೆಯನ್ನು ನೀವು ಮಾಡಬೇಕು. ಅಧಿಕ ಮಾಸದಲ್ಲಿ ಶುಭ ಕಾರ್ಯಗಳು ಕೂಡ ನಡೆಯುವುದಿಲ್ಲ . ಆದರೆ ಪೂಜೆ ಪ್ರಾರ್ಥನೆಗೆ ಈ ಮಾಸದಲ್ಲಿ ವಿಶೇಷ ಫಲವಿರುತ್ತದೆ. ಶ್ರದ್ದೆ ,ಭಕ್ತಿಯಿಂದ ಪೂಜಿಸಿದರೆ ನಿಮ್ಮ ಆಸೆಗಳೆಲ್ಲವೂ ಕೂಡ ಈ ಮಾಸದಲ್ಲಿ ಈಡೇರುತ್ತವೆ.

ಈ ಅಧಿಕ ಮಾಸವು ಬುಧವಾರದ ದಿನ ಪ್ರಾರಂಭವಾಗುತ್ತಿದೆ. ಆ ದಿನವೇ ಸರ್ವಾರ್ಥ ಸಿದ್ಧಿ ಯೋಗವೂ ಕೂಡ ಇದೆ . ಈ ಅಧಿಕ ಮಾಸದಲ್ಲಿ ಐದು ಬುಧವಾರಗಳು ಬಂದಿದೆ. ಅದ್ದರಿಂದಲೇ ಈ ಅಧಿಕ ಮಾಸ ತುಂಬಾ ಸರ್ವಶ್ರೇಷ್ಠವಾಗಿದೆ. ಹಾಗೂ ಈ ಅಧಿಕ ಮಾಸವು ಜ್ಯೇಷ್ಠ ಮಾಸದಲ್ಲಿ ಬಂದಿರುವುದು ಕೂಡ ತುಂಬಾ ವಿಶೇಷವಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top