ಮನೋರಂಜನೆ

ನಿಖಿಶಾ ಪಟೇಲ್‌ಳನ್ನು ಮದುವೆಯಾಗಲಿದ್ದಾನಾ ಪ್ರಭುದೇವ್?

ನಟ, ನಿರ್ದೇಶಕ ಮತ್ತು ಭಾರತದ ಪ್ರತಿಭಾವಂತ ನೃತ್ಯಪಟು ಪ್ರಭುದೇವ್ ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸಿನಿಮಾಗಳ ಮೂಲಕ ಸದ್ದು ಮಾಡಿದ್ದಿಲ್ಲ. ಅದೇನಿದ್ದರೂ ಅಫೇರುಗಳ ಕಾರಣದಿಂದಲೇ. ಇಂಥಾ ಪ್ರಭುದೇವ್ ಇತ್ತೀಚೆಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಂಡಿದ್ದ ಮರ್ಕ್ಯುರಿ ಚಿತ್ರವೂ ಸಾಧಾರಣವಾದ ಗೆಲುವು ಕಾಣಲೂ ಪ್ರಯಾಸ ಪಟ್ಟಿದೆ. ಪ್ರಭುದೇವ್ ವಿಚಾರದಲ್ಲಿ ಯಾಕೆ ಹೀಗಾಗುತ್ತಿದೆ ಅಂದರೆ ಹೆಚ್ಚಿನ ಮಂದಿ ಆತನ ಹೆಣ್ಣುಗಳ ಖಯಾಲಿಗಳತ್ತಲೇ ಬೆಟ್ಟು ಮಾಡಿ ತೋರಿಸುತ್ತಾರೆ.

 

 

ಪ್ರಭುದೇವನ ಬಗ್ಗೆ ಇಷ್ಟೆಲ್ಲ ಹೇಳಲು ಕಾರಣ ಇಲ್ಲದಿಲ್ಲ. ಇತ್ತೀಚೆಗಷ್ಟೇ ನಯನತಾರಾಳೊಂದಿಗಿನ ಬ್ರೇಕಪ್ಪಿನ ಮೂಲಕ ಸುದ್ದಿಯಾಗಿ ರಾಡಿಯೆಬ್ಬಿಸಿಕೊಂಡಿದ್ದ ಪ್ರಭುದೇವ ಅದಾಗಲೇ ಮತ್ತೋರ್ವ ನಟಿಯ ತೆಕ್ಕೆಗೆ ಬಿದ್ದಿದ್ದಾನೆ. ಇದೀಗ ಆಕೆಯ ಜೊತೆಗೇ ಮದುವೆಯಾಗೋದಾಗಿಯೂ ಸುದ್ದಿ ಹರಿಯ ಬಿಟ್ಟಿದ್ದಾನೆ. ಅಂದಹಾಗೆ ಪ್ರಭುದೇವನನ್ನು ಮದುವೆಯಾಗೋ ನಿರ್ಧಾರ ಮಾಡಿರುವಾಕೆ ಬಹುಭಾಷಾ ನಟಿ ನಿಖಿಷಾ ಪಟೇಲ್!

ನಿಖಿಷಾ ಪಟೇಲ್ ಈಗಾಗಲೇ ಕನ್ನಡದ ಡಕೋಟಾ ಪಿಕ್ಚರ್, ವರದನಾಯಕ, ನರಸಿಂಹ, ನಮಸ್ತೆ ಮೇಡಂ, ಅಲೋನ್ ಸೇರಿದಂತೆ ಪುಲಿ, ಅರಕು ರೋಡ್‌ಲೋ, ಗುಂಟೂರ್ ಟಾಕೀಸ್ ೨ ಮುಂತಾದ ಚಿತ್ರಗಳಲ್ಲಿ ನಟಿಸೋ ಮೂಲಕ ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾಳೆ.

 

 

 

ಎಬಿಸಿಡಿ ಚಿತ್ರದ ಮೂಲಕವೇ ಭಾರೀ ಖ್ಯಾತಿ ಗಳಿಸಿಕೊಂಡಿರುವ ನಿಖಿಷಾ ಪಟೇಲ್ ಈ ಮದುವೆ ರೂಮರಿನಿಂಗ ಸದ್ಯ ನೆಮ್ಮದಿ ಕಳೆದುಕೊಂಡಂತಿದ್ದಾಳೆ. ಯಾಕೆಂದರೆ ಮಾಧ್ಯಮದವರ ನಿರಂತರ ತನಿಖೆಗಳಿಂದ ಆಕೆಯ ನೆಮ್ಮದಿ ಕೆಟ್ಟಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರೋ ನಿಖಿಷಾ ಪಟೇಲ್ ಟ್ವೀಟ್ ಮಾಡಿ ಇದೆಲ್ಲ ಸುಳ್ಳು ಅಂದಿದ್ದಾಳೆ. ಆದರೆ ಈ ಮದುವೆ ರೂಮರಿನ ಹಿಂದೆ ಸತ್ಯ ಇದೆ ಅಂತ ಕೆಲ ಮಂದಿ ಹೇಳುತ್ತಿದ್ದಾರೆ.

ಪ್ರಭುದೇವ ಮತ್ತು ನಿಖಿಷಾ ನಡುವೆ ಈ ವ್ಯವಹಾರ ಆರಂಭವಾಗಿ ವರ್ಷಗಳೇ ಕಳೆಯುತ್ತಾ ಬಂದಿವೆಯಂತೆ. ಅದೇನೇ ಸೀಕ್ರೆಟ್ ಮಾಡಿದರೂ ಈ ಜೋಡಿ ಅನೇಕ ಸಂದರ್ಭದಲ್ಲಿ ಸಿನಿಮಾ ಮಂದಿಯ ಕೈಗೆ ಸಿಕದಕಿ ಬಿದ್ದಿದೆ. ಆದ್ದರಿಂದ ಇನ್ನೊಂದು ತಿಂಗಳಲ್ಲಿ ಈ ಜೋಡಿ ಮದುವೆಯಾಗೋದು ಪಕ್ಕಾ ಅನ್ನುವವರೂ ಇದ್ದಾರೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top