ಸಿನಿಮಾ

ರಾಜಕೀಯಕ್ಕಾಗಿ ಕಚ್ಚಾಡುವ ಗೆಳೆಯರೇ ಒಮ್ಮೆ ನಿರ್ದೇಶಕ ಸಂತೋಷ್ ಸಂದೇಶ ಓದಿ

ರಾಜ್ಯ ರಾಜಕಾರಣದಲ್ಲಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೊಡ್ಡ ಹೈಡ್ರಾಮಗಳೇ ನಡೆದುಹೋದವು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

 

ಈಗ ಸ್ಯಾಂಡಲ್ ವುಡ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕರ್ನಾಟಕ ರಾಜಕೀಯ ಚಟುವಟಿಕೆ ಕುರಿತು ಟ್ವೀಟ್‌‌ ಮಾಡಿದ್ದಾರೆ. ” ರಾಜಕಾರಣಿಗಳು ಇಂದು ಬರುತ್ತಾರೆ ನಾಳೆ ಹೋಗುತ್ತಾರೆ ರಾಜಕಾರಣದ ವಿಚಾರಕ್ಕೆ ನಿಮ್ಮ ಸ್ನೇಹಿತರು ಹಾಗು ಅವರ ಸಂಬಂಧವನ್ನು ಹಾಳುಮಾಡಿಕೋಳ್ಳಬೇಡಿ ..ನಾವು ಕಷ್ಟದಲ್ಲಿ ಇದ್ದಾಗ ಬರುವುದು ಗೆಳೆಯರು ರಾಜಕಾರಣಿಗಳಲ್ಲ ! ಶಾಸಕರು- ಸಂಸದರು ಸಂಪಾದನೆಗೆ ಬೆಲೆ ಕೊಡ್ತಾರೆ…ಸ್ನೇಹಿತರು ಸಂಬಂಧಕ್ಕೆ ಬೆಲೆ ಕೊಡ್ತಾರೆ! ಜೈ ಹಿಂದ್ ಜೈ ಕರ್ನಾಟಕ ಮಾತೆ🙏” ಎಂದು ಬರೆದಿದ್ದಾರೆ.

 

 

ಅನೇಕ ಜನರು ರಾಜಕೀಯಕ್ಕೆ ತಮ್ಮ ಅಮೂಲ್ಯ ಸ್ನೇಹವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಸ್ನೇಹದ ಮಹತ್ವವನ್ನು ಅರಿತು ರಾಜಕೀಯಕ್ಕಾಗಿ ಗೆಳೆತನ ಕಳೆದುಕೊಳ್ಳಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top