ಸಮಾಚಾರ

ವಿವಾದದ ಸುಳಿಯಲ್ಲಿ ಸಿಲುಕಿಕೊಂಡ ಸೋನಂ ಕಪೂರ್ ವಿವಾಹ.

ಬಾಲಿವುಡ್ ತುಂಬಾ ಸದ್ಯ ಸೋನಂ ಕಪೂರ್ ಮದುವೆಯ ಗೌಜು ಮುಗಿದಿಲ್ಲ. ಹಲವಾರು ವರ್ಷಗಳಿಂದ ರೂಮರ್‌ಗಳಿಗೆ ಆಹಾರವಾಗಿದ್ದ ಸೋನಂ ಕಪೂರ್ ಕಡೆಗೂ ತನ್ನ ಪ್ರಿಯಕರ ಉದ್ಯಮಿ ಆನಂದ್ ಅಹುಜಾನನ್ನು ಮದುವೆಯಾಗಿದ್ದಾಳೆ. ಬಾಲಿವುಡ್‌ನ ಅತಿರಥ ಮಹಾರಥರೆಲ್ಲ ಈ ಮದುವೆಯಲ್ಲಿ ಹಾಜರಿದ್ದು ಮಾಧ್ಯಮಗಳೂ ಇತ್ತ ಕಣ್ಣು ನೆಟ್ಟು ಕೂತಿದ್ದ ಬೆನ್ನಲ್ಲೇ ಈ ವಿವಾಹ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.

 

 

ಸೋನಂ ವಿವಾಹ ವೇಳೆಯಲ್ಲಿ ಸಿಖ್ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದ್ದು ಮದುವೆಯಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಸಿಖ್ಖರ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ ಅನ್ನು ತರಿಸಲಾಗಿತ್ತು. ಜೊತೆಗೆ ನವ ದಂಪತಿಗಳನ್ನು ಶುಭಹಾರೈಸಲು ಸಿಖ್ ಧರ್ಮಗುರು ಜಸ್ವಿಂದರ್ ಸಿಂಗ್ ಕೂಡ ಆಗಮಿಸಿದ್ದರು ಆದ್ರೆ ಈ ವೇಳೆ ಅವರು ಧರ್ಮಗ್ರಂಥದ ಹಿಂದೆ ನಿಂತಿದ್ದರು. ಸಿಖ್ ಧರ್ಮದ ಪ್ರಕಾರ ಪವಿತ್ರ ಗ್ರಂಥಕ್ಕೆ ನಮಸ್ಕರಿಸುವಾಗ ಧರ್ಮಗುರುಗಳು ಗ್ರಂಥದ ಮುಂದೆ ನಿಲ್ಲಬೇಕು ಅಲ್ಲದೇ ಇದೇ ವೇಳೆ ಆನಂದ್ ತಮ್ಮ ಪೇಟಾದಲ್ಲಿದ್ದ ಕಲ್ಗಿ (ಗರಿಗಳು)ಯನ್ನು ತೆಗೆಯದೆ ಹಾಗೆ ಧರ್ಮಗುರುಗಳಿಗೆ ನಮಸ್ಕರಿಸಿದ್ದಾರೆ. ಇದು ಈಗ ವಿವಾದಕ್ಕೆ ಸಿಲುಕಿದೆ.

 

 

ಈ ಬಗ್ಗೆ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಮಾಜಿ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದ್ದು ಅಲ್ಲಿಯೇ ನಿಂತಿ ಗರಿಯನ್ನು ತಗಿಸದ ಸಿಖ್ ಪುರೋಹಿತರ ವಿರುದ್ಧ ಹರಿಹಾಯ್ದಿದ್ದಾರೆ. ಸಿಖ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಹಿನ್ನೆಲೆಯಲ್ಲಿ ಸೋನಂ-ಆನಂದ್ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಸದಸ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top