ಮನೋರಂಜನೆ

ನೂತನ ಸರ್ಕಾರ ಅಸ್ತಿತ್ವಕ್ಕೆ ಬರೋ ಮುಂಚೆನೇ ಅಡ್ವಾನ್ಸ್ ಬೇಡಿಕೆ ಸಲ್ಲಿಸಿದ ಬಿಲ್ಡಪ್ ಸ್ಟಾರ್ ಪ್ರಥಮ್.

ಯಾವುದೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಮಿಸ್ ಮಾಡದೇ ಫೇಸ್ಬುಕ್ ಅಲ್ಲಿ ರಿಯಾಕ್ಟ್ ಮಾಡೋವಾತ ಪ್ರಥಮ್.. ಬಿಗ್ ಬಾಸ್ ಶೋನಿಂದ ಹೊರಬಂದಮೇಲೆ ನಾನಾ ರಗಳೆಗಳನ್ನ ಮಾಡಿಕೊಂಡು ಸುದ್ದಿಯಲ್ಲಿದ್ದ ಈತ ಇತ್ತೀಚಿನ ಕೆಲವು ದಿನಗಳಿಂದ ಜನಮೆಚ್ಚುವಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇಂತಹ ಪ್ರಥಮ್ ಇದೀಗ ಮುಂದೆ ಅಸ್ತಿತ್ವಕ್ಕೆ ಬರಲಿರುವ ಸರ್ಕಾರಕ್ಕೆ ವಿಶೇಷವಾದ ಮನವಿ ಮಾಡಿಕೊಂಡಿದ್ದಾನೆ.

 

 

ನೆನ್ನೆತಾನೆ ಕನ್ನಡ ಚಿತ್ರರಂಗದ ಹಿರಿಯ ನಟ ಅಕ್ಕಿ ಚನ್ನಬಸಪ್ಪ ಅವರು ನಿಧನರಾಗಿದ್ದು ಕೊನೆಯಕಾಲದಲ್ಲಿ ಹೆತ್ತ ಮಕ್ಕಳೇ ಕಸದಂತೆ ಕಂಡರೂ ಇಳಿವಯಸ್ಸಿನಲ್ಲಿಯೂ ಮಡದಿಯೊಂದಿಗೆ ಸ್ವಾಭಿಮಾನದಿಂದಲೇ ಬದುಕಿದ್ದ ಆ ಹಿರಿಯ ಜೀವ ಐದು ವರ್ಷಗಳ ಹಿಂದೆ ಮಡದಿಯನ್ನು ಕಳೆದುಕೊಂಡು ಅನಾಥವಾಗಿತ್ತು. ಈಗ್ಗೆ ಒಂದಷ್ಟು ದಿನಗಳಿಂದ ತಮ್ಮ ಉತ್ಸಾಹವೆಲ್ಲ ಬಸಿದು ಹೋದಂತೆ ಅನಾರೋಗ್ಯಕ್ಕೀಡಾಗಿದ್ದ ಚನ್ನಬಸಪ್ಪನವರು ಕಡೆಗೂ ನಿಧನರಾಗಿದ್ದಾರೆ.. ಹಿನ್ನಲೆಯಲ್ಲಿ ಫೇಸ್ಬುಕ್ ಮೂಲಕ ಹಿರಿಯ ಕಲಾವಿದನಿಗೆ ಸಂತಾಪ ಸೂಚಿಸಿರುವ ಪ್ರಥಮ್ “ಹಿರಿಯ ಕಲಾವಿದರಿಗೆ ಸರ್ಕಾರ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ”

 

 

ಈ ಬಗ್ಗೆ ಪ್ರಥಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
“ತುಂಬಾ ಬೇಜಾರಾಗುತ್ತೆ.ಸರ್ಕಾರ ಹಿರಿಯ ಕಲಾವಿದರ ರಕ್ಷಣೆಗೆ ಏನಾದರೂ ಮಾಡಲೇಬೇಕು….ನಾವಂತು ಇಲ್ಲೇ ಇರ್ತೀವಿ,ಒದ್ದಾಡ್ಕೊಂಡು ಸಾಯ್ತೀವಿ…ನಮ್ಮ ಕರ್ಮ ಇದು…
ಆದ್ರೆ ಹಿರಿಯ ರಂಗಭೂಮಿ ಕಲಾವಿದರ ಪಾಡೇನು?ದಯವಿಟ್ಟು ಯಾವುದೇ ಸರ್ಕಾರ ಬರಲಿ,ದಯವಿಟ್ಟು ಇಂತಹ ಕಲಾವಿದರ ಕೊನೆದಿನಗಳಲ್ಲಿ ನೆಮ್ಮದಿಯಾಗಿ ಜೀವಿಸಲು ನೆರವಾಗಿ….🙏,ಬೆಳಿಗ್ಗೆ ಇವರ ಅಂತಿಮ ದರ್ಶನ ಪಡೆಯಲು ಹೋಗ್ತಾ ಇದೀನಿ.
RIP sir…​”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top