ಸಮಾಚಾರ

22 ವರ್ಷಗಳ ಹಿಂದೆ ದೇವೇಗೌಡರ ಜೊತೆಗಿನ ಸಿಟ್ಟಿಗೆ ವಾಲಾ ಈಗ ಸೇಡು ತೀರಿಸ್ಕೊಂಡ್ರ

ರಾಜ್ಯ ವಿಧಾನಸಭೆಯ ಅತಂತ್ರ ಪರಿಸ್ಥಿತಿ ಇತಿಹಾಸದತ್ತ ತಿರುಗಿ ನೋಡುವಂತೆ ಮಾಡಿದೆ. 22 ವರ್ಷದ ಮೊದಲು ಹೆಚ್‌.ಡಿ.ದೇವೇಗೌಡ ರವರು ಪ್ರಧಾನಿ ಆಗಿದ್ದಾಗ ಗುಜರಾತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾಗಿತ್ತು. ಆಗ ಅಲ್ಲಿನ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದವರು ಇಂದಿನ ಕರ್ನಾಟಕದ ರಾಜ್ಯಪಾಲ ವಜುಭಾಯ್‌ ವಾಲಾ ಆಗಿದ್ದಾರೆ.

 

 

ಗುಜರಾತ ರಾಜ್ಯದಲ್ಲಿ 1996ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸೆಪ್ಟೆಂಬರ್ 18ರಂದು ಸದನದ ವಿಶ್ವಾಸಮತ ಗೆದ್ದಿತ್ತು. ಆದರೆ ಇದಾದ 24 ಗಂಟೆಗಳ ಒಳಗಾಗಿ ಯುನೈಟೆಡ್ ಫ್ರಂಟ್ ಪ್ರಧಾನಿ, ಗುಜರಾತ್ ಸರ್ಕಾರ ರಾಜ್ಯಪಾಲರ ವರದಿ ಆಧಾರದಲ್ಲಿ ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದರು. ಗುಜರಾತ ರಾಜ್ಯದ ಬಿಜೆಪಿ ಅಧ್ಯಕ್ಷರು, ಇದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿದ್ದರು ಎನ್ನಲಾಗಿದೆ.

 

 

ಆಗ ಶಿಫಾರಸ್ಸು ಮಾಡಿರುವ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರದ ನಿರ್ಧಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ಅಧ್ಯಕ್ಷ ವಜುಭಾಯ್ ವಾಲಾ. ಆದರೆ ಇದೀಗ ಕಾಲಚಕ್ರ ಬದಲಿದೆ. ಇಂದು ವಜುಭಾಯ್ ವಾಲಾ ಅವರು ರಾಜ್ಯದ ರಾಜ್ಯಪಾಲ ಮತ್ತು ದೇವೇಗೌಡರ ಮಗನಾಗಿರುವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ವಾಲಾ ಅವರಲ್ಲಿ ಹಕ್ಕು ಮಂಡಿಸಿದ್ದಾರೆ. ಈಗ ವಜುಭಾಯ್ ವಾಲಾ ಅವರು ರಾಜ್ಯದಲ್ಲಿ ಹೆಚ್ಚು ಸೀಟ್ ಗಳಿಸಿರುವ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top