ದೇವರು

ಧರ್ಮ ಸಿಂಧು ಗ್ರಂಥದ ಪ್ರಕಾರ ನವಗ್ರಹ ದೋಷಗಳು ಇದ್ರೆ ತುಂಬಾ ಕಷ್ಟ ಪಡ್ಬೇಕಾಗುತ್ತೆ ಅದರ ನಿವಾರಣೆಗೆ ಹೀಗ್ಮಾಡಿ

ಧರ್ಮ ಸಿಂಧು ಗ್ರಂಥದ ಪ್ರಕಾರ ನವಗ್ರಹ ದೋಷಗಳ ನಿವಾರಣೆಗೆ ಯಾವ  ವಸ್ತುಗಳನ್ನು ದಾನ ಮಾಡಬೇಕೆಂದು ನಿಮಗೆ ಗೊತ್ತಾ ?

 

 

ಒಂಬತ್ತು ಗ್ರಹಗಳು ದೋಷಗಳನ್ನು ಸಂತೃಪ್ತಿ ಪಡಿಸಲು ಪವಿತ್ರವಾದ ಧರ್ಮಸಿಂಧು ಗ್ರಂಥದ ಪ್ರಕಾರ, ಯಾವ ಗ್ರಹ ದೋಷ  ನಿವಾರಣೆಗೆ ? ಯಾವ ದಾನವನ್ನು ಮಾಡಿದರೆ ?  ಶೀಘ್ರ ಫಲ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಸೂರ್ಯ ಗ್ರಹ.

ಸೂರ್ಯ ಗ್ರಹ ದೋಷ ನಿವಾರಣೆಗೆ ಗೋಧಿ, ಕೆಂಪು ವಸ್ತ್ರ, ಕೆಂಪು ಚಂದನ, ಕೆಂಪು ಹೂವು, ಬಂಗಾರ ಇದರಲ್ಲಿ ನಿಮಗೆ ಸಾಮರ್ಥ್ಯ ಇದ್ದಷ್ಟು ದಾನವನ್ನು ನೀಡಬಹುದು .

 

ಚಂದ್ರ ಗ್ರಹ.

ಒಂದು ಮೊರ ಪೂರ್ತಿಯಾಗಿ ಅಕ್ಕಿ, ಕರ್ಪೂರ , ಬೆಳ್ಳಿ , ಹಾಲು, ಬಿಳಿಯ ವಸ್ತ್ರ, ಚೊಂಬು, ಇಂತಹವನ್ನು ಚಂದ್ರ ಗ್ರಹನಿಗೆ ಪೂಜೆ ಮಾಡಿದ ನಂತರ, ಇದನ್ನು ದಾನ ಮಾಡಿದರೆ ಚಂದ್ರ ಗ್ರಹದ ದೋಷದಿಂದ ದೂರವಾಗಬಹುದು.

 

ಕುಜ ಗ್ರಹ .

ಮಂಗಳ ಗ್ರಹದ ದೋಷಕ್ಕೆ ಗೋಧಿ, ಕೆಂಪು ವಸ್ತ್ರ, ತೊಗರಿ, ಬೇಳೆ, ಒಣ ಖರ್ಜೂರ, ಬೆಲ್ಲ ಇಂಥದ್ದನ್ನು ದಾನ ಮಾಡುವುದರಿಂದ ಮಂಗಳ ಗ್ರಹವು ಸಂತೃಪ್ತಿ ಹೊಂದಿ ದೋಷ ನಿವಾರಣೆ ಮಾಡುತ್ತಾರೆ .

 

ಬುಧ ಗ್ರಹ.

ಬುಧ ಗ್ರಹದ ದೋಷಕ್ಕೆ ಹೆಸರು ಕಾಳು, ಹೆಸರು ಬೆಳೆ, ಬಾಳೆ ಹಣ್ಣು, ಕಂಚಿನ ಪಾತ್ರೆ, ಹಸಿರು ಬಣ್ಣದ ವಸ್ತ್ರ, ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ವಸ್ತುಗಳು , ಪುಸ್ತಕಗಳು , ಗೋವಿಗೆ ಹಸಿ ಹುಲ್ಲನ್ನು ತಿನ್ನಿಸುವುದು, ಸಹ ಬುಧ ಗ್ರಹದ ದೋಷದಿಂದ ಮುಕ್ತಿ ಪಡೆಯಬಹುದಾಗಿದೆ ಹಾಗೆ ಗಿಣಿಗಳನ್ನು ಸಾಕುವುದು, ತುಳಸಿ ಗಿಡಕ್ಕೆ  ಪೂಜೆ ಸಲ್ಲಿಸುವುದು.

 

 

ಗುರು ಗ್ರಹ.

ಗುರು ಗ್ರಹದ ದೋಷ ನಿವಾರಣೆಗೆ ಬಂಗಾರ, ಸಿಹಿ ಪದಾರ್ಥಗಳು, ಹಳದಿ ಬಣ್ಣದ ಹಣ್ಣುಗಳು, ಹಳದಿ ಬಟ್ಟೆಗಳು, ಕಡಲ ಕಾಳನ್ನು ದಾನ ಮಾಡುವುದು ಒಳ್ಳೆಯದು.

ಶುಕ್ರ ಗ್ರಹ.

ಶುಕ್ರ ಗ್ರಹದ ದೋಷ ನಿವಾರಣೆಗೆ ಹಸಿರು ಮತ್ತು ಕೆಂಪು ವಸ್ತ್ರ, ಸ್ತ್ರೀಯರ ಅಲಂಕಾರಿಕ ವಸ್ತುಗಳು, ಒಣ ಹಣ್ಣುಗಳು, ಅಲಸಂಡೆ ಕಾಳುಗಳು, ಇಂಥದ್ದನ್ನು ಶುಕ್ರ ಗ್ರಹನಿಗೆ ಪೂಜೆ ಮಾಡಿದ ನಂತರ ದಾನ ಮಾಡಿದರೆ ಶುಕ್ರ ಗ್ರಹದ ದೋಷದಿಂದ ದೂರವಾಗಬಹುದು.

ಶನಿ ಗ್ರಹ.

ಶನಿ ಗ್ರಹದ ದೋಷ ನಿವಾರಣೆಗೆ ನೀಲಿ ಮತ್ತು ಕಪ್ಪು ಬಣ್ಣದ ವಸ್ತ್ರಗಳು, ಕಪ್ಪು ಎಳ್ಳು, ಎಳ್ಳೆಣ್ಣೆ, ಕಬ್ಬಿಣದ ವಸ್ತುಗಳು, ದೇವಸ್ಥಾನಗಳಿಗೆ ಸಿಮೆಂಟ್, ಇಟ್ಟಿಗೆ, ಕಾರ್ಮಿಕರಿಗೆ ಅಥವಾ ಸಿಬ್ಬಂದಿಗೆ ವಸ್ತುಗಳು ಅಥವಾ ದನ ರೂಪದಲ್ಲಿಯಾದರೂ ದಾನ ಮಾಡಬಹುದು .

 

 

ರಾಹು ಗ್ರಹ.

ನೀಲಿ , ಬೂದಿ ಬಣ್ಣದ ವಸ್ತ್ರ, ಉದ್ದಿನ ಬೇಳೆಯನ್ನು ದಾನ ಮಾಡಿದರೆ, ರಾಹುವಿನ ಅನುಗ್ರಹ ದೊರೆತು ರಾಹು ಗ್ರಹದ ದೋಷದಿಂದ ಮುಕ್ತಿ ಪಡೆಯಬಹುದು .

ಕೇತು ಗ್ರಹ.

ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುವುದು, ಹುರುಳಿ ಕಾಳನ್ನು ದಾನ ಮಾಡುವುದು, ಕೇತುವಿನ ಅನುಗ್ರಹ ದೊರೆತು ಕೇತು ಗ್ರಹ ದೋಷದಿಂದ ಮುಕ್ತಿ ಪಡೆಯಬಹುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top