ಮನೋರಂಜನೆ

ನಟಿ ನಯನತಾರಗೀಗ ಕಲ್ಯಾಣ ವಯಸು

ತೆಲುಗಿನಲ್ಲಿ ಮಹಿಳಾ ಕೇಂದ್ರಿತ ಪಾತ್ರಗಳ ಮೂಲಕ ಮಿಂಚುತ್ತಿರುವ ನಯನತಾರಾ ಇದೀಗ ಕೊಲಮಾವು ಕೋಕಿಲ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ನಯನತಾರಾಳದ್ದೇ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ. ಈ ಚಿತ್ರ ತನ್ನ ವೃತ್ತಿ ಬದುಕಿಗೆ ಹೊಸಾ ತಿರುವು ನೀಡಲಿದೆ ಎಂಬ ತುಂಬು ಭರವಸೆಯಿಂದಿರುವ ನಯನತಾರಾ ಬೇರ್‍ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾಳೆ. ಇದೀಗ ಈ ಚಿತ್ರದ ವಿಶೇಷವಾದೊಂದು ಹಾಡನ್ನು ಇದೇ ತಿಂಗಳ ಹದಿನೇಳರಂದು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗಿದೆ.

 

 

ಕಲ್ಯಾಣ ವಯಸು ಎಂಬ ಈ ವಿಶೇಷವಾದ ಹಾಡಿನಲ್ಲಿ ನಯನತಾರಾ ಮಾದಕವಾಗಿ ಕಾಣಿಸಿಕೊಂಡಿದ್ದಾಳಂತೆ. ಈ ಹಾಡೇ ಒಟ್ಟಾರೆ ಚಿತ್ರದ ಅದ್ದೂರಿತನಕ್ಕೂ ಕನ್ನಡಿಯಂತಿರಲಿದೆಯಂತೆ. ಈ ಹಾಡನ್ನು ಹದಿನೇಳರಂದು ಬಿಡುಗಡೆ ಮಾಡೋದಾಗಿ ಚಿತ್ರ ತಂಡ ಘೋಶಿಸಿದೇಟಿಗೆ ನಯನ್ ಅಭಿಮಾನಿಗಳು ಈ ಹಾಡಿಗಾಗಿ ಜಾತಕ ಪಕ್ಷಿಗಳಂತೆ ಕಾಯಲಾರಂಭಿಸಿದ್ದಾರೆ.

ಈಗ ಬಿಡುಗಡೆಯಾಗಲಿರೋ ಹಾಡನ್ನು ಸಂಗೀತ ನಿರ್ದೇಶಕ ಕಿರಣ್ ರವಿಚಂದ್ರನ್ ರೂಪಿಸಿದ್ದಾರೆ. ಇದರ ಬಗ್ಗೆ ಒಂದಷ್ಟು ವಿಚಾರಗಳನ್ನು ಅವರೇ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ತಿಂಗಳ ಹಿಂದೆ ಈ ಚಿತ್ರದ ಎದುವಾರಿಯೋ ಎಂಬ ಡೀಸೆಂಟ್ ಸಾಂಗ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ನಯನ್ ಅಭಿಮಾನಿಗಳಿಂದ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಸ್ಫೂರ್ತಿಯಿಂದ ಇದೀಗ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

 

 

ನೆಲ್ಸನ್ ದೀಪಕ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನ ತಾರಾ ಪಾತ್ರಕ್ಕೆ ಬೇರೆ ಬೇರೆ ಶೇಡುಗಳಿವೆಯಂತೆ. ತನ್ನ ವೈಯಕ್ತಿಕ ಜೀವನದ ಅಲ್ಲೋಲಕಲ್ಲೋಲದಾಚೆಗೆ ನಟನೆಯಲ್ಲಿ ಎಂಥವರನ್ನೂ ನಿವಾಳಿಸಿ ಎಸೆಯುವಂಥಾ ಅದ್ಬುತ ಂತಿeಭೆ ಹೊಂದಿರುವಾಕೆ ನಯನತಾರಾ. ಈ ಚಿತ್ರದ ಪಾತ್ರಕ್ಕೆ ಆಕೆ ಬಿಟ್ಟರೆ ಬೇರ್‍ಯಾರೂ ಸೂಟ್ ಆಗಲು ಸಾಧ್ಯವೇ ಇಲ್ಲ ಎಂಬುದು ನಿರ್ದೇಶಕರ ಭರವಸೆ. ಅ ಕಾರಣದಿಂದಲೇ ತಿಂಗಳುಗಳ ಕಾಲ ಕಾದು ನಯನತಾರಾಳ ಕಾಲ್‌ಶೀಟ್ ಪಡೆಯಲಾಗಿದೆಯಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top