ಸಿನಿಮಾ

ರೆಸಾರ್ಟ್ ರಾಜಕೀಯ ಬಗ್ಗೆ ದಾನಿಶ್ ಶೇಠ್ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

ಇನ್ನು ಈ ಸಂಧರ್ಭದಲ್ಲಿ ಶಾಸಕರು ಪಕ್ಷದಿಂದ ಪಕ್ಷಕ್ಕೆ ಹಾರುವ ಸಂಭವ ಇರುತ್ತದೆ. ಈ ಹಿನ್ನಲೆಯಲ್ಲಿ ಶಾಸಕರನ್ನು ರೆಸಾರ್ಟ್ ನಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ. ಈ ಕುರಿತಾದ ವಿಡಿಯೋ ಒಂದನ್ನು ದಾನಿಶ್ ಶೇಠ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 

 

ಶಾಸಕರನ್ನು ಹೇಗೆ ರೆಸಾರ್ಟ್ ನಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಎಂದು ದಾನಿಶ್ ಶೇಠ್ ಹಾಸ್ಯಾಸ್ಪದವಾಗಿ ವಿಡಿಯೋ ಮಾಡಿದ್ದೂ ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆದಾರರರು ಈ ವಿಡಿಯೋ ನೋಡಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top