ಉಪಯುಕ್ತ ಮಾಹಿತಿ

ಒಡೆದ ಪಾದಗಳ ಆರೈಕೆಗೆ ಪವರ್ ಫುಲ್ ಮನೆಮದ್ದುಗಳು

 

 

 

ಬಿಸಿ ನೀರಿನೊಂದಿಗೆ ಜೇನುತುಪ್ಪ

ಎರಡು ಲೀಟರ್ ನಷ್ಟು ಸಲ್ಪ ಬಿಸಿ ನೀರು ಇರುವ ನೀರಿಗೆ ಎರೆಡು ಚಮಚ ಜೇನುತುಪ್ಪ ಹಾಕಿಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ಇಟ್ಟರೆ ನೋವು ಕಡಿಮೆಯಾಗುವುದು .
ನೀರು ತಣ್ಣಗೆ ಆಗುವ ತನಕ ಅಂದರೆ ಸುಮಾರು 15 ನಿಮಿಷಗಳ ಕಾಲ ಪಾದಗಳನ್ನು ನೀರಿನಲ್ಲಿ ಇಡಿ. ಜೇನುತುಪ್ಪದಲ್ಲಿ ಸೂಕ್ಷ್ಮಜೀವಿ ನಿರೋಧಕ ಮತ್ತು ಮೃದುವಾಗಿಸುವ ಗುಣಗಳು ಇವೆ .

 

 

 

ಬೇವಿನ ಎಲೆಗಳು

ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ .ಕೆಲವು ಕಹಿಬೇವಿನ ಎಲೆಗಳನ್ನು ಚನ್ನಾಗಿ ತೊಳೆದು ಅರೆಯಿರಿ . ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ .
ಇದಕ್ಕೆ ಸಲ್ಪ ಅರಿಶಿಣ ಪುಡಿಯೆಯನ್ನು ಸೇರಿಸಿಕೊಳ್ಳಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ ಸುಮಾರು ಅರ್ಧ ಗಂಟೆವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ .

ಬೇವು ಮತ್ತು ಅರಿಶಿನ ಎರೆಡು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿರುವ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕು ಇದ್ದರೆ ಮಾತ್ರ ದಿನಕ್ಕೆರೆಡು ಬಾರಿ,ಇಲ್ಲದಿದ್ದರೆ ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು .

 

 

ಬಾಳೆಹಣ್ಣಿನ ಪೇಸ್ಟ್

ಒಂದು ದೂಡ್ಡ ಬಾಳೆಹಣ್ಣುನ್ನು ಕಿವಿಚಿ ಎರೆಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ .ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು 15 ವರೆಗೂ ಒಣಗಲು ಬಿಡಿ .ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

 

 

 

ವಿಟಮಿನ್ ಇ ತೈಲ ಮಸಾಜ್

ಮೆಡಿಕಲ್ ನಲ್ಲಿ ಸಿಗುವಂತಹ ವಿಟಮಿನ್ ಇ ತೈಲ ಮಸಾಜ್ 200 ಮಿ.ಗ್ರಾಂ.ಮಾತ್ರೆಯನ್ನು ತಂದು ಅದನ್ನು ತುಂಡು ಮಾಡಿಕೊಳ್ಳಿ . ಇದರಲ್ಲಿರುವ ತೈಲವನ್ನು ಒಡೆದ ಪಾದಗಳ ಮಧ್ಯೆ ಹಾಕಿಬಿಡಿ .
ಪ್ರತಿಯೊಂದು ಪಾದವು 400 ಮಿ ಗ್ರಾಂ. ನಷ್ಟು ವಿಟಮಿನ್ ಇ ತೈಲವನ್ನು ಪಡೆಯಲಿ. ಪಾದಗಳು ಸುಲಭವಾಗಿ ಹೀರಿಕೊಳ್ಳುತ್ತದೆ. ರಾತ್ರಿ ಮಲಗುವ ವೇಳೆ ತೈಲ ಹಾಕಿ ಹಳೆಯ ಸಾಕ್ಸ್ ಹಾಕಿಕೊಂಡು ಮಲಗಿ .

 

 

ತೆಂಗಿನ ಎಣ್ಣೆ ಮತ್ತು ಅರಿಶಿಣ

ಒಡೆದ ಪಾದಗಳಿಗೆ ಇದು ಅತ್ಯುತ್ತುಮವಾದ ಮನೆಮದ್ದು . ಒಂದು ಚಮಚ ಅರಿಶಿಣ ಪುಡಿ ಮತ್ತು ಅರ್ಧ ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಫ್ರಿಡ್ಜ್ ನಲ್ಲಿ ಲಘುವಾಗಿ ಘನೀಕರಿಸಿ. ಮಲಗುವ ಮದಲು ಈ ಮಿಶ್ರಣವನ್ನು ಹಚ್ಚಿಕೊಳ್ಳಿ.ಪಾದಗಳಿಗೆ ಪ್ಲಾಸ್ಟಿಕ್ ಕಟ್ಟಿಕೊಳ್ಳಿ .ಇಲ್ಲದೆ ಇದ್ದರೆ ಪಾದಗಳ ಬಣ್ಣವು ನೆಲದ ಮೇಲೆ ಮೂಡಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top