ಮನೋರಂಜನೆ

ಟಗರು ಚಿತ್ರ ತಂಡದಿಂದ ಮತ್ತೊಂದು ಮತ್ತೊಂದು ಸಿಹಿಸುದ್ದಿ.

ಶಿವಣ್ಣ ಅಭಿನಯದ ಟಗರು ಚಿತ್ರದ ಮೂಲಕ ಒಂದು ಪರಿಪೂರ್ಣವಾದ ಗೆಲುವನ್ನು ದಾಖಲಿಸಿರುವ ರಾ ಸಿನಿಮಾಗಳ ಸರದಾರ ಸುಕ್ಕಾ ಸೂರಿ ತಮ್ಮ ಮುಂದಿನ ಚಿತ್ರದ ಬಾರಿ ಅಂತೂ ಬಾಯ್ಬಿಟ್ಟಿದ್ದಾರೆ. ಹಾಗೆಯೇ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸೂರಿಯ ಮುಂದಿನ ಚಿತ್ರದಲ್ಲಿ ಡಾಲಿ ಧನಂಜಯ ಹೀರೋ ಆಗುತ್ತಿದ್ದಾನೆ.

 

 

ಟಗರು ಚಿತ್ರದ ನಂತರ ಸೂರಿಯವರ ನಿರ್ದೇಶನದಲ್ಲಿ ಕಾಗೆ ಬಂಗಾರ ಚಿತ್ರ ಮೂಡಿಬರುತ್ತದೆ ಎನ್ನುವ ನಿರೀಕ್ಷೆಯಿತ್ತು ಆದರೆ ಕಾರಣಾಂತರಗಳಿಂದ ಆ ಚಿತ್ರವನ್ನು ಕೈಬಿಟ್ಟಿರುವುದಾಗಿ ಹೇಳಿಕೊಂಡಿರುವ ಸೂರಿ ಧನಂಜಯ್ ಅವರನ್ನುಹಾಕಿಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ಟಗರು ಚಿತ್ರವನ್ನು ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ​ ಬಂಡವಾಳ ಹಾಕ್ತಿದ್ದಾರೆ

DYSP KS ಉಮೇಶ್ ರಚಿಸಿರುವ ಕತೆಗೆ ಸೂರಿ ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಸ್ಕ್ರಿಪ್ಟ್ ಸಂಬಂದಿಸಿದ ಕೆಲಸ ಕಾರ್ಯಗಳು ಚಾಲ್ತಿಯಾಗಿವೆ. ಧನಂಜಯ್ ಅವರನ್ನು ಹೊರತು ಪಡಿಸಿದರೆ ಮತ್ಯಾವ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಯಾವುದೇ ಮಾಹಿತಿಯನ್ನು ನಿರ್ದೇಶಕ ಸೂರಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರ ಮುಂದಿನ ಆರು ತಿಂಗಳಲ್ಲಿ ಶುರುವಾಗಲಿದೆ ಎನ್ನುವುದು ಸೂರಿಯವರ ಮಾತಿನ ಸಂಕ್ಷಿಪ್ತ ಸಾರಾಂಶ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top