ಸಮಾಚಾರ

ಕುಮಾರಸ್ವಾಮಿ ಸಿಎಂ ಆಗೋವರ್ಗು ಗಡ್ಡ ಬೋಳಿಸಲ್ಲ, ಚಪ್ಪಲಿ ಹಾಕಲ್ಲ ಎಂದು ಅಭಿಮಾನಿಯ ಪ್ರತಿಜ್ಞೆ

ರಾಜ್ಯ ರಾಜಕಾರಣದಲ್ಲಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೊಡ್ಡ ಹೈಡ್ರಾಮಗಳೇ ನಡೆದುಹೋದವು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

 

ಇನ್ನು ಹಾಸನದ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಮಾರೇನಹಳ್ಳಿ ಗ್ರಾಮದ ಗೋಪಾಲ ಗೌಡ ಎಂಬುವವರು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವರೆಗೂ ಗಡ್ಡ ಬೋಳಿಸಲ್ಲ, ಚಪ್ಪಲಿ ಹಾಕಲ್ಲ ಎನ್ನದು ಪ್ರತಿಜ್ಞೆ ಮಾಡಿದ್ದಾರೆ. ಈ ಗೋಪಾಲ ಗೌಡ 1996 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಹಾಸನದಿಂದ ತಿರುಪತಿಗೆ ಪಾದಯಾತ್ರೆ ಮಾಡಿದ್ದರು ಎಂದು ತಿಳಿದು ಬಂದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೇಬೇಕು ಎಂದು ಪ್ರತಿಜ್ಞೆ ಮಾಡಿರುವ ಗೋಪಾಲಗೌಡ ಅವರು ಈಗ ರಾಜ್ಯದ ಎಲ್ಲರ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಇತ್ತ ಜೆಡಿಎಸ್ ಹಾಗು ಕಾಂಗ್ರೆಸ್ ಶಾಸಕರು ವಿಧಾಸೌಧದ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top