ಸಮಾಚಾರ

ಮತ್ತೆ ಕುಚುಕುಗಳಾದ ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿದ್ದ ಜಮೀರ್ ಅಹಮದ್ ಖಾನ್ ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ.

 

 

ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್’ಗೆ ಬೇಷರತ್ ಬೆಂಬಲ ನೀಡಿದೆ.ಬಿಜೆಪಿಗೆ ಬಹುಮತ ಸಾಭೀತುಪಡಿಸಲು ಅಗತ್ಯವಿರುವ ಶಾಸಕರ ಸಂಖ್ಯೆ ಕಡಿಮೆಯಿರುವುದರಿಂದ ಬಿಜೆಪಿ ಕಡೆಯಿಂದ ‘ಆಪರೇಷನ್ ಕಮಲಾ’ ಮೂಲಕ ‘ಕುದುರೆ ವ್ಯಾಪಾರ’ ನಡೆಯಬಹುದು ಎಂಬ ಅನುಮಾನದಿಂದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳುವ ಸಲುವಾಗಿ ರೆಸಾರ್ಟ್ ರಾಜಕೀಯದ ಮೊರೆಹೋಗಿದ್ದಾರೆ.

 

 

ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಈ ವೇಳೆಯಲ್ಲಿ ಕುಮಾರಸ್ವಾವಿ ಮತ್ತು ಜಮೀರ್ ಅಹ್ಮದ್ ಮುಖಾಮುಖಿ ಆಗಿದ್ದಾರೆ.ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕುಮಾರಸ್ವಾಮಿಯವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, “ಕುಮಾರಸ್ವಾಮಿ ಅವರನ್ನ ರಾಜಕೀಯದಲ್ಲಿ ವಿರೋಧ ಮಾಡಿದ್ದೆ, ಅವರು ಕೂಡ ನನ್ನನ್ನು ವಿರೋಧ ಮಾಡಿದ್ದರು ಅಷ್ಟೇ. ಈಗ ಜೆಡಿಎಸ್ ಕಾಂಗ್ರೆಸ್ ಸೇರಿಕೊಂಡು ಸರ್ಕಾರ ಮಾಡುತ್ತಿದೆ ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ. ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top