ಹೆಚ್ಚಿನ

ಮೇ 16 ರಿಂದ ಜೂನ್ 16 ನೇ ತಾರೀಖಿನವರಿಗೂ ಇರುವ ಅಧಿಕ ಮಾಸದ ಪೌರಾಣಿಕ ಹಿನ್ನೆಲೆ ಹಾಗೂ ಇದರ ಹಿಂದಿರುವ ಕಥೆ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ಅಧಿಕ ಮಾಸದ ಪೌರಾಣಿಕ ಹಿನ್ನೆಲೆ ಹಾಗೂ ಇದರ ಹಿಂದಿರುವ ಕಥೆ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ಅಧಿಕ ವಾಸಕ್ಕೆ ಪುರಾಣದಲ್ಲಿ ಅತಿ ದೊಡ್ಡ ಸುಂದರವಾದ ಕತೆ ಇದೆ. ನಮಗೆ ಇದು ಕೇಳಲು ಸಿಗುತ್ತದೆ. ಈ ಕಥೆಯೂ ದೈತ್ಯ ರಾಜನಾದ ಹಿರಣ್ಯ ಕಶ್ಯಪುವಿನ ಸಂಹಾರಕ್ಕೆ ಸಂಬಂಧಪಟ್ಟಿದ್ದಾಗಿದೆ .
ಪುರಾಣಗಳ ಪ್ರಕಾರ ದೈತ್ಯ ರಾಜನಾದ ಹಿರಣ್ಯ ಕಶ್ಯಪು ಒಂದು ಬಾರಿ ಬ್ರಹ್ಮದೇವನಿಗೆ ತನ್ನ ಕಠೋರವಾದ ತಪಸ್ಸಿನಿಂದ ಪ್ರಸನ್ನನಾಗಿಸುತ್ತಾನೆ . ಮತ್ತು ಬ್ರಹ್ಮ ದೇವನು ಪ್ರತ್ಯಕ್ಷನಾಗುತ್ತಾನೆ . ಬ್ರಹ್ಮ ದೇವನಿಂದ ಅಮರತ್ವದ ವರವನ್ನು ಪಡೆಯುತ್ತಾನೆ .ಆದರೆ ಬ್ರಹ್ಮದೇವನು ಈ ವರವನ್ನು ಕೊಡಲು ಸಾಧ್ಯವಿಲ್ಲ. ಯಾರಿಗೂ ಅಮರತ್ವದ ವರವನ್ನು ಕೊಡುವುದಿಲ್ಲ ? ಇದನ್ನು ಹೊರತುಪಡಿಸಿ ಬೇರೆ ಯಾವುದಾದರೂ ವರವನ್ನು ಕೇಳು ಎಂದು ಹೇಳುತ್ತಾನೆ. ಯಾಕೆಂದರೆ ಅಮರತ್ವದ ವರದಾನವನ್ನು ಕೊಡುವುದು ನಿಷಿದ್ಧವಾಗಿತ್ತು. ಆದ್ದರಿಂದ ಬ್ರಹ್ಮದೇವನು ಅವನಿಗೆ ಅಮರತ್ವದ ವರದಾನವನ್ನು ನೀಡಲಿಲ್ಲ.

 

 

ಆಗ ಹಿರಣ್ಯ ಕಶ್ಯಪು ಹೀಗೆ ವರ ಕೇಳಿದನು. ಈ ಸಮಸ್ತ ಬ್ರಹ್ಮಾಂಡದಲ್ಲಿ ಯಾವುದೇ ಮನುಷ್ಯ ,ಸ್ತ್ರೀ, ಪಶು ,ದೇವತೆಯರು ಅಥವಾ ಅಸುರರು ಯಾರೂ ಕೂಡ ನನ್ನನ್ನು ಸಾಯಿಸಬಾರದು ಎಂದು ಹಿರಣ್ಯ ಕಶ್ಯಪು ವರವನ್ನು ಕೇಳಿದನು. ವರ್ಷದಲ್ಲಿ ಹನ್ನೆರಡು ತಿಂಗಳು ಕೂಡ ಮೃತ್ಯುವೂ ನನಗೆ ಬರಬಾರದು. ದಿನದ ಸಮಯವಾಗಲಿ ಅಥವಾ ರಾತ್ರಿಯ ಸಮಯವಾಗಲಿ.
ಯಾವುದೇ ಅಸ್ತ್ರದಿಂದ, ಶಸ್ತ್ರದಿಂದಲೂ ಕೂಡ ನನಗೆ ಮರಣವೂ ಸಂಭವಿಸಬಾರದು. ಹಾಗೆ ನನ್ನನ್ನು ಮನೆಯಲ್ಲಿಯೂ ಸಾಯಿಸಬಾರದು, ಮನೆಯ ಹೊರಗಡೆ ಕೂಡ ಸಾಯಿಸಬಾರದು. ಈ ರೀತಿಯ ವರದಾನವನ್ನು ಕೊಡುವುದಕ್ಕೆ ಬ್ರಹ್ಮನಿಂದ ವರದಾನವಾಗಿ ಕೇಳಿದನು.

 

 

ಬ್ರಹ್ಮನು ಕೂಡ ಈ ವರದಾನವನ್ನು ಆವನಿಗೆ ನೀಡಿದನು. ಈ ವರದಾನವೂ ದೊರೆತ ನಂತರ ತಕ್ಷಣ ಹಿರಣ್ಯ ಕಶ್ಯಪು ಸ್ವಯಂ ಅವನನ್ನು ಅವನೇ ಅಮರ ಎಂದು ಪರಿಗಣಿಸಿಕೊಂಡನು. ಅವನನ್ನು ಅವನೇ ಭಗವಂತ ಎಂದು ಘೋಷಣೆ ಮಾಡಿಕೊಂಡು ತನ್ನನ್ನು ತಾನೇ ಶ್ರೇಷ್ಠನು. ಈ ಬ್ರಹ್ಮಾಂಡದಲ್ಲಿ ನನ್ನಷ್ಟು ಶ್ರೇಷ್ಠರು ಬೇರೆ ಯಾರೂ ಇಲ್ಲ ? ನಾನೇ ಶ್ರೇಷ್ಠ, ನಾನೇ ದೇವ, ನಾನೇ ಎಲ್ಲರಿಗಿಂತಲೂ ಸರ್ವ ಶ್ರೇಷ್ಠನು. ನನ್ನನ್ನೇ ಎಲ್ಲರೂ ಪೂಜೆ ಮಾಡಬೇಕು. ನನ್ನ ನಾಮ ಸ್ಮರಣೆಯನ್ನು ಎಲ್ಲರೂ ಮಾಡಬೇಕು ಎಂದು ಹೇಳಿಕೊಳ್ಳುತ್ತಿದ್ದನು.

ಹೀಗೆಯೇ ಇರುವಾಗ ಒಂದು ಬಾರಿ ಅಧಿಕ ಮಾಸವು ಬಂದ ಸಮಯದಲ್ಲಿ ಭಗವಂತನಾದ ವಿಷ್ಣುವು ಸ್ವಯಂ ನರಸಿಂಹ ಅವತಾರವನ್ನು ತಳೆದು, ಅರ್ಧ ಪುರುಷ, ಅರ್ಧ ಸಿಂಹನ ರೂಪವನ್ನು ತಳೆದು ಪ್ರಕಟವಾದನು. ಸಂಜೆಯ ಸಮಯದಲ್ಲಿ ಇನ್ನೇನು ಕತ್ತಲಾಗುವಷ್ಟರಲ್ಲಿ ಇತ್ತು ಈ ಸಮಯದಲ್ಲಿ ತನ್ನ ಉಗುರಿನಿಂದ ಹಿರಣ್ಯ ಕಶ್ಯಪುವಿನ ಹೊಟ್ಟೆಯನ್ನು ಎರಡು ಭಾಗವಾಗಿ ಸೀಳಿದಾಗ ಹಿರಣ್ಯ ಕಶ್ಯಪು ಮೃತ್ಯುವಿನ ಬಾಗಿಲನ್ನು ಸಮೀಪಿಸಿದನು ಮತ್ತು ಮೃತ್ಯುವನ್ನು ಹೊಂದಿದನು. ಅಧಿಕ ಮಾಸಕ್ಕೆ ವಿಷ್ಣುವಿನ ಮತ್ತು ಹಿರಣ್ಯ ಕಶ್ಯಪುವಿನ ಈ ಕಥೆಯೇ ಪೌರಾಣಿಕ ಆಧಾರ ಮತ್ತು ಸಾಕ್ಷಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top