ಹೆಚ್ಚಿನ

ಮೇ 15 ರಿಂದ ಜೂನ್ 14 ನೇ ತಾರೀಖಿನವರೆಗೆ ಸೂರ್ಯನು ವೃಷಭ ರಾಶಿಯಲ್ಲಿ ಸ್ಥಿತನಿರುತ್ತಾನೆ ಇದರಿಂದ ಯಾವ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ನೀವೇ ನೋಡಿ .

ಮೇ 15 ರಿಂದ ಜೂನ್ 14 ನೇ ತಾರೀಖಿನವರೆಗೆ ಸೂರ್ಯನು ವೃಷಭ ರಾಶಿಯಲ್ಲಿ ಸ್ಥಿತನಿರುತ್ತಾನೆ ಇದರಿಂದ ಯಾವ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ನೀವೇ ನೋಡಿ .

ಮೇ ಹದಿನೈದು ನೇ ತಾರೀಖಿನಿಂದ ಜೂನ್ ಹದಿನಾಲ್ಕನೇ ತಾರೀಖಿನವರೆಗೆ ಸೂರ್ಯನು ವೃಷಭ ರಾಶಿಯಲ್ಲಿ ಸ್ಥಿತನಿರುತ್ತಾನೆ ಇದರಿಂದ ಒಂದು ತಿಂಗಳ ಕಾಲ ಗ್ರಹಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ .

ಸೂರ್ಯನು ಮೇ ಹದಿನೈದನೇ ತಾರೀಖಿನಂದು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಿದ್ದಾನೆ ಮತ್ತು ವೃಷಭ ರಾಶಿಯಲ್ಲಿ ಸ್ಥಿತನಿದ್ದಾನೆ.ಒಂದು ತಿಂಗಳ ಕಾಲ ಇಲ್ಲಿಯೇ ಇರುತ್ತಾನೆ. ನಂತರ ಇಷ್ಟು ದಿನ ವೃಷಭ ರಾಶಿಯಲ್ಲಿ ಸ್ಥಿತನಿದ್ದ ಶುಕ್ರ ಗ್ರಹವು ಮೇ ಹದಿನೈದನೇ ತಾರೀಖಿನಿಂದ ಮಿಥುನ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಯಾವ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ನೋಡೋಣ ಬನ್ನಿ.

 

 

 

ಮೇಷ ರಾಶಿ.

 

ಸೂರ್ಯನು ಮೇಷ ರಾಶಿಯಲ್ಲಿ 2 ಭಾವದಲ್ಲಿ ಸ್ಥಿತನಿದ್ದಾನೆ, ಇದರಿಂದ ಸೂರ್ಯನ ದೃಷ್ಟಿಯೂ ಅಷ್ಟಮ ಭಾವದ ಮೇಲೆ ಬೀರುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಉಂಟಾಗಬಹುದು, ಕಣ್ಣಿನ ಸಮಸ್ಯೆಗಳು ಉಂಟಾಗುತ್ತವೆ, ಹಣದ ಅಭಾವ ಅಥವಾ ಕೊರತೆಯೂ ಕೂಡ ನಿಮಗೆ ಈ ಒಂದು ತಿಂಗಳ ಕಾಲ ಇರುತ್ತದೆ. ಆದರೆ ವೃತ್ತಿಯಲ್ಲಿ ಪ್ರಮೋಷನ್ ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ.

 

ಮಾನಸಿಕ ಒತ್ತಡ ಹೆಚ್ಚಾಗಲಿದೆ, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡಬಹುದು, ಹಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಎದುರಾಗಬಹುದು, ನಷ್ಟವೂ ಕೂಡ ಸಂಭವಿಸಬಹುದು .

ಮಿಥುನ ರಾಶಿ.

 

ಸಮಸ್ಯೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ, ಹಣವೂ ಹೆಚ್ಚಾಗಿ ಖರ್ಚಾಗಬಹುದು, ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಚೆನ್ನಾಗಿದೆ , ಯಾಕೆಂದರೆ ಮಿಥುನ ರಾಶಿಗೆ ಶುಕ್ರನು ಪ್ರವೇಶ ಮಾಡಿದ್ದಾನೆ, ನೀವು ವಿದೇಶಕ್ಕೆ ಹೋಗುವ ಸಂಭವ ಇದೆ, ನಿಮ್ಮ ಅದೃಷ್ಟದ ಬಾಗಿಲು ಕೂಡ ತೆರೆಯಲಿದೆ, ಅಪಘಾತಗಳಿಂದ ಆದಷ್ಟು ದೂರವಿರಿ, ವಾಹನವನ್ನು ಚಲಾಯಿಸುವವರು ತುಂಬಾ ಜಾಗರೂಕತೆಯಿಂದ ಚಲಾಯಿಸಿ.

ಕಟಕ ರಾಶಿ .

 

ನಿಮಗೆ ಅಧಿಕವಾಗಿ ಲಾಭವಾಗುವ ಸಂಭವ ಇದೆ, ವ್ಯಾಪಾರದಲ್ಲಿ ಯಶಸ್ಸು ಗಳಿಸಲಿದ್ದೀರಿ ಮತ್ತು ನಿಮಗೆ ಹಣವು ಕೂಡ ದೊರೆಯಲಿದೆ,ಕೊಟ್ಟ ಹಣವೂ ಮರಳಿ ನಿಮ್ಮ ಬಳಿ ಬರುತ್ತದೆ, ದಾಂಪತ್ಯ ಜೀವನ ಅಷ್ಟಾಗಿ ಸುಖಮಯವಾಗಿರುವುದಿಲ್ಲ, ನಿಮ್ಮ ಪತಿಗೆ ಸಂಬಂಧಪಟ್ಟಂತೆ ಅಪಘಾತಗಳು ಉಂಟಾಗಬಹುದು, ಆದ್ದರಿಂದ ಎಚ್ಚರಿಕೆಯಿಂದರಿ.

ಸಿಂಹ ರಾಶಿ.

 

ಸಿಂಹ ರಾಶಿಗೆ ಸೂರ್ಯನು ಲಾಭ ಸ್ಥಾನದಲ್ಲಿ ಇದ್ದಾನೆ ಆದ್ದರಿಂದ ಉತ್ತಮ ಫಲಗಳನ್ನು ನೀಡುತ್ತಾನೆ. ಮಾನ , ಸಮ್ಮಾನ, ಗೌರವಗಳು ಕೂಡ ದೊರೆಯಲಿವೆ, ನಿಮ್ಮ ಆದಾಯವೂ ಸಹ ಹೆಚ್ಚಾಗುತ್ತದೆ, ವಿದೇಶಕ್ಕೆ ಹೋಗುವ ಯೋಗ ಇದೆ, ವಿವಾಹಿತರಲ್ಲಿ ಸ್ವಲ್ಪ ಸಮಸ್ಯೆಗಳು ಕಾಡಬಹುದು, ಗರ್ಭವತಿ ಮಹಿಳೆಯರು ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಕನ್ಯಾ ರಾಶಿ .

 

ನಿಮಗೆ ಖರ್ಚು ಹೆಚ್ಚಾಗಲಿದೆ, ನಿಮ್ಮ ತಾಯಿಯ ಮತ್ತು ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ತಾಯಿ-ತಂದೆಯ ಆರೋಗ್ಯ ಹದಗೆಡಬಹುದು, ಗರ್ಭವತಿ ಸ್ತ್ರೀಯರಿಗೆ ಮತ್ತು ಕನ್ಯಾ ರಾಶಿಯ ಮಕ್ಕಳಿಗೆ ಸ್ವಲ್ಪ ತೊಂದರೆಗಳು ಉಂಟಾಗಬಹುದು.

ತುಲಾ ರಾಶಿ .

 

ತುಲಾ ರಾಶಿಯವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಪ್ರಮಾಣ ಕಡಿಮೆಯಾಗಲಿದೆ, ನೀವು ವ್ಯಾಪಾರ ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣವೂ ನಷ್ಟವಾಗುವ ಸಂಭವ ಇದೆ ಆದ್ದರಿಂದ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಹಣವನ್ನು ಒಂದು ತಿಂಗಳ ಕಾಲ ಹೂಡಿಕೆ ಮಾಡದೇ ಇರುವುದು ಒಳ್ಳೆಯದು.

ವೃಶ್ಚಿಕ ರಾಶಿ.

 

ನಿಮ್ಮ ಸಹೋದರ ಸಹೋದರಿಯರಿಗೆ ದುರ್ಘಟನೆಗಳು ಅಂದರೆ ಅಪಘಾತವಾಗುವ ಸಂಭವ ಇದೆ.ಆದ್ದರಿಂದ ಸ್ವಲ್ಪ ಸಮಾಧಾನ ಮತ್ತು ಎಚ್ಚರಿಕೆಯಿಂದಿರಿ. ಸ್ತ್ರೀಯರ ಕಿರಿಯ ಸಹೋದರರಿಗೆ ತೊಂದರೆಗಳು, ದುರ್ಘಟನೆಗಳು, ಅಪಘಾತಗಳು ಸಂಭವಿಸಬಹುದು ಮತ್ತು ಮನೆಯಲ್ಲಿಯೂ ಕೂಡ ಸಮಸ್ಯೆಗಳು ಎದುರಾಗಬಹುದು .

ಧನಸ್ಸು ರಾಶಿ .

 

ಧನಸ್ಸು ರಾಶಿಯವರಿಗೆ ಯಾವುದೇ ಕೆಲಸ ಕಾರ್ಯದಲ್ಲಿ ಲಾಭ ದೊರೆಯಬಹುದು ,ಇದರ ಜೊತೆಗೆ ಸಾಡೇ ಸಾತಿಯೂ ನೆಡೆಯುತ್ತಿರುವವುದರಿಂದ ಆದಷ್ಟು ಎಚ್ಚರಿಕೆಯಿಂದ ಇದ್ದು ಸಮಾಧಾನವಾಗಿ ಇರುವುದು ಒಳ್ಳೆಯದು.

ಮಕರ ರಾಶಿ.

 

ಇದು ಸ್ವಲ್ಪ ಕಷ್ಟದ ಸಮಯವಾಗಿದೆ, ಗರ್ಭವತಿ ಮಹಿಳೆಯರಿಗೆ ಗರ್ಭಪಾತವಾಗುವ ಸಂಭವವಿದೆ, ಅಪಘಾತ ದುರ್ಘಟನೆಗಳು ಸಂಭವಿಸಬಹುದು, ತುಂಬಾ ಸಮಸ್ಯೆಗಳು ಎದುರಾಗಬಹುದು, ಮಕರ ರಾಶಿಯವರಿಗೆ ಹೆಚ್ಚಾಗಿ ಒಳ್ಳೆಯ ಫಲಗಳು ದೊರೆಯುವುದಿಲ್ಲ.

ಕುಂಭ ರಾಶಿ.

 

ನಿಮಗೆ ಲಾಭವಾಗುತ್ತದೆ , ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದೀರಿ, ಆದರೆ ಕಣ್ಣಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಕಾಡಬಹುದು, ಪೊಲೀಸ್ ಕೇಸ್ ಮೊಕದ್ದಮೆಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ, ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ , ಇದರ ಜತೆಗೆ ಸಂತಾನ ಸುಖವೂ ಸಹ ಪ್ರಾಪ್ತಿಯಾಗುತ್ತದೆ .

ಮೀನ ರಾಶಿ.

 

ಸಮಾಜದಲ್ಲಿ ಮಾನ, ಸಮ್ಮಾನ, ಗೌರವಗಳು ಕಡಿಮೆಯಾಗುತ್ತವೆ, ಹೊಟ್ಟೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಉದ್ಭವವಾಗುತ್ತವೆ. ವೃತ್ತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು . ಆದರೆ ಹಣವು ನಿಮಗೆ ಬರುತ್ತಲೇ ಇರುತ್ತದೆ, ನಿಮಗೆ ಅವಶ್ಯಕತೆ ಇರುವಷ್ಟು ಹಣವು ನಿಮ್ಮ ಬಳಿ ಇರುತ್ತದೆ, ಆದರೆ ನಿಮ್ಮ ಸಂತಾನಕ್ಕೆ ಅಂದರೆ ಮಕ್ಕಳಿಗೆ ತೊಂದರೆಯಾಗಬಹುದು, ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇದ್ದು ಸಮಾಧಾನವಾಗಿರುವುದು ಒಳ್ಳೆಯದು. ನೀವು ವಾಹನವನ್ನು ಚಲಾಯಿಸುವವರಾಗಿದ್ದರೆ ಸ್ವಲ್ಪ ವೇಗವನ್ನು ತಗ್ಗಿಸಿಕೊಂಡು ಚಲಾಯಿಸುವುದು ಉತ್ತಮ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top