ಸಮಾಚಾರ

ದೇವರು ಕಿತ್ತುಕೊಂಡ ತಂಗಿಯ ನೆನಪಿಗೋಸ್ಕರ ದೇವಸ್ಥಾನವನ್ನೇ ಕಟ್ಟಿದ ಅಣ್ಣ!

ತಾಯಿ ಮಗನ ನಡುವೆ ಇರುವ ಪ್ರೀತಿ ಅಣ್ಣ-ತ೦ಗಿಯರ ನಡುವೆ ಇರುತ್ತದೆ. ಕೆಲವರು ತಮ್ಮ ಹೆಂಡ್ತಿ ಅಥವಾ ತಾಯಿಯ ತೀರಿಕೊಂಡ ನಂತರ ಅವರ ನೆನಪಿಗಾಗಿ ದೇವಾಲಯ ಮತ್ತು ಸ್ಮಾರಕಗಳನ್ನ ಕಟ್ಟಿಸಿರುವುದನ್ನು ನೀವು ನೋಡಿರುತ್ತೀರಿ ಆದರೆ ಇಲ್ಲೊಬ್ಬ ಮಹಾನ್ ಸಹೋದರ ಸತ್ತುಹೋದ ತನ್ನ ತಂಗಿಯ ನೆನಪಿಗೋಸ್ಕರ ದೇವಾಲಯವನ್ನೇ ಕಟ್ಟಿಸಿ ಸೋದರತ್ವವನ್ನು ಮೆರೆದಿದ್ದಾನೆ.

 

 

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶಿವಪ್ರಸಾದ್ ಎಂಬಾತ ಆರ್ಥಿಕವಾಗಿ ಬಡವನಾಗಿದ್ದು ಆತನಿಗೆ ಒಬ್ಬಳು ಮುದ್ದು ತಂಗಿ ಇದ್ದಳು. ಬಡವನೇ ಆಗಿದ್ದರೂ ಇತರರೊಂದಿಗೆ ಕೈಚಾಚದೆ ಕಷ್ಟಗಳು ಗೊತ್ತಾಗದಂತೆ ತನ್ನ ತಂಗಿಯನ್ನು ಬೆಳೆಸಿದ್ದನು. ಆಕೆಯ ಹೆಸರು ಸುಬ್ಬಲಕ್ಷ್ಮಿ, ಬಿಎ ಪಾಸಾಗಿ ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು..

ಆಕೆ ಕೆಲಸಕ್ಕೆ ಹೋಗಲು ಪ್ರತಿದಿನವೂ ರೈಲನ್ನು ನೆಚ್ಚಿಕೊಂಡಿದ್ದಳು ಆದರೆ ಒಂದು ದಿನ ಅಣ್ಣನ ಜೊತೆ ಬೈಕ್’ನಲ್ಲಿ ಆಫೀಸಿಗೆ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ವ್ಯಾನ್ ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ, ಶಿವಪ್ರಸಾದ್ ಮತ್ತು ಆತನ ತಂಗಿ ಕೆಳಗೆ ಬಿದ್ದರು.. ಅಪಘಾತದಲ್ಲಿ ಸುಬ್ಬುಲಕ್ಷ್ಮಿಗೆ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತ ಸ್ರಾವ ಆದ ಕಾರಣ ಅಣ್ಣನ ಮಡಿಲಿನಲ್ಲಿ ಪ್ರಾಣಬಿಟ್ಟಳು.

 

 

ಮುದ್ದಾಗಿ ಸಾಕಿದ್ದ ತಂಗಿ ತನ್ನ ಮಡಿಲಿನಲ್ಲಿ ಪ್ರಾಣ ಬಿಡುವುದನ್ನು ಕಂಡು ದಿಗ್ಬ್ರಮೆಗೊಂಡ ಶಿವಪ್ರಸಾದ್’ಗೆ ತಂಗಿಯ ಸಾವಿನ ನೋವನ್ನು ಅರಗಿಸಿಕೊಳ್ಳಲಾಗಲಿಲ್ಲ. ತಂಗಿಯ ಸಾವಿನ ನೋವಿನಿಂದ ಹೊರಬರಲಾಗದ ಶಿವಪ್ರಸಾದ್ ದೇವರು ಕಿತ್ತುಕೊಂಡ ತನ್ನ ತಂಗಿಯ ನೆನಪಿಗಾಗಿ ದೇವಸ್ಥಾನವೊಂದನ್ನು ಕಟ್ಟಿ ತನ್ನ ತಂಗಿಯ ಪ್ರತಿಮೆಗೆ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top