ಸಮಾಚಾರ

ತೊಡೆ ಸಂದುಗಳ ನಡುವಿನ ಉಜ್ಜುವಿಕೆಯಿಂದಾಗುವ ಗಾಯಕ್ಕೆ ದುಬಾರಿ ಕ್ರೀಮ್ ಬಳಸುವ ಬದಲು ಮನೆಯಲ್ಲಿಯೇ ಮಾಡಿ ಮದ್ದು

ತೊಡೆ ಸಂದುಗಳ ನಡುವಿನ ಉಜ್ಜುವಿಕೆಯಿಂದಾಗುವ ಗಾಯಕ್ಕೆ ಮದ್ದು

 

ದಿನವಿಡೀ ಬಿಸಿಲಿನಲ್ಲಿ ಸುತ್ತುವವರಿಗೆ ಸಾಮಾನ್ಯವಾಗಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ , ದೇಹದಲ್ಲಿ ಬೆವರು ಹೆಚ್ಚಾಗಿ ತೊಡೆ ಸಂದುಗಳ ಉಜ್ಜುವಿಕೆಯಿಂದ ಗಾಯ ಉಂಟಾಗಿ ಪದೇ ಪದೇ ಉಜ್ಜಿ ಮತ್ತೆ ಬ್ಯಾಕ್ಟೀರಿಯಾ ಹಾಗು ಇತರ ಸೂಕ್ಶ್ಮಾಣು ಜೀವಿಗಳ ಹಾವಳಿ ಹೆಚ್ಚಾದರೆ ಈ ಸಮಸ್ಯೆ ಇನ್ನು ಹೆಚ್ಚಾಗಿ ತೊಂದರೆ ಅನುಭವಿಸಬೇಕಾಗುತ್ತದೆ .

 

 

ಈ ಸಮಸ್ಯೆಯಿಂದ ಹೊರ ಬರಲು ಮನೆ ಮದ್ದುಗಳು ಈ ರೀತಿ ಇವೆ

 

ಐಸ್ ತುಂಡುಗಳನ್ನು ಬಟ್ಟೆಯಲ್ಲಿ ಇರಿಸಿ ಗಾಯದ ಮೇಲೆ ನಿಧಾನವಾಗಿ ಉಜ್ಜಬೇಕು ಇದು ಉತ್ತಮ ಉಪಶಮನವನ್ನು ನೀಡುತ್ತದೆ .

 

 

ಅಲೋವೆರಾ ಅಥವಾ ಲೋಳೆ ಸರಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಗಾಯವಾದ ಜಾಗಕ್ಕೆ ಹಚ್ಚಿಕೊಳ್ಳಿ .

 

 

ಗಾಯದ ಉರಿ ಹೆಚ್ಚಾಗಿದ್ದರೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ .

 

 

ಸ್ನಾನ ಮಾಡಿದ ನಂತ್ರ ತೇವ ತೊಡೆ ಸಂದುಗಳ ಬಳಿ ಇರದಂತೆ ಶುಭ್ರವಾದ ಬಟ್ಟೆಯಿಂದ ಒರೆಸಿಕೊಳ್ಳಿ .

 

 

 

ಒಂದೆರಡು ಹನಿ ಲವಂಗ ಎಣ್ಣೆಗೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ತೊಡೆ ಸಂದುಗಳ ಗಾಯದ ಮೇಲೆ ಲೇಪಿಸಬೇಕು .

 

 

ಸ್ಟಾಕಿಂಗ್ ಉಡುಪುಗಳು ತೊಡೆಸಂದುಗಳ ನಡುವಿನ ಘರ್ಷಣೆ ತಪ್ಪಿಸುತ್ತದೆ .

 

 

 

ವ್ಯಾಸಲಿನ್ ಅಥವಾ ಇನ್ನಾವುದಾದರೂ ಪೆಟ್ರೋಲಿಯಂ ಜೆಲ್ಲಿ ಬಳಸಿ ಅಷ್ಟೇ ಅಲ್ಲದೆ ಟಾಲ್ಕಮ್ ಪೌಡರ್ ಹಚ್ಚಿಕೊಂಡರು ಸಹ ತೊಡೆಸಂದುಗಳ ನಡುವಿನ ಘರ್ಷಣೆ ತಪ್ಪಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top