ಹೆಚ್ಚಿನ

ಮೇ 16 ರಿಂದ ಜೂನ್ 16 ನೇ ತಾರೀಖಿನವರಿಗೂ ಇರುವ ಅಧಿಕ ಮಾಸಕ್ಕೆ ಮಲ ಮಾಸ,ಪುರುಷೋತ್ತಮ ಮಾಸ ಎಂದು ಯಾಕೆ ಕರೆಯಲಾಗುತ್ತದೆ. ಈ ಮಾಸದ ಮಹತ್ವ ಏನು ಗೊತ್ತಾ .

ಅಧಿಕ ಮಾಸಕ್ಕೆ ಮಲ ಮಾಸ,ಪುರುಷೋತ್ತಮ ಮಾಸ ಎಂದು ಯಾಕೆ ಕರೆಯಲಾಗುತ್ತದೆ. ಈ ಮಾಸದ ಮಹತ್ವ ಏನು ಗೊತ್ತಾ .

 

 

ಅಧಿಕ ಮಾಸಕ್ಕೆ ಮಲ ಮಾಸ ಎಂದು ಯಾಕೆ ಕರೆಯಲಾಗುತ್ತದೆ ?

ಇಂದೂ ಧರ್ಮದಲ್ಲಿ ಅಧಿಕ ಮಾಸದ ಸಮಯದಲ್ಲಿ ಎಲ್ಲಾ ಶುಭ ಕಾರ್ಯಗಳು, ಮಂಗಳ ಕಾರ್ಯಗಳು ಮತ್ತು ಪವಿತ್ರ ಕಾರ್ಯಗಳು ವರ್ಜಿತ ಅಂದರೆ ಮಾಡಲಾಗುವುದಿಲ್ಲ ಎಂದು ಪರಿಗಣಿಸಲಾಗಿದೆ .ಈ ಮಾಸವನ್ನು ಮಲಿನ ವಾಗಿರುತ್ತದೆ. ಈ ಮಾಸದ ಸಮಯದಲ್ಲಿ ಹಿಂದೂ ಧರ್ಮದ ವಿಶಿಷ್ಟವಾದ ಮಂಗಳ ಕಾರ್ಯಗಳಾದ ನಾಮಕರಣ ,ವಿವಾಹ ಮಹೋತ್ಸವ, ಯಜ್ಞೋಪವೀತ, ಸಾಮಾನ್ಯ ಧಾರ್ಮಿಕ ಸಂಸ್ಕಾರಗಳು, ಗೃಹಪ್ರವೇಶ , ಹೊಸ ವಸ್ತುಗಳ ಖರೀದಿ ಇನ್ನೂ ಅನೇಕ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಮಲಿನವಾಗಿರುವ ಮಾಸವಾದ್ದರಿಂದ ಈ ಮಾಸವನ್ನು ಮಲ ಮಾಸ ಎಂದು ಕರೆಯಲಾಗುತ್ತದೆ.

ಪುರುಷೋತ್ತಮ ಮಾಸ ಯಾಕೆ ? ಮತ್ತು ಈ ಹೆಸರು ಹೇಗೆ ಬಂತು ?

ಅಧಿಕ ಮಾಸದ ಅಧಿಪತಿ ಸ್ವಯಂ ಭಗವಂತನಾದ ವಿಷ್ಣುವೇ ಆಗಿದ್ದಾನೆ. ಪುರುಷೋತ್ತಮ ಎನ್ನುವ ಹೆಸರು ಕೂಡ ಭಗವಂತನಾದ ವಿಷ್ಣುವಿನ ಒಂದು ಹೆಸರೇ ಆಗಿದೆ. ಆದ್ದರಿಂದಲೇ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ.
ಈ ವಿಷಯವಾಗಿ ಒಂದು ದೊಡ್ಡ ರೋಚಕವಾದ ಪುರಾಣ ಕಥೆ ನಮಗೆ ಕೇಳಲು ಸಿಗುತ್ತದೆ.
ಹೀಗೆ ಹೇಳಲಾಗುತ್ತದೆ, ಭಾರತೀಯ ಮನುಷ್ಯರು ತಮ್ಮ ಗ್ರಂಥದ ಗಣನೆಯ ಪದ್ಧತಿಯಿಂದ ಪ್ರತಿ ಚಂದ್ರ ಮಾಸದಲ್ಲಿಯೂ ಕೂಡ ಒಂದು ದೇವತೆಯ ಹೆಸರನ್ನು ಇಡಲು ನಿರ್ಧಾರ ಮಾಡಿದ್ದರು. ಯಾಕೆಂದರೆ ಅಧಿಕ ಮಾಸವು ಸೂರ್ಯ ಮತ್ತು ಚಂದ್ರ ಮಾಸದ ಮಧ್ಯ ಸಂತುಲನವನ್ನು ಕಾಯ್ದಿರಿಸಲು ಸೀಮಿತವಾಗಿದೆ.

 

 

ಇದರ ಹೆಚ್ಚುವರಿಯಾಗಿ ಈ ಮಾಸದ ಅಧಿಪತಿಯಾಗಲು ಯಾವುದೇ ದೇವತೆಯರು ಕೂಡ ತಯಾರಾಗಲಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ಋುಷಿ ಮುನಿಗಳು ಭಗವಂತನಾದ ವಿಷ್ಣುವಿನ ಬಳಿ ಆಗ್ರಹವನ್ನು ಮಾಡಿದರು. ಆವರೆ ಈ ಮಾಸದ ಅಧಿಪತಿಯಾಗಬೇಕೆಂದು, ಆಗ ಈ ಮಾಸದ ಭಾರವನ್ನು, ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುವೇ ಹೊರಬೇಕೆಂದು ನಿರ್ಧರಿಸಿದರು. ವಿಷ್ಣುವು ಈ ಅನುಮೋದನೆಯನ್ನು ಸ್ವೀಕಾರ ಮಾಡಿದನು. ನಂತರ ಮಲ ವಾಸದ ಜೊತೆಗೆ ಪುರುಷೋತ್ತಮ ಮಾಸವೂ ಕೂಡ ವಿಷ್ಣುವಿನ ಹೆಸರಿನಿಂದಲೇ ಕರೆಯಲ್ಪಟ್ಟಿದೆ.

ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಹೇಳುವುದಕ್ಕೆ ಒಂದು ಅರ್ಥ ಇದೆ.
ಈ ಮಾಸವು ಪ್ರತಿಯೊಬ್ಬ ವ್ಯಕ್ತಿಗೂ ತನು ಮನಸ್ಸಿನ ವಿಶೇಷತೆಯಿಂದ ಕೂಡಿರುತ್ತದೆ. ಮತ್ತು ಅಷ್ಟೇ ಪವಿತ್ರವಾಗಿರುತ್ತದೆ. ಈ ಕಾರಣದಿಂದ ಜನರು ಶ್ರದ್ಧೆಯಿಂದ ವ್ರತ, ಉಪವಾಸ, ಧ್ಯಾನ, ಭಜನೆ ,ಕೀರ್ತನೆಯಲ್ಲಿ ತಲ್ಲೀನರಾಗಿರುತ್ತಾರೆ. ಅವರನ್ನು ಅವರೇ ಭಗವಂತನಿಗೋಸ್ಕರ ಸಮರ್ಪಣೆಯನ್ನು ಮಾಡುವುದಕ್ಕೆ ನಿಶ್ಚಯ ಮಾಡಿಕೊಂಡಿರುತ್ತಾರೆ. ಈ ತರಹ ಈ ಸಮಯವು ಸಾಮಾನ್ಯ ಪುರುಷರು ಕೂಡ ಉತ್ತಮ ವಾಗುವುದಕ್ಕೆ ಇರುತ್ತದೆ. ಮನಸ್ಸಿನ ಮಲವನ್ನು ತೊಳೆಯಲು ಇರು ಇರುತ್ತದೆ. ಇದೇ ಕಾರಣದಿಂದ ಇದನ್ನು ಪುರುಷೋತ್ತಮ ಮಾಸ ಎಂದು ಹೆಸರಿಡಲಾಗಿದೆ.

ಅಧಿಕ ಮಾಸದ ಮಹತ್ವ ಏನು ? ಮತ್ತೆ ಯಾಕೆ ಆಚರಿಸಲಾಗುತ್ತದೆ ?

ಹಿಂದೂ ಧರ್ಮದ ಅನುಸಾರ ಪ್ರತಿಯೊಂದು ಜೀವವೂ ಸಹ ಪಂಚ ಮಹಾ ಭೂತಗಳಿಂದ ನಿರ್ಮಿತವಾಗಿದೆ. ಈ ಪಂಚಮಹಾಭೂತಗಳಲ್ಲಿ ಜಲ, ಅಗ್ನಿ , ವಾಯು, ಆಕಾಶ, ಭೂಮಿ ಅಂದರೆ ಪೃಥ್ವಿ ಸಮ್ಮಿಲನವಾಗಿದೆ. ತಮ್ಮ ಪ್ರಕೃತಿಯ ಅನುರೂಪವಾಗಿ ಈ ಐದು ತತ್ವಗಳು ಪ್ರತ್ಯೇಕ ಜೀವಿಯ ರೂಪದಲ್ಲಿ ನಿಶ್ಚಿತವಾಗಿ ಇರುತ್ತವೆ.

ಅಧಿಕ ಮಾಸದಲ್ಲಿ ಸಮಸ್ತ ಧಾರ್ಮಿಕ ಕಾರ್ಯಗಳು, ಧ್ಯಾನ ,ಯೋಗ, ಪೂಜೆ, ವ್ರತಗಳು, ಸಿದ್ದಿಯ ಮಾಧ್ಯಮದಲ್ಲಿ ಸಾಧಿಸಿ ತಮ್ಮ ಶರೀರದಲ್ಲಿ ಈ ಐದು ತತ್ವಗಳನ್ನು ಬಳಸಿಕೊಂಡು ಸಮ್ಮಿಲನ ಮಾಡುವ ಪ್ರಯಾಸ ಮಾಡುತ್ತವೆ. ಈ ಸಂಪೂರ್ಣ ಮಾಸದಲ್ಲಿ ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಯತ್ನದಿಂದ ವ್ಯಕ್ತಿಯು ತಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಉನ್ನತಿ ಮತ್ತು ನಿರ್ಮಲತೆಗೆ ಸೀಮಿತವಾಗಿರುತ್ತದೆ.

 

 

ಈ ರೀತಿ ಅಧಿಕ ಮಾಸದಲ್ಲಿ ಮಾಡುವ ಪ್ರಯತ್ನದಿಂದ ವ್ಯಕ್ತಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಸ್ವಯಂ ಹೊರಗಿನಿಂದ ಮತ್ತು ಒಳಗಿನಿಂದ ಸ್ವಚ್ಛ ಮಾಡಿಕೊಂಡು , ಪರಮ ಪವಿತ್ರವಾದ ನಿರ್ಮಲತೆಯನ್ನು ಪ್ರಾಪ್ತಿ ಮಾಡಿಕೊಂಡು ಹೊಸ ಶಕ್ತಿ ಮತ್ತು ಚೈತನ್ಯ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ಸಮಯದಲ್ಲಿ ಮಾಡಿದ ಎಲ್ಲಾ ಧಾರ್ಮಿಕ ಪ್ರಯತ್ನಗಳು ಸಮಸ್ತ ಜನ್ಮ ಕುಂಡಲಿಯ ದೋಷಗಳನ್ನು ಕೂಡ ನಿವಾರಣೆ ಮಾಡುತ್ತದೆ .
ಅಧಿಕ ಮಾಸದಲ್ಲಿ ಏನು ಮಾಡಿದರೆ ಒಳ್ಳೆಯದು ? ಮತ್ತು ಸಂಪೂರ್ಣವಾಗಿ ಫಲವನ್ನು ಕೊಡುತ್ತದೆ.

ಹೆಚ್ಚಾಗಿ ಅಧಿಕ ಮಾಸದಲ್ಲಿ ಹಿಂದೂಗಳು ಉಪವಾಸ , ಪೂಜೆ, ವ್ರತ, ಧ್ಯಾನ, ಭಜನೆ, ಕೀರ್ತನೆ ಅವರ ಜೀವನ ಚರ್ಯವನ್ನಾಗಿ ಮಾಡಿಕೊಳ್ಳುತ್ತಾರೆ .ಪೌರಾಣಿಕ ಸಿದ್ಧಾಂತದ ಪ್ರಕಾರ ಈ ಮಾಸದ ಸಮಯದಲ್ಲಿ ಯಜ್ಞ, ಹವನ ಅಷ್ಟೇ ಅಲ್ಲದೆ ಶ್ರೀಮದ್ ದೇವಿ ಭಾಗವತ , ಶ್ರೀ ಭಗವದ್ ಪುರಾಣ, ಶ್ರೀ ವಿಷ್ಣು ಪುರಾಣ, ಶ್ರೀ ವಿಷ್ಣು ಸಹಸ್ರನಾಮಾವಳಿ, ಭವಿಷ್ಯೋತ್ತರ ಪುರಾಣ ಇನ್ನೂ ಇತ್ಯಾದಿಗಳನ್ನು ಶ್ರವಣ, ಕೀರ್ತನೆಯನ್ನು ಮಾಡುವುದು ವಿಶೇಷ ರೂಪದಲ್ಲಿ ಫಲದಾಯಕವಾಗುತ್ತದೆ.

ಅಧಿಕ ಮಾಸದ ಅ ಅನುಷ್ಠಾನ ಅಂದರೆ ಸಂಪೂರ್ಣ ಜವಾಬ್ದಾರಿ ಈ ಮಾಸದ ಒಡೆಯ ಭಗವಂತನಾದ ಶ್ರೀ ವಿಷ್ಣುವೇ ಆಗಿದ್ದಾನೆ. ಆದ್ದರಿಂದ ಈ ಸಮಯದಲ್ಲಿ ವಿಷ್ಣು ಮಂತ್ರವನ್ನು ಜಪಿಸುವುದು ಕೂಡ ಲಾಭದಾಯಕವಾಗಿದೆ. ಅಧಿಕ ಮಾಸದಲ್ಲಿ ವಿಷ್ಣು ಮಂತ್ರವನ್ನು ಜಪಿಸುವ ಸಾಧಕರಿಗೆ ಭಗವಂತನಾದ ವಿಷ್ಣು ಸ್ವಯಂ ಆಶೀರ್ವಾದವನ್ನು ನೀಡುತ್ತಾನೆ. ಅವನ ಪಾಪಗಳು ಶಮನವನ್ನು ಮಾಡಲಾಗುತ್ತದೆ ಮತ್ತು ಅವರ ಆಸೆಗಳು ಈಡೇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top