ಮನೋರಂಜನೆ

ಐಶ್ವರ್ಯಾ ಮನೆಯವರ ಸಿಟ್ಟಿಗೆ ಬೆಚ್ಚಿಬಿದ್ದನಾ ಹುಚ್ಚ ವೆಂಕಟ್.

ವರ್ಷದ ಹಿಂದೆ ಕುಡಿದ ಫಿನಾಯಿಲ್‌ನ ಕಿಸುರಿನ್ನೂ ದೇಹದಿಂದ ಹೊರ ಹೋಗುವ ಮುನ್ನವೇ ಹುಚ್ಚಾ ವೆಂಕಟ ಮತ್ತೆ ಲವ್ವಲ್ಲಿ ಬಿದ್ದಿದ್ದಾನೆ. ಹುಚ್ಚ ವೆಂಕಟನ ಮದುವೆ ಮ್ಯಾಟರ್ ಆಗಲಿ, ಲವ್ ಸ್ಟೋರಿಗಳಾಗಲೀ ಕರ್ನಾಟಕದ ಮಟ್ಟಿಗೆ ಆತನ ಮೂಗಿಂದ ಒಸರುವ ಗೊಣ್ಣೆಯಷ್ಟೇ ಚಿರಪರಿಚಿತ. ಆದರೆ ಈ ಬಾರಿ ಅಣ್ಣನದ್ದು ಪಕ್ಕಾ ಸೀರಿಯಸ್ ಲವ್ ಸ್ಟೋರಿ. ತಾನೊಂದು ಲವ್ ಮಾಡಿದರೆ ಇಡೀ ಕರ್ನಾಟಕವೇ ಅಲ್ಲೋಲಕಲ್ಲೋಲವಾಗುತ್ತದೆಂಬ ಭ್ರಮೆಯಿಂದ ಹೊರ ಬಂದಂತಿರುವ ವೆಂಕಟ ಪ್ರೀತಿಸಿದ ಹುಡುಗಿಯನ್ನು ಗೌಪ್ಯವಾಗಿ, ತರಾತುರಿಯಿಂದ ಮದುವೆಯಾಗಿ ಬಿಟ್ಟಿದ್ದಾನೆ!

 

 

ಹುಚ್ಚಾ ವೆಂಕಟ ಐಶ್ವರ್ಯಾ ಎಂಬಾಕೆಯನ್ನು ಮದುವೆಯಾಗಿರೋದರ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಜಾಹೀರು ಮಾಡಿದ್ದಾನೆ. ಅದಾದೇಟಿಗೆ ವೆಂಕಟನಂಥಾ ವಿಚಿತ್ರ ಆಸಾಮಿಯೊಂದಿಗೆ ಬದುಕೋ ಅಚಲ ನಿರ್ಧಾರ ಮಾಡಿರುವ ಆ ಗಟ್ಟಿಗಿತ್ತಿ ಯಾರೆಂಬುದರ ಬಗ್ಗೆ ಬಹುತೇಕರು ತಲೆ ಕೆಡಿಸಿಕೊಂಡಿದ್ದು ನಿಜ. ಅದೂ ಕೂಡಾ ಕೆಲವೇ ಹೊತ್ತಿನಲ್ಲಿ ಬಟಾಬಯಲಾಗಿದೆ. ಈ ಹಿಂದೆ ವೆಂಕಟ ಡಿಕ್ಟೇಟರ್ ಹುಚ್ಚಾ ವೆಂಕಟ ಅಂತೊಂದು ಚಿತ್ರ ಮಾಡಿದ್ದನಲ್ಲಾ? ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾಕೆ ಈ ಐಶ್ವರ್ಯಾ. ಈಕೆಗೆ ಫಿನಾಯಿಲ್ಲು ಕುಡಿದು ಲಬೋ ಅಂದ ವೆಂಕಟನ ಮೇಲೆ ಆ ಕ್ಷಣದಲ್ಲಿಯೇ ಪ್ರೇಮಾಂಕುರವಾಗಿತ್ತಂತೆ. ಅದು ಬರ ಬರುತ್ತಾ ವಿಪರೀತವಾಗಿ ಕಡೆಗೂ ಹುಚ್ಚಾ ವೆಂಕಟನ ಜೊತೆ ಬದುಕೋ ನಿರ್ಧಾರ ಮಾಡಿದ್ದಾಳೆ.

 

 

ಆದರೆ, ಹುಚ್ಚಾ ವೆಂಕಟನಿಗಿಂತ ವಯಸ್ಸಿನಲ್ಲಿ ತೀರಾ ಸಣ್ಣವಳಾದ ಐಶ್ವರ್ಯಾಳ ಈ ಹುಚ್ಚುತನ ಕಂಡು ಖುದ್ದು ಆಕೆಯ ಮನೆ ಮಂದಿಯೇ ಕಂಗಾಲಾಗಿದ್ದಾರೆ. ಈ ಹಿಂದೆ ಸಣ್ಣಗೆ ಈ ಪ್ರೇಮ ವ್ಯವಹಾರದ ವಿಚಾರ ಗೊತ್ತಾದೇಟಿಗೆ ಐಶ್ವರ್ಯಾಳ ಮನೆ ಮಂದಿ ತಾರಾ ಮಾರಾ ಬೈದಿದ್ದರಂತೆ. ಆದರೆ ಐಶ್ವರ್ಯಾ ಅದಾದಲೇ ವೆಂಕಟನ ಪ್ರೀತಿಯಲ್ಲಿ ಬಿದ್ದು ಮುಳುಗಿದ್ದರಿಂದ ಮನೆಯವರ ಯಾವ ಹಿತ ವಚನಗಳನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಡೆಗೂ ಕದ್ದೂ ಮುಚ್ಚಿ ಮಗಳು ವೆಂಕಟನನ್ನು ಮದುವೆಯಾದ ಸುದ್ದಿ ಕೇಳಿ ಐಶ್ವರ್ಯಾ ತಾಯಿ ಕೆಂಡಾಮಂಡಲವಾದದ್ದೂ ನಡೆದಿದೆ.

 

 

ಐಶ್ವರ್ಯಾ ಮನೆಯವರ ಪಾಲಿಗೀಗ ಹುಚ್ಚಾ ವೆಂಕಟ ಪಕ್ಕಾ ವಿಲನ್. ರಿಯಲ್ ಹೀರೋ ವೆಂಕಟ ಏನಾದರೂ ಕೈಗೆ ಸಿಕ್ಕರೆ ಉದ್ದುದ್ದ ಅಡ್ಡಡ್ಡ ಸಿಗಿದು ಹಾಕುವಂಥಾ ನಿಗಿ ನಿಗಿ ಸಿಟ್ಟಿನಲ್ಲಿ ಐಶ್ವರ್ಯಾ ಮನೆ ಮಂದಿ ಕಾದು ಕೂತಿದ್ದಾರೆ. ತನ್ನ ಮನದನ್ನೆ ಐಶ್ವರ್ಯಾ ಕಡೆಯಿಂದಲೇ ಇಂಥಾ ಭೀಕರ ವಾಸ್ತವವನ್ನು ಕೇಳಿ ಕರ್ನಾಟಕದಾಧ್ಯಂತ ಅಭಿಮಾನಿ ಸೇನೆ ಹೊಂದಿರೋ ವೆಂಕಟನ ಅಳ್ಳೆ ಅದುರಿದೆ. ಆದ್ದರಿಂದಲೇ ಮತ್ತೆ ಫೇಸ್ ಬುಕ್ ಲೈವ್ ಬಂದಿರೋ ಬಾಸು ದಯಮಾಡಿ ತಮ್ಮಿಬ್ಬರನ್ನು ದೂರ ಮಾಡಬೇಡಿ ಅಂತ ಒಂದೇ ಹೊಳ್ಳೆಯಲ್ಲಿ ಗೊಣ್ಣೆ ಸುರಿಸಿ ಗೋಳಾಡಿದ್ದಾರೆ! ಇನ್ನು ವೆಂಕಟ್ ಅವರ ಪಾಲಿಗೆ ಅಡ್ವೈಸರ್, ಗಾಡ್ ಫಾದರ್ ಎಲ್ಲವೂ ಆಗಿರುವ ಬನ್ ಚಂದ್ರು ಎನ್ನುವ ವ್ಯಕ್ತಿ ‘ಯಾರೂ ನಿಮ್ಮಿಬ್ಬರನ್ನು ಬೇರೆ ಮಾಡಲು ಆಗದಂತೆ ನಾನು ನೋಡಿಕೊಳ್ಳುತ್ತೇನೆ’ ಎಂದು ವೆಂಕಟ್ ತಲೆ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದಾನಂತೆ!!

 

 

ಇರಲಿ, ಹುಚ್ಚಾ ವೆಂಕಟನೆಂಬ ಮೆಂಟಲ್ ಕೇಸು ಈ ಮದುವೆಯ ಮೂಲಕವಾದರೂ ಮಾಮೂಲು ಮೂಡಿಗೆ ಬಂದರೆ ಅದು ನಿಜಕ್ಕೂ ಅದು ಸಂತಸದ ವಿಚಾರ. ಆದರೆ ವೆಂಕಟನ ಸದ್ಯದ ಮಾನಸಿಕ ಸ್ಥಿತಿ ಮದುವೆ, ಮಡದಿ ಮಕ್ಕಳೆಂಬ ಸೂತ್ರಗಳಿಗೆ ಒಗ್ಗುವಂತಿಲ್ಲ. ಒಂದಷ್ಟು ದಿನ ಐಶ್ವರ್ಯಾ ಜೊತೆ ಸಂಸಾರ ನಡೆಸಿದಂತೆ ಮಾಡಿ ಈ ಸಂಬಂಧದ ಮೇಲೆ ಎಕ್ಕಡ ಮಡಗಿ ಎದ್ದು ಹೋದರೂ ಅಚ್ಚರಿಯೇನಿಲ್ಲ. ಸದ್ಯ ಐಶ್ವರ್ಯಾ ಮನೆಮಂದಿಯನ್ನು ಕಾಡುತ್ತಿರುವ ಭಯವೂ ಇದೇ. ಆದರೆ ಇದೆಲ್ಲದರಾಚೆಗೆ ಹುಚ್ಚಾ ವೆಂಕಟ ಐಶ್ವಯ ಆಳ ಪ್ರೀತಿಯ ಕಾರಣದಿಂದಲಾದರೂ ಸಹಜ ಸ್ಥಿತಿಗೆ ಮರಳುವಂತಾದರೆ ಅದಕ್ಕಿಂತಲೂ ಖುಷಿಯ ವಿಚಾರ ಬೇರೊಂದಿಲ್ಲ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top