ಮನೋರಂಜನೆ

ಕೊನೆಗೂ ಅಖಾಡಕ್ಕಿಳಿದ ಪೈಲ್ವಾನ. ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್

ಹೆಬ್ಬುಲಿಯಂಥಾ ಹಿಟ್ ಚಿತ್ರದ ಬಳಿಕ ಕಿಚ್ಚಾ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಕಳೆದ ನವೆಂಬರ್ ನಲ್ಲಿ ಶೂಟಿಂಗ್ ಸ್ಟಾರ್ಟ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಚಿತ್ರತಂಡ ಕಾರಣಾಂತರಗಳಿಂದ ಇನ್ನೂ ಶೂಟಿಂಗ್ ಪ್ರಾರಂಭಿಸಿರಲಿಲ್ಲ. ಶೂಟಿಂಗ್ ಯಾವಾಗ ಸ್ಟಾರ್ಟ್ ಆಗುತ್ತೆ ಎಂದು ಕಾಡು ಕುಳಿತಿದ್ದ ಅಭಿಮಾನಿಗಳಿಗೆ ಚಿತ್ರತಂಡದಿಂದ ಸಿಹಿ ಸುದ್ದಿ ಸಿಕ್ಕಿದ್ದು ಇಂದಿನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

 

Related image

 

ಈ ಬಗ್ಗೆ ಚಿತ್ರದ ನಾಯಕ ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದು “ಇಂದಿನಿಂದ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ನನ್ನ ಬೆಸ್ಟ್ ವಿಷಸ್” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರು, ಚೆನ್ನೈ, ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

 

 

. ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ನಟ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top