ಸಮಾಚಾರ

ನಮ್ಮ ಶಾಸಕರ ಭದ್ರತೆ ನಾವು ನೋಡಿಕೊಳ್ತೀವಿ ಎಂದ ಡಿಕೆ ಶಿವಕುಮಾರ್

ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಈಗ ರೆಸಾರ್ಟ್ ಮೊರೆ ಹೋಗಿದೆ ಎನ್ನಲಾಗಿದೆ. ರೆಸಾರ್ಟ್ ನಲ್ಲಿ ಇರುವ ಕಾಂಗ್ರೆಸ್ ಶಾಸಕರಿಗೆ ವಿಶೇಷ ಭದ್ರತೆ ನೀಡುವ ಅವಶ್ಯಕತೆ ಇಲ್ಲ. ನಮ್ಮ ಭದ್ರತೆಯನ್ನು ನಾವು ನೋಡಿಕೊಳ್ಳಬಲ್ಲೆವು ಎಂದು ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

 

 

ಇಂದು ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರು ವಿಧಾಸಸೌಧದ ಗಾಂಧಿ ಪ್ರತಿಮೆಯ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಡಿಕೆ ಶಿವಕುಮಾರ್ ನಮ್ಮ ಎಲ್ಲ ಶಾಸಕರು ಜೊತೆಗಿದ್ದರೆ. ಅನಾನಸ್ ಸಿಂಗ್ ಕೂಡ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ಅಧಿಕಾರಕ್ಕೆ ಬರುವುದು ಶತಶಿದ್ದ ಎಂದು ಹೇಳಿದ್ದಾರೆ.

 

 

ಕಾಂಗ್ರೆಸ್ ಪಕ್ಷ ಶಾಸಕರ ರಕ್ಷಣೆಯ ಜವಾಬ್ದಾರಿಯನ್ನು ಶಾಸಕ ಡಿಕೆ ಶಿವಕುಮಾರ್ ಹಾಗು ಸಹೋದರರಿಗೆ ಒಪ್ಪಿಸಿದ್ದು. ಈ ಹಿನ್ನಲೆಯಲ್ಲಿ ಶಾಸಕರನ್ನು ಈಗಲ್ಟನ್ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕ್ಷಣ ಕ್ಷಣಕ್ಕೂ ರಾಜ್ಯ ರಾಜಕಾರಣದಲ್ಲಿ ರೋಚಕತೆ ಮೂಡುತ್ತಿದ್ದೆ. ಯಾವ ಶಾಸಕರು ಯಾವ ಪಕ್ಷಕ್ಕೆ ಹಾರುತ್ತಾರೆ ಕಾದು ನೋಡಬೇಕಿದೆ.

 

 

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top