ಸಮಾಚಾರ

ಅಂತೂ ಇಂತೂ ಮಾಸ್ಟರ್ ಡ್ಯಾನ್ಸರ್ ಶೋಗೆ ಬಂದೆ ಬಿಟ್ರು ಡ್ಯಾನ್ಸ್ ಕಿಂಗ್ ವಿನೋದ್ ರಾಜ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ‘ನಾಟ್ಯ’ ಮಯೂರಿ ಹಾಗೂ ನಟಿ ಶೃತಿ ಹರಿಹರನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರ ಜೊತೆಗೆ ಗಾಯಕ ಚಂದನ್ ಶೆಟ್ಟಿ ಕೂಡ ತೀರ್ಪುಗಾರಾಗಿದ್ದರು. ಆದರೆ ಚಂದ ಡ್ಯಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿರುವುದಕ್ಕೆ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಡ್ಯಾನ್ಸ್ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಚಂದನ್ ಶೆಟ್ಟಿಯನ್ನ ತಂದು ಜಡ್ಜ್ ಮಾಡಿದ್ದೀರಲ್ಲ ನಿಮ್ ಕಣ್ಣಿಗೆ ಅದ್ಭುತ ಡ್ಯಾನ್ಸರ್ ಆಗಿರುವ ವಿನೋದ್ ರಾಜ್ ಕಾಣಲಿಲ್ಲವೇ ಎಂಬಂತ ಟೀಕೆಗಳು ಹೇರಿದುಬಂದಿದ್ದವು. ಆದರೆ ಈ ಯಾವುದಕ್ಕೂ ಕ್ಯಾರೇ ಎನ್ನದ ಚಾನೆಲ್ ಮಂದಿ ಚಂದನ್ ಶೆಟ್ಟಿಯನ್ನೇ ತೀರ್ಪುಗಾರನಾಗಿ ಮುಂದುವರೆಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.

 

 

ಇದೀಗ ವೀಕ್ಷಕರ ಆಸೆ ಸ್ವಲ್ಪ ಮಟ್ಟಿಗಾದರೂ ಈಡೇರಿಸಬೇಕು ಎಂದು ಮನಸು ಮಾಡಿರುವ ಶೋನ ಆಯೋಜಕರು ವೀಕ್ಷಕರ ಬೇಡಿಕೆಯಂತೆ ಕಡೆಗೂ ವಿನೋದ್ ರಾಜ್ ಅವರನ್ನು ಮಾಸ್ಟರ್ ಡ್ಯಾನ್ಸರ್ ಷೋ ವೇದಿಕೆಗೆ ಕರೆತರುವ ಕಾರ್ಯ ಕೈಗೊಂಡಿದ್ದಾರೆ. ಆದರೆ ವಿನೋದ್ ರಾಜ್ ಆಗಮಿಸುತ್ತಿರುವುದು ಪೂರ್ಣ ಪ್ರಮಾಣದ ತೀರ್ಪುಗಾರನಾಗಿ ಅಲ್ಲ ಬದಲಾಗಿ ವಿಶೇಷ ಅತಿಥಿಯಾಗಿ.

ಅಂದಹಾಗೆ ವಿನೋದ್ ರಾಜ್ ಜೊತೆ ಅವರ ತಾಯಿ ಲೀಲಾವತಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂಚಿಕೆ ನೆನ್ನೆ ಪ್ರಸಾರವಾಗಿದೆ. ಕಾರ್ಯಕ್ರಮದಲ್ಲಿ ಅವರ ಖ್ಯಾತ ಹಾಡು ‘ಅಮ್ಮ ಅಮ್ಮ’ ಹಾಡಿಗೆ ನೃತ್ಯ ಮಾಡಿ ಎಲ್ಲರನ್ನು ರಂಜಿಸಿದರು. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ ‘ರಾಕ್ ಅಂಡ್ ರೋಲ್’ ಕಾರ್ಯಕ್ರಮಕ್ಕೆ ವಿನೋದ್ ರಾಜ್ ತೀರ್ಪುಗಾರರಾಗಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top