ಧರ್ಮ

ಪವಿತ್ರ ರಂಜಾನ್ ಹಬ್ಬದ ಉಪವಾಸದ ಹಿಂದಿರುವ ವೈಜ್ಞಾನಿಕ ಕಾರಣಗಳು ಗೊತ್ತಾದ್ರೆ ಈ ಆಚರಣೆಯನ್ನು ಗೌರವಿಸುತ್ತೀರಾ

ವರ್ಷಕೊಮ್ಮೆ ಬರುವ ಉಪವಾಸದ ಹಬ್ಬ ರಂಜಾನ್, ಸೂರ್ಯ ಉದಯಿಸುವ ಮೊದಲು ಸೂರ್ಯಾಸ್ತವಾಗುವ ನಂತರದವರೆಗೂ ಯಾವುದೇ ರೀತಿಯ ಆಹಾರವನ್ನಾಗಲಿ ಸೇವಿಸದೆ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ಮಾಡದೆ ಎಲ್ಲರನ್ನು ಪ್ರೀತಿಸುವುದನ್ನು ಕಲಿಸುವ ಹಬ್ಬ ರಂಜಾನ್.

 

 

ಸೂರ್ಯೋದಯಕ್ಕೆ ಮುಂಚೆ ಸೇವಿಸುವ ಆಹಾರ ‘ಸೆಹರಿ’ ಸೂರ್ಯಾಸ್ತದ ನಂತರ ಸೇವಿಸುವ ಆಹಾರ ‘ಇಫಾರಿ’. ಕುರಾನ್‌ನ ಎರಡನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವಂತೆ ಆಯತ್‌ ನಂ-183 ಸಾರಾಂಶದ ಪ್ರಕಾರ ಯಾವುದೇ ರಾಗ ದ್ವೇಷಗಳಿಲ್ಲದೆ ರಂಜಾನ್ ಆಚರಣೆ ಮಾಡಿದರೆ ಮಾಡಿರುವ ಪಾಪ ಕರ್ಮಗಳೆಲ್ಲ ಕಳೆದು ಮುಕ್ತಿ ಹೊಂದಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ .

 

ಉಪವಾಸದ ಮಹತ್ವ :

 

ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆತ್ಮೀಯ ಜೀವನವನ್ನು ಹೆಚ್ಚಿಸುತ್ತದೆ, ಮನುಷ್ಯನ ಅಂತರ್‌ಶುದ್ಧಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗವಾಗಿದೆ, ಸಂಜೆಯ ಏಳು ಗಂಟೆಯವರೆಗೆ ಅನ್ನಾಹಾರಗಳನ್ನು ತ್ಯಜಿಸುವುದೇ ಉಪವಾಸವಲ್ಲ, ಬದಲಿಗೆ ಈ ಅವಧಿಯಲ್ಲಿ ಮನಸ್ಸಿನಲ್ಲಿ ಏಳುವ ಬಯಕೆಗಳನ್ನು ನಿಗ್ರಹ ಮಾಡಿಕೊಂಡು ತಮ್ಮನ್ನು ತಾವು ಹತೋಟಿಯಲ್ಲಿ ಇಟ್ಟುಕೊಳ್ಳುವುದಲ್ಲದೆ ಒಳ್ಳೆಯ ಆಲೋಚನೆಗಳನ್ನು ಮಾಡಬೇಕಾಗುತ್ತದೆ

ಈ ಒಂದು ತಿಂಗಳ ಕಠಿಣ ವೃತಾಚರಣೆಗಳ ಬಳಿಕ ಈದ್-ಉಲ್-ಫಿತ್ರ ಬರುತ್ತದೆ , ಈ ಬಾರಿಯ ರಂಜಾನ್ 16 ಮೇ ಸಂಜೆ ಶುರುವಾಗಿ ಜೂನ್ 14 ರ ಸಂಜೆ ಮುಗಿಯುತ್ತದೆ , ನಮಾಜ್, ರೋಜಾ, ಕುರಾನ್ ಪಠಣ ಇತ್ಯಾದಿಗಳ ಮೂಲಕ ಸ್ವರ್ಗ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಾರೆ.

 

 

ರಂಜಾನ ಕಳೆದ ಮೇಲೆ ಷವ್ವಾಲ್ ತಿಂಗಳು ಆರಂಭವಾಗುತ್ತದೆ. ಇಡೀ ರಂಜಾನ ತಿಂಗಳು ಕಠಿಣ ಉಪವಾಸ ವೃತ ಅಭ್ಯಾಸ ಮಾಡಿದ ಮುಸ್ಲೀಂರು ಷವ್ವಾಲಿನ ಪ್ರಥಮ ದಿನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಅತ್ತರ್ (ಸುಗಂಧ) ಹಚ್ಚಿಕೊಂಡು ಭಗವಂತನ ನಾಮಸ್ಮರಣೆ ಮಾಡುತ್ತ ಸಾಮೂಹಿಕ ನಮಾಜ್ ಮಾಡುವರು, ಈ ಹಬ್ಬ ಸರ್ವರಿಗೂ ಶಾಂತಿ, ಸಮಾಧಾನ, ಅನ್ಯೋನ್ಯತೆಯನ್ನು ಸಾರುತ್ತದೆ .

 

ರಂಜಾನ್ ಆಚರಣೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣಗಳು ಏನು ಗೊತ್ತೇ ?

 

ರಂಜಾನ್ ಆಚರಣೆಯಲ್ಲಿ ಹಸಿವು ಮತ್ತು ಬಾಯಾರಿಕೆಯ ಮೂಲಕ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು , ಮಿತಿಯಾದ ಊಟ ಕೆಟ್ಟ ಕೊಬ್ಬು ದೇಹದಲ್ಲಿ ಶೇಖರಣೆ ಆಗುವುದನ್ನು ತಡೆಯುತ್ತದೆ ,

ಅಧ್ಯಯನಗಳು ದ್ರವ ಸೇವನೆ 30 ದಿನಗಳವರೆಗೆ ಕಡಿಮೆಯಾಗುವುದರಿಂದ ಯಾವುದೇ ಕೆಟ್ಟ ಪರಿಣಾಮ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ತೋರಿಸಿದೆ.

ರಂಜಾನ್ ಉಪವಾಸದಿಂದ ಕೆಳಮಟ್ಟದ ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಒತ್ತಡ ಕಡಿಮೆಯಾಗುತ್ತದೆ , ಜೊತೆಗೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಹೆಚ್ಚಿನ ಅಧ್ಯಯನಗಳಲ್ಲಿ ನಿರೂಪಿಸಿದ್ದಾರೆ .

 

 

ಮೂರು ದಿನಗಳವರೆಗೆ ಉಪವಾಸ ಮಾಡುವುದರಿಂದ ದೇಹದ ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಭಾವ ಬೀರುತ್ತದೆ, ಉಪವಾಸವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ , ಈ ಸಮಯದಲ್ಲಿ ಹೊಸ ಬಿಳಿ ರಕ್ತ ಕಣಗಳನ್ನು ಪಂಪ್ ಮಾಡುವುದರಿಂದ ದೇಹ ಪ್ರತಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ .

24 ಗಂಟೆಗಳಲ್ಲಿ ಕೇವಲ 500-600 ಕ್ಯಾಲೊರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top