ಮನೋರಂಜನೆ

ವೈರಲ್ ಆಯ್ತು ಕಣ್ಸನ್ನೆ ಹುಡುಗಿ ಚಿತ್ರದ ಮತ್ತೊಂದು ಟೀಸರ್.

ಹುಬ್ಬು ಹಾರಿಸೋ ವೀಡಿಯೋ ಮೂಲಕ ದೇಶಾದಂತ ಪಡ್ಡೆಗಳನ್ನು ಬಿಸಿಯೇರಿಸುತ್ತಲೇ ಏಕಾ ಏಕಿ ಸ್ಟಾರ್ ಆದವಳು ಪ್ರಿಯಾ ವಾರಿಯರ್. ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಅಂತ ಬಿಂಬಿತಳಾಗಿರೋ ಈ ಹುಡುಗಿಯೀಗ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾಳೆ.

 

 

ಇಂಥಾ ಪ್ರಿಯಾ ವಾರಿಯರ್’ಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದ ಸಣ್ಣ ವಿಡಿಯೋ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಒರು ಆಧಾರ್ ಲವ್ ಚಿತ್ರದ್ದು ಇದೀಗ ಆ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಯಾಗಿದ್ದು ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಇದು ಈ ಚಿತ್ರದ ತಮಿಳು ಅವತಾರಿಣಿಕೆಯ ಟೀಸರ್ ಆಗಿದ್ದು ಈ ಮೂಲಕ ಚಿತ್ರ ತಮಿಳಿನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ ಎಂಬುದನ್ನು ಪಕ್ಕಾ ಮಾಡಿದ್ದಾರೆ.

ಹೊಸ ವಿಡಿಯೋ ಇಲ್ಲಿ ನೋಡಿ

ಈಗಷ್ಟೇ ಕಾಲೇಜು ಕಲಿಯುತ್ತಿರೋ ಪ್ರಿಯಾ ವಾರಿಯರ್ `ಒರು ಅಡಾರ್ ಲವ್’ ಚಿತ್ರದ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದವಳು. ಕಾಲೇಜಿನಲ್ಲಿ ನಡೆಯುವ ಲವ್‌ಸ್ಟೋರಿ ಹೊಂದಿರೋ ಈ ಚಿತ್ರ ಇದೆ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಒಮರ್ ಲಾಲು ಎಂಬುವವರು ನಿರ್ದೇಶನ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top