ಸಮಾಚಾರ

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಾಥ್ ಕೊಟ್ಟ ತೆಲುಗು ದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಗಳು ಹೇಳಿದ್ದೇನು ಗೊತ್ತಾ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

ಸದ್ಯ ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ರಾಜಕೀಯ ಮೊರೆ ಹೋಗಿದೆ ಎನ್ನಲಾಗುತ್ತಿದೆ. ಕುದುರೆ ವ್ಯಾಪಾರ ತಪ್ಪಿಸಲು ಈ ನಿರ್ಣಯ ಮಾಡಲಾಗುತ್ತಿದೆ.

ಇತ್ತ ತೆಲುಗು ದೇಶಂ ಮುಖ್ಯಸ್ಥರಾಗಿರುವ ಚಂದ್ರಬಾಬು ನಾಯ್ಡು ಆಂಧ್ರದ ವಿಜಯವಾಡಕ್ಕೆ ಬನ್ನಿ ನಿಮಗೆ ಬೇಕಾದ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹೇಳಿದ್ದಾರೆ ,ತೆಲಗಾಂಣ ಮುಖ್ಯಮಂತ್ರಿಯಾಗಿರುವ ಟಿ ಆರ್ ಎಸ್ (ತೆಲಂಗಾಣ ರಾಷ್ಟ್ರೀಯ ಸಮಿತಿ ) ಪಕ್ಷದ ಮುಖ್ಯಸ್ಥ ಕೆ ಸಿ ಆರ್ (ಕಳ್ವಕುಂಟ್ಲಾ ಚಂದ್ರಶೇಖರ್ ರಾವ್ ) ದೇವೇಗೌಡರಿಗೆ ಕರೆ ಮಾಡಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ .ತೆಲುಗಿನ ಎರಡು ಪ್ರಾದೇಶಿಕ ಪಕ್ಷಗಳು ಕರ್ನಾಟಕದ ಪ್ರಾದೇಶಿಕ ಪಕ್ಷಕ್ಕೂ ಬೆಂಬಲ ನೀಡಲು ರೆಡಿ ಆಗಿವೆ.

 

 

ತೆಲುಗು ದೇಶಂ ಮುಖ್ಯಸ್ಥರಾಗಿರುವ ಚಂದ್ರಬಾಬು ನಾಯ್ಡು ತಮ್ಮ ಹಾಗು ಬಿಜೆಪಿ ಮಧ್ಯೆ ಇದ್ದ ಮೈತ್ರಿಯನ್ನು ಕೆಲ ವರ್ಷಗಳ ಹಿಂದೆ ಮುರಿದುಕೊಂಡಿದ್ದರು , ಇತ್ತೀಚಿಗೆ ಬಿಜೆಪಿಗೆ ಅಧಿಕಾರಕ್ಕೆ ಬರಲು ಬಿಡಬಾರ್ದು ಎಂದು ಓಪನ್ ಆಗಿ ಬಾಬು ಹೇಳಿದ್ದರು .

ಈ ಹಿಂದೆ 1997 ರಲ್ಲಿ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು ಚಂದ್ರಬಾಬು ನಾಯ್ಡುವಿನ ವಿರೋಧದ ನಡುವೆಯು 519 ಮೀಟರ್ ನಿಂದ 524 ಮೀಟರ್ಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದರು.ಈ ವಿಷಯವಾಗಿ ಚಂದ್ರಬಾಬು ಹಾಗು ದೇವೇಗೌಡರ ನಡುವೆ ಭಾರಿ ಜಗಳವಾಗಿತ್ತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top