ಉಪಯುಕ್ತ ಮಾಹಿತಿ

ವಾತ ,ಪಿತ್ತ ಮತ್ತು ಕಫ ದೋಷಗಳಿಂದ ಮತ್ತೆ 100 ಕಾಯಿಲೆಗಳಿಂದ ದೂರವಿರಲು ಈ ಒಂದು ಚೂರ್ಣ ಸಾಕು ಅಂತ ತಿಳ್ಕೊಂಡ್ಮೇಲೆ ತಿನ್ನೋಕೆ ಇದನ್ನ ಶುರು ಮಾಡ್ತೀರಾ !

ತ್ರಿಫಲ ಚೂರ್ಣ ಬಳಸಿಕೊಂಡು 100 ಕಾಯಿಲೆಗಳಿಂದ ಪರಿಹಾರ ಪಡೆದುಕೊಳ್ಳಿ:

 

ಮಾನವನ ದೇಹದಲ್ಲಿ ಪ್ರಮುಖ ಪಾತ್ರ ವಹಿಸುವ ವಾತ ,ಪಿತ್ತ ಮತ್ತು ಕಫ ದೋಷಗಳಿಂದ ಪರಿಹಾರ ಹೊಂದಲು ಒಂದೇ ಒಂದು ಮದ್ದು ಈ ತ್ರಿಫಲ ಚೂರ್ಣ.

ಈ ತ್ರಿಫಲ ಚೂರ್ಣ ಎಂದರೆ ಏನು ?

 

 

ಬೆಟ್ಟದ ನೆಲ್ಲಿಕಾಯಿ
ಕರಕ ಕಾಯಿ (ಹರೀತಕಿ)
ತಾರೆಕಾಯಿ ಅಥವಾ ತಂದ್ರಿ ಕಾಯಿ (ಬಿಭಿತಕಿ)

ಮೊದಲು ಈ ಮೂರು ಕಾಯಿಗಳ ವಿಶೇಷ ಗುಣಲಕ್ಷಣ ಗಳ ಬಗ್ಗೆ ತಿಳಿಯೋಣ:

 

ಬೆಟ್ಟದ ನೆಲ್ಲಿಕಾಯಿ:

ಬೆಟ್ಟದ ನೆಲ್ಲಿಕಾಯಿಯಲ್ಲಿ ಗ್ಲುಕೋಸ್ ,ವಿಟಮಿನ್ ಮತ್ತು ಪ್ರೋಟೀನ್ ಅಂಶ ಅಧಿಕವಾಗಿ ಇದೆ.ಬೆಟ್ಟದ ನೆಲ್ಲಿಕಾಯಿ ಪಿತ್ತ ದೋಷವನ್ನು ಸರಿಪಡಿಸುತ್ತದೆ.ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿಡುತ್ತದೆ,ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ ,ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡುತ್ತದೆ .

ತಾರೆಕಾಯಿ:

ತಾರೆಕಾಯಿ ಘಾಟು ರುಚಿಯನ್ನು ಹೊಂದಿರುತ್ತದೆ.ಇದರಲ್ಲಿ ವಿಟಮಿನ್ ಎ ಅಧಿಕ ವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ,ಅಲರ್ಜಿ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ,ಕರುಳಿನಲ್ಲಿ ಇರುವಂತ ಕಲ್ಮಶವನ್ನು ನಾಶ ಮಾಡುತ್ತದೆ ,ಗಂಟಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ,ಕಫ ಕಡಿಮೆ ಮಾಡುತ್ತದೆ ಮತ್ತು ಉಬ್ಬಸವನ್ನು ಕಡಿಮೆ ಮಾಡುತ್ತದೆ .

ಕರಕ ಕಾಯಿ :

ತ್ರಿಫಲ ಚೂರ್ಣ ಗಳಲ್ಲಿ ಮುಖ್ಯವಾದ ಫಲ ಈ ಕರಕ ಕಾಯಿ .ಭೇದಿಯನ್ನು ತಡೆಗಟ್ಟುತ್ತದೆ,ಎದೆಯ ಉರಿಯನ್ನು ಕಡಿಮೆ ಮಾಡುತ್ತದೆ ,ನಾಡಿಗೆ ಸಂಬಂಧ ಸಮಸ್ಯೆಯನ್ನು ತೊಲಗಿಸುತ್ತದೆ,ಶಾರೀರಿಕ ಬಲಹೀನತೆ ಯನ್ನು ಸರಿಪಡಿಸುತ್ತದೆ ಮತ್ತು ವಾತ ಸಂಬಂದಿಸಿದ ಕಾಯಿಲೆಯನ್ನು ಹತ್ತಿರ ಬರಲು ಬಿಡುವುದಿಲ್ಲ .

 

ತ್ರಿಫಲ ಚೂರ್ಣ ಮಾಡವುದು ಹೇಗೆ:

 

3 ಬೆಟ್ಟದ ನೆಲ್ಲಿಕಾಯಿ,2 ತಾರೆಕಾಯಿ ಮತ್ತು 1 ಕರಕ ಕಾಯಿಯನ್ನು ಒಣಗಿಸಿ ಚೆನ್ನಾಗಿ ಒಣಗಿದ ನಂತರ ಬೀಜ ಗಳನ್ನು ಹೊರತೆಗೆದು ಮೇಲಿನ ಭಾಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು .ಈ ಪುಡಿಯನ್ನು ತ್ರಿಫಲ ಚೂರ್ಣ ಎನ್ನುತ್ತಾರೆ.

 

ತ್ರಿಫಲ ಚೂರ್ಣವನ್ನು ಬಳಸುವ ವಿಧಾನ :

ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬಹುದು.ರಾತ್ರಿ ಹೊತ್ತು ಹಾಲು ಅಥವಾ ಜೇನು ತುಪ್ಪದ ಜೊತೆ ಇದನ್ನು ತೆಗೆದುಕೊಳ್ಳಬಹುದು.

ಅಜೀರ್ಣ ಅಥವಾ ಭೇದಿ:

ಅಜೀರ್ಣ ಅಥವಾ ಭೇದಿಯ ಸಂದರ್ಭದಲ್ಲಿ 2 ಚಮಚ ನೀರಿನ ಜೊತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕುದಿಸಿ ಶೋಧಿಸಿ ಅದಕ್ಕೆ ಸ್ವಲ್ಪ ನೀರು ಬೆರಸಿ ಕುಡಿಯಬೇಕು .

ಮಲಬದ್ದತೆ :

 

 

ಮಲಬದ್ದತೆ ಆಗುವ ಸಂದರ್ಭದಲ್ಲಿ 5 ಗ್ರಾಂ ತ್ರಿಫಲ ಚೂರ್ಣವನ್ನು ಜೇನು ತುಪ್ಪದಲ್ಲಿ ಉಂಡೆಯ ರೀತಿ ಮಾಡಿ ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಮಲಬದ್ದತೆ ಸಮಸ್ಯೆ ಪರಿಹಾರ ವಾಗುತ್ತದೆ.

ಕೂದಲು:

Young woman shocked state of hair on the head

 

 

1 ಚಮಚ ತ್ರಿಫಲ ಚೂರ್ಣವನ್ನು 2 ಚಮಚ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ,ಶೋಧಿಸಿ ತಲೆಗೆ ಹಚ್ಚಿಕೊಂಡರೆ ತಲೆಯ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ
ಚರ್ಮದ ಸಮಸ್ಯೆ ,ಮುಟ್ಟಿನ ಸಮಸ್ಯೆ ಮತ್ತು ತೂಕ ನಿಯಂತ್ರಣಕ್ಕೂ .ತ್ರಿಫಲ ಚೂರ್ಣ ರಾಮಬಾಣ , ನೀವು ತ್ರಿಫಲ ಚೂರ್ಣ ಬಳಸಿ ನಿಮ್ಮ ಎಲ್ಲ ಆರೋಗ್ಯ ಸಮಸ್ಯೆ ಯಿಂದ ಹೊರ ಬನ್ನಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top