ಧರ್ಮ

ರಂಜಾನ್ ಪವಿತ್ರ ಉಪವಾಸದ ಸಮಯದಲ್ಲಿ ಈ ಆಹಾರಗಳನ್ನ ಅಪ್ಪಿತಪ್ಪಿನೂ ಸೇವನೆ ಮಾಡಬಾರ್ದು

ಈ ಒಂದು ತಿಂಗಳ ಕಠಿಣ ವೃತಾಚರಣೆಗಳ ಬಳಿಕ ಈದ್-ಉಲ್-ಫಿತ್ರ ಬರುತ್ತದೆ , ಈ ಬಾರಿಯ ರಂಜಾನ್ 16 ಮೇ ಸಂಜೆ ಶುರುವಾಗಿ ಜೂನ್ 14 ರ ಸಂಜೆ ಮುಗಿಯುತ್ತದೆ .ನಮಾಜ್, ರೋಜಾ, ಕುರಾನ್ ಪಠಣ ಇತ್ಯಾದಿಗಳ ಮೂಲಕ ಸ್ವರ್ಗ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

ರಂಜಾನ್ ಕೆಟ್ಟ ಆಹಾರ ಪದ್ಧತಿಗಳ ಸರಪಣಿಯನ್ನು ಮುರಿಯಲು ಉತ್ತಮ ಅವಕಾಶ, ಆದರೆ ಹೆಚ್ಚಿನ ಜನರು ಈ ತಿಂಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತಿಲ್ಲ, ಸಾಮಾನ್ಯ ಆಹಾರದ ಪ್ರಮಾಣಕ್ಕಿಂತ ಕಡಿಮೆಯಿರುವ ಆಹಾರವು ಸಾಕಷ್ಟು ಸಮತೋಲಿತವಾಗಿದ್ದು, ನಿಮಗೆ ಆರೋಗ್ಯಕರವಾಗಿ ಮತ್ತು ರಂಜಾನ್ ಅವಧಿಯವರೆಗೆ ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ .

 

 

ಬೆಳಿಗ್ಗೆ ನಾಲ್ಕೂವರೆಗೂ ಮುನ್ನ ಸೇವಿಸುವ ಆಹಾರವನ್ನು ಸುಹೂರ್ ಎಂದು ಕರೆಯುತ್ತಾರೆ , ಸೂರ್ಯಾಸ್ತದ ಸಮಯಕ್ಕೆ ಉಪವಾಸವನ್ನು ಸಂಪನ್ನಗೊಳಿಸುವುದಕ್ಕೆ ಇಫ್ತಾರ್ ಎಂದು ಕರೆಯುತ್ತಾರೆ.

 

ಸುಹೂರ್ ಸಮಯದಲ್ಲಿ ಸೇವಿಸಬೇಕಾದ ಆಹಾರ

ದಿನವಿಡೀ ದೀರ್ಘಾವಧಿಯ ಶಕ್ತಿಯನ್ನು ಒದಗಿಸುವ ಆರೋಗ್ಯಕರ ಊಟವನ್ನು ಒಳಗೊಂಡಿರಬೇಕು. ದೀರ್ಘಾವಧಿಯ ಶಕ್ತಿಯನ್ನು ಒದಗಿಸುವ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಮತ್ತು ಹೆಚ್ಚಿನ ಫೈಬರ್ ಆಹಾರಗಳಾಗಿವೆ.

ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಶಕ್ತಿಯಿಂದ ಸಮೃದ್ಧವಾಗಿರುವ ಆಹಾರಗಳಾಗಿವೆ ಆದರೆ ದಿನವಿಡೀ ನಿಧಾನವಾಗಿ ಈ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಉದಾಹರಣೆಗಳು : ಗೋಧಿ ,ಬ್ರೆಡ್ ,ಬೀನ್ಸ್, ಮತ್ತು ಅಕ್ಕಿ ಮುಂತಾದವು

ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರಗಳು ಮತ್ತು ನಿಧಾನವಾಗಿ ಜೀರ್ಣವಾಗುವ ಹಣ್ಣುಗಳು ಮತ್ತು ತರಕಾರಿಗಳು ಸೇರಿವೆ.

ದಿನಕ್ಕೆ ಅವಶ್ಯಕವಾದ ಉಪ್ಪು ಹಾಗು ನೀರನ್ನು ಸೇವನೆ ಮಾಡಬೇಕು , ಹೆಚ್ಚು ಹಣ್ಣಿನ ರಸ ಸೇವನೆ ಮಾಡಬೇಕು ಹಾಗೆಯೇ ಕೆಫಿನ್ ರಹಿತ ಪಾನೀಯಗಳನ್ನು ದೂರ ಇಡಬೇಕು .

 

 

ಇಫ್ತಾರ್ ಸಮಯದಲ್ಲಿ ಸೇವಿಸಬೇಕಾದ ಆಹಾರ

ಮುಸ್ಲಿಮರು ತಮ್ಮ ಉಪವಾಸವನ್ನು ಮುರಿಯಲು ಇಫ್ತಾರ್ ಪಾಲನೆ ಮಾಡುತ್ತಾರೆ , ಖರ್ಜುರ ಹಾಗು ನೀರನ್ನು ಸೇವನೆ ಮಾಡಿ ಸಂಜೆ ಉಪವಾಸ ಕೊನೆ ಮಾಡುತ್ತಾರೆ ಇದು ದೇಹದಲ್ಲಿ ನೀರು ಹಾಗು ಲವಣವನ್ನು ಸೇರಿಸಲು ಸಹಾಯ ಮಾಡುತ್ತದೆ .

ಖರ್ಜುರ ಸೇವನೆಯ ಪ್ರಯೋಜನಗಳು ಹೀಗಿವೆ:

ಜೀರ್ಣಿಸಿಕೊಳ್ಳಲು ಸುಲಭ
ಅತಿಯಾಗಿ ತಿನ್ನುವದನ್ನು ತಡೆಗಟ್ಟುವ ಹಸಿವಿನ ಭಾವನೆ ಕಡಿಮೆ ಮಾಡುತ್ತದೆ .
ಸಕ್ಕರೆ ಶಕ್ತಿಯನ್ನು ವೃದ್ಧಿಸುತ್ತದೆ, ದೇಹದಲ್ಲಿ ಪೋಷಕಾಂಶಗಳನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ .
ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ .

 

 

ಈ ಆಹಾರಗಳನ್ನು ಸೇವನೆ ಮಾಡಬಾರದು :

ಹುರಿದ ಆಹಾರಗಳು ಉದಾಹರಣೆಗೆ ಹುರಿದ ಸಮೋಸಾಗಳು, ಹುರಿದ ಚಿಕನ್, ಹುರಿದ ಆಲೂಗೆಡ್ಡೆ ಚಿಪ್ಸ್ ಮುಂತಾದವು
ಹೆಚ್ಚಿನ ಸಕ್ಕರೆಯುಕ್ತ ಆಹಾರ ಹಾಗು ಹೆಚ್ಚಿನ ಕೊಬ್ಬಿನ ಆಹಾರಗಳು , ಉದಾಹರಣೆಗೆ: ಗುಲಾಬ್ ಜಾಮುನ್, ಜಾಲೆಬಿ, ಬಾದಾಮ್ ಹಲ್ವಾ , ಬೆಣ್ಣೆ ಇತ್ಯಾದಿ
ಎಣ್ಣೆಯುಕ್ತ ಆಹಾರಗಳನ್ನು ತಿನ್ನಬಾರದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top