ಸಮಾಚಾರ

ರೆಸಾರ್ಟ್ ರಾಜಕೀಯದ ಬಗ್ಗೆ ಕುಟುಕಿದ ಪ್ರಕಾಶ್‌ ರೈ

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹು ಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರಗಳ ಅಜೆಂಡಾಗಳನ್ನು, ವಿರೋಧಿಸುತ್ತಾ ಕೋಮು ಸೌಹಾರ್ದ ಕದಡುವವರನ್ನು ಗುರಿಯಾಗಿಟ್ಟುಕೊಂಡು ಪ್ರಶ್ನಿಸುತ್ತಲೇ ಬಂದಿದ್ದರು.

 

 

 

ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ನಡೆಯುತ್ತಿದೆ ಇದು ದೇಶದ ಗಮನ ಸೆಳೆಯುತ್ತಿದೆ. ಬಹುಮತಕ್ಕೆ ಸಂಖ್ಯಾಬಲದ ಕೊರತೆಯ ನಡುವೆಯೂ ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ಕಾಂಗ್ರೆಸ್‌ ಮತ್ತು ಜೆಡಿಎಸ್‌‌ ಪಕ್ಷಗಳು ಬಿಜೆಪಿಯ ನಡೆಯ ವಿರುದ್ಧ ವಿಧಾಸೌಧ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

 

 

 

ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ನಟ ಪ್ರಕಾಶ್‌‌ ರೈ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದಿರುವ ಅವರು. ” ಸರ್ಕಾರ ರಚನೆ ಮಾಡಲು ಹಾಲಿಡೇ ರೇಸಾರ್ಟ್‌ ಮ್ಯಾನೇಜರ್‌ ಮುಂದಾಗಿದ್ದಾರೆ. ಯಾಕಂದ್ರೆ ಅವರ ಬಳಿ 116 ಶಾಸಕರಿದ್ದಾರೆ. ನಿಜವಾದ ಗೇಮ್‌ ಈಗ ಪ್ರಾರಂಭವಾಗಿದೆ. ಎಲ್ಲರೂ ರಾಜಕೀಯ ಆಶ್ರಯಿಸುತ್ತಿದ್ದಾರೆ” ಎಂದು ಪ್ರಕಾಶ್‌ ರೈ ಟ್ವಿಟ್ ನಲ್ಲಿ ಬರೆದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top