ಸಮಾಚಾರ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಗೋವಾ ಮತ್ತೆ ಬಿಹಾರದಲ್ಲಿ ಭುಗಿಲೆದ್ದ ಆಕ್ರೋಶ

ರಾಜ್ಯ ರಾಜಕಾರಣದಲ್ಲಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೊಡ್ಡ ಹೈಡ್ರಾಮಗಳೇ ನಡೆದುಹೋದವು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

 

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

ಸದ್ಯ ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ರಾಜಕೀಯ ಮೊರೆ ಹೋಗಿದೆ ಎನ್ನಲಾಗುತ್ತಿದೆ. ಕುದುರೆ ವ್ಯಾಪಾರ ತಪ್ಪಿಸಲು ಈ ನಿರ್ಣಯ ಮಾಡಲಾಗುತ್ತಿದೆ.

 

 

ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಇತ್ತ ಗೋವಾ ಹಾಗೆ ಬಿಹಾರದಲ್ಲಿ ಆಕ್ರೋಶ ಭುಗಿಲೆದ್ದಿದೆ , ಅತಿ ಹೆಚ್ಚು ಸಂಖ್ಯಾ ಬಲ ಇದ್ದ ಬಿಜೆಪಿ ಗೆ ರಾಜ್ಯಪಾಲರು ಮಣೆಹಾಕಿದ್ದಾರೆ ಹಾಗಾದರೆ ಗೋವಾ ದಲ್ಲಿ ಅತಿ ಹೆಚ್ಚು ಸೀಟ್ಗಳನ್ನು ಗಳಿಸಿದ್ದ 17 ಶಾಸಕರಿದ್ದ ಕಾಂಗ್ರೆಸ್ಗೆ ಸರ್ಕಾರ ಮಾಡಲು ಬಿಡಲಿಲ್ಲ, ಕಾಂಗ್ರೆಸ್ 17, ಬಿಜೇಪಿ 13, MGP 3, ಪಕ್ಷೇತರ 3 ಸಂಖ್ಯಾ ಬಲ ಇತ್ತು , ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸಂಖ್ಯಾ ಬಲ ಸಾಧಿಸಿದ ಹಿನ್ನಲೆಯಲ್ಲಿ ಸರ್ಕಾರ ಮಾಡಲು ಅಪ್ಪಣೆ ಕೊಟ್ಟಿರಿ .

 

 

ಹಾಗೆಯೇ ಬಿಹಾರದಲ್ಲಿ ಅತಿ ಹೆಚ್ಚು ಸೀಟ್ಗಳನ್ನು ಗಳಿಸಿದ್ದ ರಾಷ್ಟ್ರೀಯ ಜನತಾದಲ್ ನಲ್ಲಿ ಒಟ್ಟು ಸಂಖ್ಯಾಬಲ 80 ಇತ್ತು, RJD 80, JDU 71, BJP 53 ಸಂಖ್ಯಾ ಬಲ ಇತ್ತು,  ಆದರೆ RJD ಸರ್ಕಾರ ಮಾಡಲು ಬಿಡಲಿಲ್ಲ ,ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸಂಖ್ಯಾ ಬಲ ಸಾಧಿಸಿದ ಹಿನ್ನಲೆಯಲ್ಲಿ ಸರ್ಕಾರ ಮಾಡಲು ಅಪ್ಪಣೆ ಕೊಟ್ಟಿರಿ .

ಈಗ ಕರ್ನಾಟಕದಲ್ಲಿ ಯಾವ ಕಾರಣಕ್ಕೆ ಅತಿ ಹೆಚ್ಚು ಸಂಖ್ಯಾಬಲ ಹೊಂದಿದ ಏಕಮಾತ್ರ ಪಾರ್ಟಿಗೆ ಸರ್ಕಾರ ಮಾಡಲು ಅವಕಾಶ ಕೊಟ್ಟಿರಿ ಎಂದು ಗೋವಾ ಹಾಗು ಬಿಹಾರ ಪ್ರತಿಪಕ್ಷದವರು ಪ್ರಶ್ನೆ ಮಾಡುತ್ತಿದ್ದಾರೆ , ನಾಳೆ ಗೋವಾ ರಾಜ್ಯಪಾಲರ ಮುಂದೆ ಪರೇಡ್ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top