ಸಮಾಚಾರ

ಮಿಸ್ ಆಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಪತ್ತೆ

ಕ್ಷಣದಿಂದ ಕ್ಷಣದಕ್ಕೆ ಚಿತ್ರ ವಿಚಿತ್ರ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

 

ಬೆಳಗ್ಗೆ ಕಾಂಗ್ರೆಸ್ ನಾಯಕರಿಗೆ ಟೆನ್ಸನ್ ಮೇಲೆ ಟೆನ್ಸನ್ ಪ್ರಾರಂಭವಾಗಿತ್ತು , ಬಳ್ಳಾರಿ ಜಿಲ್ಲೆಯ ವಿಜಯ ನಗರ ಶಾಸಕ ಆನಂದ್ ಸಿಂಗ್ ಗಾಗಿ ಕಾಂಗ್ರೆಸ್ ಹುಡುಕಾಟ ಮಾಡುತ್ತಿತ್ತು ಆನಂದ್ ಸಿಂಗ್ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ .

ಬಳ್ಳಾರಿ ಜಿಲ್ಲೆಯ ವಿಜಯ ನಗರ ಶಾಸಕ ಆನಂದ್ ಸಿಂಗ್ ಅವರು ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಮಧ್ಯೆ ಆನಂದ್ ಸಿಂಗ್ ರವರು ಗುಜರಾತ್ ರಾಜ್ಯಕ್ಕೆ ತೆರಳಿದ್ದಾರೆಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹೀಗಾಗಿ ಗುಜರಾತ್ ಕಾಂಗ್ರೆಸ್ ನಾಯಕರ ಮೂಲಕ ಆನಂದ್ ಸಿಂಗ್ ಸಂಪರ್ಕ ಮಾಡಲು ಪ್ರಯತ್ನ ಕೂಡ ಮಾಡಿದ್ದಾರೆ .

ಆದರೆ ಈಗ ಆನಂದ್ ಸಿಂಗ್ ಪತ್ತೆಯಾಗಿದ್ದಾರೆ , ಪತ್ರದ ಮೂಲಕ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಆದರೆ ಅವರು ಎಲ್ಲಿದ್ದಾರೆ ಏನು ಎತ್ತ ಎಂಬುದು ಪತ್ತೆಯಾಗಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top