ಸಮಾಚಾರ

ರಾಜ್ಯ ರಾಜಕೀಯ ದೊಂಬರಾಟಗಳ ಬಗ್ಗೆ ಉಪ್ಪಿ ಹೇಳಿದ್ದೇನು ಗೊತ್ತಾ.

ಕರ್ನಾಟಕದ ರಾಜಕಾರಣದ ದಿಕ್ಕುದೆಸೆಗಳನ್ನೇ ಬದಲಿಸಿ ಬಿಡುವಂತೆ ಥೇಟು ತಮ್ಮ ಸಿನಿಮಾ ಸ್ಕ್ರಿಫ್ಟ್‌ನಂಥಾದ್ದೇ ಬತ್ತಳಿಕೆ ಹಿಡಿದು ಕುಣಿದಾಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಕೆಜೆಪಿ ಪಕ್ಷ ಘೋಷಣೆ ಮಾಡಿದಾಗ ಕರ್ನಾಟಕದಲ್ಲೊಂದು ನಿರೀಕ್ಷೆ ಮೂಡಿಕೊಂಡಿದ್ದು ಸುಳ್ಳಲ್ಲ. ಕಾಸು ಚೆಲ್ಲಾಡದೆ ಚುನಾವಣೆ ಸಾಧ್ಯವಾಗಬೇಕೆಂಬುದು ಇದೀಗ ಹಳೇಯ ಕನಸು. ಇಂಥಾ ಉಪ್ಪಿ ಕೆಪಿಜೆಪಿ ಪಕ್ಷದಿಂದ ಹೊರಬಂದು ಈ ಭಾರಿಯ ಚುನಾವಣೆಯಿಂದ ದೂರ ಉಳಿದುಕೊಂಡಿದ್ದರು. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಗಳನ್ನು ಗಮನಿಸಿರುವ ಉಪ್ಪಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

 

 

“ರಾಜಕೀಯವನ್ನು ಬೈಯುತ್ತಾ ಕಾಲಹರಣ ಮಾಡುವುದರ ಬದಲು ನಾವೆಲ್ಲರೂ ಪ್ರಜಾಕೀಯದ ಬಗ್ಗೆ ಈಗಿಂದಲೇ ಎಲ್ಲರಿಗೂ ಅರಿವು ಮೂಡಿಸೋಣ. “ ಪ್ರತಿಕ್ರಿಯೆಗಿಂತ ಕ್ರಿಯೆ ಶ್ರೇಷ್ಠವಾದದ್ದು “. ಬರೆದುಕೊಳ್ಳುವ ಮೂಲಕ ಪ್ರಜಕೀಯದ ಕಡೆಗೆ ಒಲವು ತೋರಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ.

 

 

ಉಪ್ಪಿ ಈ ಮೊದಲೇ “ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಾಧ್ಯವಾಗದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು ಅದರಂತೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ ಹಾಗಾಗಿ ತಮ್ಮ ನೂತನ ಪಕ್ಷವಾದ ಉತ್ತಮ ಪ್ರಜಕೀಯ ಪಾರ್ಟಿ ಮೂಲಕ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top