ತಿಂಡಿ ತೀರ್ಥ

ಮಕ್ಕಳ ಪುಷ್ಟಿದಾಯಕ ಆಹಾರ ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ

ಮಕ್ಕಳ ಪುಷ್ಟಿದಾಯಕ ಆಹಾರ ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು 1 ಕಪ್‌,
ಆಲೂಗಡ್ಡೆ, ಬಟಾಣಿ ಹಾಗೂ
ಕ್ಯಾರೆಟ್‌ ಚೂರುಗಳು ¾ ಕಪ್‌,

ಗರಂಮಸಾಲೆ ಪೌಡರ್‌ ಭಿ
ಚಮಚ ಕೆಂಪುಮೆಣಸಿನಪುಡಿ1 ಚಮಚ,
ಬ್ರೆಡ್ಡಿನ ಪುಡಿ ಅಥವಾ ರಸ್ಕ್ ಪುಡಿ ½ ಕಪ್‌,
ಉಪ್ಪು ರುಚಿಗೆ.

 

Image result for godi cutlet

 

ಗೋಧಿಹಿಟ್ಟಿನ ಕಟ್ಲೆಟ್‌ ಮಾಡುವ ವಿಧಾನ:
ಗೋಧಿಹಿಟ್ಟಿಗೆ ಉಪ್ಪು ಮತ್ತು ಸ್ವಲ್ಪ$ಎಣ್ಣೆಯನ್ನು ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ನಾದಿಕೊಳ್ಳಿ.

ತರಕಾರಿಗಳನ್ನು ಬೇಯಿಸಿ. ತಣಿದ ಅನಂತರ ಸ್ವಲ್ಪ$ಹಿಸುಕಿ, ಮಸಾಲೆ ಪುಡಿ, ಉಪ್ಪು ಹಾಗೂ ಕೆಂಪುಮೆಣಸಿನಪುಡಿಯನ್ನು ಸೇರಿಸಿ ಬೆರೆಸಿ. ಇದು ಹೂರಣ.

ಹಿಟ್ಟನ್ನು ಒಬ್ಬಟ್ಟಿನ ಕಣಕದ ಹಾಗೆ ತೆಗೆದುಕೊಂಡು ತಯಾರಾದ ಹೂರಣವನ್ನು ತುಂಬಿಸಿ, ತಟ್ಟಿ. ಬ್ರೆಡ್ಡಿನ ಪುಡಿಯಲ್ಲಿ ಎರಡೂ ಕಡೆ ಹೊರಳಿಸಿ. ಕಾದ ಕಾವಲಿ ಮೇಲೆ ಹಾಕಿ. ಎಣ್ಣೆ ಹಾಕಿ, ಎರಡೂ ಬದಿ ಸ್ವಲ್ಪ$ಕೆಂಪು ಬಣ್ಣ ಬರುವ ಹಾಗೆ ಹುರಿಯಿರಿ.

 

ಟೊಮೆಟೊ ಸಾಸ್‌ನೊಂದಿಗೆ ಸವಿಯಲು ಕೊಡಿ.

ಗೋಧಿಹಿಟ್ಟು ಮತ್ತು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶಗಳು ಇರುವುದರಿಂದ ಮಕ್ಕಳಿಗೆ ಪುಷ್ಟಿದಾಯಕ ಆಹಾರವಿದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top