ಸಮಾಚಾರ

ಬಿಜೆಪಿ ,ಕಾಂಗ್ರೆಸ್ -ಜೆಡಿಎಸ್ ಪಕ್ಷದವರ ಟ್ವೀಟ್ ಗುದ್ದಾಟ ,ಮೂಕನಾದ ವೀಕ್ಷಕ

ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಕೂಟ ನೂತನ ಸರ್ಕಾರ ರಚನೆಗಾಗಿ ರಾಜ್ಯಪಾಲರನ್ನು ಭೇಟಿ ಮಾಡಿ,117 ಶಾಸಕರ ಬೆಂಬಲ ತಿಳಿಯಪಡಿಸಿರುವ ಬೆನ್ನಲೇ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸುದ್ದಿ ಎಲ್ಲೆಡೆ ಹಬ್ಬಿಕೊಂಡಿದೆ.

ಗುರುವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ತಿಳಿಸಿದ್ದಾರೆ.

ರಾಜ್ಯಪಾಲ ವಜೂಭಾಯಿ ವಾಲಾ ಅವರ ಆದೇಶ ಪ್ರತಿ ಹೀಗಿದೆ

 

 

ಸಾಮಾಜಿಕ ಜಾಲತಾಣಗಳಲ್ಲಿ ಈಗ ಯಡಿಯೂರಪ್ಪ ಪ್ರಮಾಣ ವಚನ ಬಗ್ಗೆ ಭಾರಿ ವದಂತಿಗಳು ಹರಿದಾಡುತ್ತಿವೆ. ಕೆಲವು ಬಿಜೆಪಿ ನಾಯಕರು ಈ ಬಗ್ಗೆ ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್‌ ಕೂಡ ಮಾಡುತ್ತಿದ್ದಾರೆ.

 

 

ಸುರೇಶ್‌ ಕುಮಾರ್‌ ಟ್ವೀಟರ್‌ ಖಾತೆಯಿಂದ ಬಂದಿರುವ ಸಂದೇಶವನ್ನು ಕೇವಲ ನಾಲ್ಕು ನಿಮಿಷದಲ್ಲಿ ಡಿಲೀಟ್‌ ಮಾಡಲಾಗಿದೆ, ಸಂಸದ ಡಿ.ಕೆ. ಸುರೇಶ್‌ ನೇತೃತ್ವದ ಒಂದು ಬಸ್‌ನಲ್ಲಿ 35 ಶಾಸಕರು ರೆಸಾರ್ಟ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಾಮಾಜಿಕ ಜಾಲತಾಣ ನಿರ್ವಣೆಯ ಮುಖ್ಯಸ್ಥೆ ರಮ್ಯಾ ಪ್ರಮಾಣ ವಚನಕ್ಕೆ ಸಂಭಂದಿಸಿದಂತೆ ಹೊಸ ಟ್ವಿಸ್ಟ್ ಕೊಟ್ಟಿದ್ದು “ನಾಳೆ ಪ್ರಮಾಣ ವಚನ ತೆಗೆದುಕೊಳ್ಳುವುದು ನಿಜ ಆದರೆ ಯಡಿಯೂರಪ್ಪ ಅಲ್ಲ ಕುಮಾರಸ್ವಾಮಿ. ನಮ್ಮ ಮೂಲಗಳ ಪ್ರಕಾರ ಬೆಳಿಗ್ಗೆ 9.30ಕ್ಕೆ ರಾಜಭವನದಲ್ಲಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಾರೆ” ಎಂದು ಟ್ವೀಟ್ ಮಾಡುವ ಮೂಲಕ ಹೊಸ ಗೊಂದಲಕ್ಕೆ ನಾಂದಿ ಹಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top