ಮನೋರಂಜನೆ

2 ತಿಂಗಳಿಂದ ಅಮಿರ್ ಕೈನಲ್ಲಿ ಮಾಡಲಾಗದ ಈ ಕೆಲಸವನ್ನ ನಾಲ್ಕೇ ದಿನದಲ್ಲಿ ಮಾಡಿ ತೋರಿಸಿದ ಐಶ್ ಬೇಬಿ!

“ಹೆಣ್ ಮಕ್ಕಳೇ ಸ್ಟ್ರಾಂಗು ಗುರು” ಈ ಮಾತು ಮತ್ತೊಮ್ಮೆ ಸಾಭೀತಾಗಿದೆ. ಹೌದು ಬಾಲಿವುಡ್ ಮಿಸ್ಟರ್.ಪರ್ಫೆಕ್ಟ್ ಅಂತಾಳೆ ಫೇಮಸ್ ಆಗಿರೋ ಅಮಿರ್ ಖಾನ್ ಅವರ ಕೈನಲ್ಲಿ ಎರಡು ತಿಂಗಳಿನಿಂದ ಮಾಡೋದಕ್ಕೆ ಆಗದ ಕೆಲಸವನ್ನು ನೀಲಿ ಕಂಗಳ ಸುಂದರಿ ಐಶ್ವರ್ಯ ರಾಯ್ ಕೇವಲ ನಾಲ್ಕು ದಿನಗಳಲ್ಲೇ ಮಾಡಿ ಮುಗಿಸಿದ್ದಾರೆ.. ಅಷ್ಟಕ್ಕೂ ಐಶ್ ಮಾಡಿರೋ ಆ ಸಾಧನೆ ಏನು ಅಂತೀರಾ? ಮುಂದೆ ಓದಿ.

 

 

ಇವತ್ತು ಅದೆಷ್ಟೋ ಜನಕ್ಕೆ ಬ್ಯಾಂಕ್ ಅಕೌಂಟ್ ಇರುತ್ತೋ, ಇಲ್ಲವೋ.. ಗೊತ್ತಿಲ್ಲ. ಆದ್ರೆ ಫೆಸ್ ಬುಕ್ ಅಕೌಂಟ್ ಮಾತ್ರ ಇರಲೇಬೇಕು ಎನ್ನುವುದು 4G ಜಮಾನದ ವಾಡಿಕೆ. ಇನ್ನು ಸೆಲೆಬ್ರಿಟಿಗಳು, ಸಿನಿಮಾ ಸ್ಟಾರ್‍ಸ್‌ಗಳೆಂದರೆ ಅವರ ಕಥೆಯೇ ಬೇರೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್‌ಸ್ಟಾಗ್ರಾಮ್‌ನಲ್ಲಿ ಎಷ್ಟು ಜನ ನಮ್ಮ ಪೋಸ್ಟ್‌ಗಳನ್ನು ಗಮನಿಸುತ್ತಿದ್ದಾರೆ. ಎಷ್ಟು ಜನ ನಮಗೆ ಲೈಕ್, ಕಾಮೆಂಟ್ಸ್ ಮಾಡುತ್ತಾರೆ. ಎಷ್ಟು ಜನ ನಮ್ಮನ್ನು ಫಾಲೋ ಮಾಡುತ್ತಾರೆ ಎಂಬುದರ ಮೇಲೆಯೂ ಅವರ ಜನಪ್ರಿಯತೆ ಅಳೆಯಲ್ಪಡುತ್ತದೆ. ಇಂದು ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ನಮ್ಮ ಸ್ಯಾಂಡಲ್‌ವುಡ್‌ನಲ್ಲೂ ಬಹುತೇಕ ಸ್ಟಾರ್‍ಸ್‌ಗಳು ತಮ್ಮ ಫ್ಯಾನ್ಸ್‌ಗಳೊಂದಿಗೆ ಸಂಪರ್ಕ ಸಾಧಿಸಲು ಈ ಸೋಷಿಯಲ್ ಪ್ಲಾಟ್ ಫಾರಂಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

 

 

ಅದರಂತೆ ಎರಡು ತಿಂಗಳ ಹಿಂದೆಯಷ್ಟೇ ನಟ ಅಮಿರ್ ಖಾನ್ ಇನ್ಸ್ಟಗ್ರಾಮ್’ಗೆ ಪಾದಾರ್ಪಣೆ ಮಾಡಿದ್ದರು ಸೂಪರ್ ಸ್ಟಾರ್ ಆಗಿರುವ ಕಾರಣ ಅವರ ಅಭಿಮಾನಿಗಳು ಅವರನ್ನು ಮುಗಿಬಿದ್ದು ಫಾಲೋ ಮಾಡಿದ್ದಾರೆ ಪರಿಣಾಮ ಅಮಿರ್ ಖಾನ್ ಈವರೆಗೆ 8 ಲಕ್ಷ 77 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಆದರೆ ನಾಲ್ಕು ದಿನಗಳ ಹಿಂದೆಯಷ್ಟೇ ಇನ್ಸ್ಟಗ್ರಾಮ್’ಗೆ ಎಂಟ್ರಿ ಕೊಟ್ಟಿದ್ದ ಐಶ್ವರ್ಯ ರೈ ಅಮಿರ್ ಖಾನ್ ದಾಖಲೆಯನ್ನು ದೂಳೀಪಟಮಾಡಿದ್ದು ನಾಲ್ಕೇ ದಿನಕ್ಕೆ ಈಗ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದುಕೊಂಡಿದ್ದಾಳೆ. ಈ ಮೂಲಕ ಜನಪ್ರಿಯತೆಯಲ್ಲಿ ಕೇವಲ ಸ್ಟಾರ್ ನಟರು ಮಾತ್ರವಲ್ಲ ಸ್ಟಾರ್ ನಟಿಯರೂ ಮುಂದಿರುತ್ತಾರೆ ಎನ್ನುವುದನ್ನು ಸಾಭೀತುಪಡಿಸಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top