ಮನೋರಂಜನೆ

ನಿರ್ದೇಶಕ ಸಂತೋಷ್ ಆನಂದರಾಮ್’ರ ನೂರಾ ನಾಲಕ್ಕು ವರ್ಷದ ಮುತ್ತಾತ ಇನ್ನಿಲ್ಲ.

ಕನ್ನಡದ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿರುವ ಸಂತೋಷ್ ಆನಂದ್‌ರಾಮ್ ಸಂಕಟದಲ್ಲಿದ್ದಾರೆ. ಅವರ ಪ್ರೀತಿ ಪಾತ್ರರಾಗಿದ್ದ ಶತಾಯುಷಿಯೂ ಆಗಿದ್ದ ಮುತ್ತಾತ ನೆನ್ನೆ ವಿಧಿವಶರಾಗಿದ್ದಾರೆ. ಈ ಬಗ್ಗೆ ಸಂತೋಷ್ ಭಾವುಕರಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಜಾಹೀರು ಮಾಡಿ ತಮ್ಮ ಮುತ್ತಾತನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 

 

ಸಂತೋಷ್ ಆನಂದ್‌ರಾಮ್ ಅವರ ತಂದೆಯವರ ತಂದೆಯ ತಂದೆ ಇದೀಗ ವಿಧಿವಶರಾಗಿರುವ ಶತಾಯುಷಿ. ಈ ಬಗ್ಗೆ ಸಂತೋಷ್ ‘104ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ. ಸ್ವಾವಲಂಬಿಯಾಗಿ ನೂರು ವರ್ಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ. ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಭೂತಗಳಲ್ಲಿ ಅಮರ’ ಅಂದಿದ್ದಾರೆ.

ಬಹುಶಃ ನೂರಾ ನಾಲಕ್ಕು ವರ್ಷದ ಮುತ್ತಾತ ಇದುವರೆಗೆ ಜೊತೆಗೇ ಇದ್ದದ್ದು ಸಂತೋಷ್ ಆನಂದ್ ರಾಮ್ ಅವರ ಪುಣ್ಯವೇ. ಅವರಿಗೆ ನೂರಾ ನಾಲಕ್ಕು ವರ್ಷವಾಗಿದ್ದರೂ ಕಡೆಯವರೆಗೂ ಸ್ವಾವಲಂಬಿಯಾಗಿಯೇ ಬದುಕಿದ್ದರಂತೆ. ಕೆಲ ತಿಂಗಳ ಹಿಂದೆ ಮರಿ ಮೊಮ್ಮಗನ ಮದುವೆಯ ಸಂದರ್ಭದಲ್ಲಿಯೂ ಅವರು ಹಾಜರಿದ್ದು ಹರಸಿದ್ದರಂತೆ. ಆದರೆ ಇದೀಗ ಅದೆಲ್ಲ ನೆನಪಾಗಿಯಷ್ಟೇ ಉಳಿದುಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top