ಸಮಾಚಾರ

ಹಲ್ಲು ಜುಮ್ ಅನ್ನೋದು ಅಥವಾ ಹಲ್ಲು ತುಂಬಾ ನೋವಿದ್ರೆ ಹೀಗೆ ಸುಲಭವಾದ ಮನೆ ಮದ್ದು ಮಾಡ್ಕೊಂಡು ವಾಸಿ ಮಾಡ್ಕೊಳ್ಳಿ

ಹಲ್ಲು ನೋವಿಗೆ ಮನೆಮದ್ದು:

ಹಲ್ಲು ನೋವಿನ ಸಮಸ್ಯೆ ತುಂಬಾ ಜನರಲ್ಲಿ ನಾವು ಪರಿಹಾರ ಕೇಳಿರುತ್ತಿರಿ ,ಈ ಹಲ್ಲು ನೋವು ಎಷ್ಟು ಬಾಧಿಸುತ್ತದೆ ಅಂದರೆ ನಾವು ಊಟ ಮಾಡಲು ಮತ್ತು ನಿದ್ಧೆ ಮಾಡಲು ತುಂಬಾ ಕಷ್ಟ ವಾಗುತ್ತದೆ.

 

ಈ ಹಲ್ಲು ನೋವಿಗೆ ಮೂಲ ಕಾರಣ:

 

೧.ಜಾಸ್ತಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಇರುವ ಪದಾರ್ಥಗಳನ್ನೂ ತಿನ್ನುವುದು,ಉದಾಹರಣೆಗೆ :ಕೇಕ್,ಕೋಲಾ.
೨.ತುಂಬಾ ಬಿಸಿ ಅಥವಾ ತುಂಬಾ ತಣ್ಣಗಿನ ಆಹಾರ ಸೇವನೆ.
೩.ಹಲ್ಲಿನ ಹುಳುಕು
೪.ಹಲ್ಲು ಏನಾದ್ರು ಮುರಿದಿದ್ದರೆ.

ಹೀಗೆ ಬಾಧಿಸುವ ಹಲ್ಲು ನೋವಿನಿಂದ ಹೊರ ಬರಲು ನಾವು ಹೇಳುವಂತ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಹಲ್ಲಿನ ಸಮಸ್ಯೆ ಯಿಂದ ಹೊರಬನ್ನಿ.

 

೧.ಕೊಬ್ಬರಿ ಎಣ್ಣೆ ಮತ್ತು ಲವಂಗ:

 

 

ಸ್ವಲ್ಪ ಕೊಬ್ಬರಿ ಎಣ್ಣೆ ಯನ್ನು ಬಿಸಿ ಮಾಡಿಕೊಂಡು ಅದರಲ್ಲಿ ಒಂದೆರಡು ಲವಂಗವನ್ನು ಉರಿದುಕೊಳ್ಳಿ ನಂತರ ಅದು ತಣ್ಣಗಾದ ಮೇಲೆ ಚೆನ್ನಾಗಿ ರುಬ್ಬಿಕೊಂಡು ಹಲ್ಲು ನೋವುತ್ತಿರುವ ಜಾಗದಲ್ಲಿ ಹಾಕಿ 10 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ,ಹೀಗೆ ಮಾಡುವುದರಿಂದ ನಿಮ್ಮ ಹಲ್ಲು ನೋವಿನ ಸಂಪೂರ್ಣವಾಗಿ ಮಾಯವಾಗುತ್ತದೆ.

 

೨.ನಿಂಬೆ ರಸ ಮತ್ತು ಹಿಂಗು:

 

 

1 ಚಮಚ ನಿಂಬೆ ರಸಕ್ಕೆ 1 ಚಮಚ ಹಿಂಗು ಸೇರಿಸಿ ಅದರ ಮಿಶ್ರಣ ವನ್ನು ಹಲ್ಲು ನೋವುತ್ತಿರುವ ಜಾಗದಲ್ಲಿ ಹಾಕಿ 5 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು .

 

೩.ಸಾಸಿವೆ ಎಣ್ಣೆ ಮತ್ತು ಅರಿಶಿನ ಪುಡಿ:

 

 

ಒಂದು ಚಮಚ ಸಾಸಿವೆ ಎಣ್ಣೆ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹಲ್ಲು ನೋವುತ್ತಿರುವ ಜಾಗದಲ್ಲಿ ಹಾಕಿ 5 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು

ಈ ಮೇಲಿನ ಮನೆಮದ್ದನ್ನು ಬಳಸಿ ಅದರ ಉಪಯೋಗ ಪಡೆದುಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top