ಸಿನಿಮಾ

ಭಟ್ಟರ ಸಿನಿಮಾದಲ್ಲಿ ಸದ್ದು ಮಾಡುತ್ತಿದೆ ರೇಸಿಂಗ್ ಕಾರ್

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೊಸ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಆ ಚಿತ್ರಕ್ಕೆ ನಾಯಕ ನಾಯಕಿಯ ಆಯ್ಕೆ ಕೂಡ ಆಗಿದೆ. ಈ ಚಿತ್ರಕ್ಕೆ ಪಂಚತಂತ್ರ ಎಂದು ಹೆಸರಿಡಲಾಗಿದೆ. ವಿಹಾನ್ ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ರೇಸಿಂಗ್ ಕಾರ್ ಈ ಸಿನಿಮಾದ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವಿಹಾನ್ ಗೌಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಟಿ ಸೋನಲ್‌ ಈಗ ಯೋಗರಾಜ್‌ ಭಟ್ಟರ ದೊಡ್ಡ ಚಿತ್ರ ‘ಪಂಚತಂತ್ರ’ದಲ್ಲಿ ಅಭಿನಯ ಮಾಡುವ ಖುಷಿಯಲ್ಲಿದ್ದಾರೆ.

 

 

 

ಈಗ ರಾಮಘರ ಅಥವಾ ಪಾಂಡವಪುರದಲ್ಲಿ ಶೂಟಿಂಗ್ ನಡೆಯಲಿದೆ, ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ನಡೆಯಲಿದೆ. ಇಲ್ಲಿ ಕೆಲ ಸನ್ನಿವೇಶಗಳನ್ನು ಶೂಟಿಂಗ್ ನಡೆಯಲಿದ್ದು, 18 ದಿನದೊಳಗೆ ಅಂದರೆ ಜೂನ್ 1 ರೊಳಗೆ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸಿನಿಮಾ ಸದಸ್ಯರೊಬ್ಬರು ಹೇಳಿದ್ದಾರೆ.

 

 

ಪಂಚತಂತ್ರ’ ಚಿತ್ರ ಪಕ್ಕಾ ಭಟ್ಟರ ಸ್ಟೈಲ್ ನಲ್ಲಿ ಇರಲಿದೆದ್ದು, ಯುವಕರಿಗೆ ಮತ್ತು ಕುಟುಂಬಕ್ಕೆ ಚಿತ್ರ ತುಂಬ ಇಷ್ಟ ಆಗಲಿದೆ ಎನ್ನಲಾಗಿದೆ. ಸೌತ್ ಇಂಡಿಯಾ ಖ್ಯಾತ ಸಾಹಸ ನಿರ್ದೇಶನಕಾರ ಜಾಲಿ ಬಾಸ್ಟಿನ್ ಈ ಸಿನೆಮಾಗೆ ಸಾಹಸ ನಿರ್ದೇಶನವಿದ್ದು, ರೇಸಿಂಗ್ ಟ್ರಕ್ ನಲ್ಲಿ ಪರಿಣತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top