ಸಮಾಚಾರ

ಮದುವೆಯಾಗಲು ರೆಡಿಯಾದಳು ತ್ರಿಶಾ- ನಟಿ ಕತ್ತಿಗೆ ತಾಳಿ ಕಟ್ಟೋ ಗಂಡು ಯಾರು ಗೊತ್ತಾ?

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಅಫೇರುಗಳ ಮೂಲಕ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ತ್ರಿಷಾಳನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಅಂತೆಕಂತೆ ನ್ಯೂಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಪ್ರಿಯ ಬಾಯಿಯ ತುದಿಯಿಂದ ಹರಡುತ್ತಿರುತ್ತವೇ. ಇಂಥ ಗಾಸಿಪ್ ಪ್ರಿಯರಿಗೆ ಇದೀಗ ಮೃಷ್ಟಾನ್ನವೂ ಭೋಜನವಾಗಿ ಪರಿಮಣಿಸಿರುವವರು ಸೌತ್ ಸ್ಟಾರ್ ಹೀರೋಯಿನ್ ತ್ರಿಶಾ ಕೃಷ್ಣನ್.

 

 

ಅಂದಹಾಗೆ ತ್ರಿಶಾಳ ಮದುವೆ ಸುದ್ದಿ ಚಾಲ್ತಿಗೆ ಬರುತ್ತಿರುವುದು ಇದೆ ಮೊದಲೇನಲ್ಲಾ ಏನಿಲ್ಲಾ ಅಂದರು ಸುಮಾರು ಹತ್ತು ವರ್ಷಗಳಿಂದಲೂ ಮಾಡೋಕೆ ಕ್ಯಾಮೆ ಇಲ್ಲದ ಕಿಡಿಗೇಡಿಗಳು ಅಲ್ಲೊಂದು ಇಲ್ಲೊಂದು ಗಾಸಿಪ್ ಹರಡಿಸುತ್ತಿದ್ದರು.. ಈ ಎಲ್ಲಾ ಗಾಸಿಪ್’ಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಆಕೆಯ ಎಂಗೇಜ್ ಮೆಂಟ್ ಸುದ್ದಿ. ಹೌದು 2015ರಲ್ಲಿ ವರುಣ್‌ ಎಂಬಾತನನ್ನು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಅಂತ ಫೋಟೋಗಳ ಸಮೇತ ವರದಿಯಾಗಿತ್ತು ಆದರೆ ಇದು ಶುದ್ಧ ಸುಳ್ಳು ಎಂದು ಕಾಡಿ ತುಂಡಾದಂತೆ ಅವರ ತಾಯಿ ಹೇಳಿದ್ದರು. ನಂತರ ಆಯಾ ಅಶುದ್ಧಿ ಕೂಡ ಸುದ್ದಿಯಾಗಿಯೇ ಉಳಿದುಕೊಂಡಿತ್ತು.

 

 

ಇದೀಗ ತ್ರಿಶಾಳ ಮದುವೆ ವಿಚಾರ ಮತ್ತೆ ಚಾಲ್ತಿಗೆ ಬಂದಿದ್ದು ಹಾಗಂತ ಇದನ್ನು ಯಾರೋ ಕಿಡಿಗೇಡಿಗಳು ಕೆಲಸಿಲ್ಲದೆ ಹಬ್ಬಿಸಿರುವ ರೂಮರ್ ಅಂದುಕೊಳ್ಳುವಂತೆಯೂ ಇಲ್ಲ. ಯಾಕೆಂದರೆ ಈ ಸುದ್ದಿಯನ್ನು ತ್ರಿಶಾಳ ತಾಯಿಯೇ ಬಹಿರಂಗಪಡಿಸಿದ್ದಾರೆ. ಸದ್ಯ ತ್ರಿಶಾಳ ಕೈನಲ್ಲಿ ಸುಮಾರು ಆರು ಚಿತ್ರಗಳಿದ್ದು ಅವುಗಳ ಶೂಟಿಂಗ್ ಮುಗಿದ ತಕ್ಷಣ ಆಕೆ ಮದುವೆಯಾಗುತ್ತಿದ್ದಾಳೆ ಎಂದು ಆಕೆಯ ತಾಯಿಯೇ ಬಹಿರಂಗ ಪಡಿಸಿದ್ದಾರೆ. ಈಗಾಗಲೇ ಮದುವೆಗೆ ಸಂಭಂದಿಸಿದ ಸಿದ್ಧತೆಗಳೆಲ್ಲವೂ ಜೋರಾಗಿ ನಡೆಯುತ್ತಿದ್ದು ಇನ್ನು 2-3ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ ಆದರೆ ಆಕೆ ಯಾರನ್ನ ಮದುವೆಯಾಗ್ತಾಳೆ? ಮದುವೆ ಎಲ್ಲಿ ನಡೆಯುತ್ತೆ ಎನ್ನುವ ವಿಷಯಗಳು ಇನ್ನೂ ರಹಸ್ಯವಾಗಿಯೇ ಉಳಿದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top