ವಿಶೇಷ

ಈ ಸ್ಟಾರ್ ನಟಿಯ ಜೀವನದಲ್ಲಿ ನಡೆದಿದ್ದ ಈ ಒಂದು ಘಟನೆ ಆಕೆಯ ಸಿನಿ ಬದುಕನ್ನೇ ನಾಶಪಡಿಸಿತ್ತು

ಜೀವನ ಎಲ್ಲರಿಗೂ ಒಂದೊಂದು ಬಗೆಯ ಪಾಠವನ್ನ ಹೇಳಿಕೊಡುತ್ತದೆಯಂತೆ, ಕೆಲವರ ಜೀವನ ಅಲ್ಪ ಸ್ವಲ್ಪ ಸಮಸ್ಯೆಗಳಿಂದ ಸುಗಮವಾಗಿ ನಡೆದರೆ, ಕೆಲವರಂತೂ ಎಡವಟ್ಟುಗಳನ್ನು ಮಾಡಿಕೊಂಡು ಮರಣವನ್ನ ಅತಿ ಹತ್ತಿರದಿಂದ ಕಂಡು ಕೊನೆಯದಾಗಿ ಕೂಡಲೆಯಲ್ಲಿ ಜೀವಂತವಾಗುಳಿಯುತ್ತಾರೆ, ಈ ಕಥೆಯು ಕೂಡ ಅಂತಹದ್ದೇ.

 

 

ಭಾರತದ ಅತಿ ಸುಂದರ ನಟಿಯರಲ್ಲಿ ಅನು ಅಗರ್ವಾಲ್ ಕೂಡ ಒಬ್ಬಳು, ಮಾಡೆಲಿಂಗ್ ಕ್ಷೇತ್ರದಲ್ಲಿ ಈಕೆ ಸೃಷ್ಟಿಸಿದ್ದ ಸಂಚಲನದಿಂದಾಗಿ ಯಾವುದೇ ಕಷ್ಟವಿಲ್ಲದೆ ಬಾಲಿವುಡ್ ಆಫರ್ ಗಳು ಹುಡುಕಿಕೊಂಡು ಬಂದಿದ್ದವು,

ಮೊದಲ ಚಿತ್ರದಲ್ಲೇ ಸ್ಟಾರ್ ನಿರ್ದೇಶಕ ಮಹೇಶ್ ಭಟ್ ಆಕ್ಷನ್ ಕಟ್ ಹೇಳಿದ್ದ ಆಶಕಿ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡ ಈಕೆ ಮೊದಲ ಚಿತ್ರವೇ ಸೂಪರ್ ಹಿಟ್ ಕಂಡಳು, ನಂತರ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಮಣಿರತ್ನ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಅದೂ ಕೂಡ ಸೂಪರ್ ಹಿಟ್ ಆಯಿತು, ಒಟ್ಟಿನಲ್ಲಿ ಎರಡೇ ಸಿನಿಮಾಗಳಿಗೆ ಸ್ಟ್ರಾರ್ ನಟಿಯಾಗಿಬಿಟ್ಟಿದ್ದಳು. ಯಶಸ್ಸಿನ ಉತ್ತುಂಗದಲ್ಲಿ ಸಾಗಿಸುತ್ತಿದ್ದಾಗ ಈಕೆಯ ಜೀವನ ಚಿತ್ರವಿಚಿತ್ರ ಟ್ವಿಸ್ಟ್ ಅಂಡ್ ಟರ್ನ್ಸ್ ಪಡೆದುಕೊಳ್ಳುವ ಮೂಲಕ ಅಲ್ಲೋಲ ಕಲ್ಲೋಲವಾಯಿತು.

 

 

1999ರಲ್ಲಿ ಅನು ಅಗರ್ವಾಲ್ ಪ್ರಯಾಣಿಸುತ್ತಿದ್ದ ಕಾರ್ ಭೀಕರ ಅಪಘಾತಕ್ಕೆ ತುತ್ತಾಗಿತ್ತು ಆಗ ತಾನು ಸತ್ತೇಹೋದೆ ಎಂದು ಅನು ಅಗರವಾಲ್ ಆನೊಂದುಕೊಂಡಿದ್ದಳು ಆದರೆ ತನಗೆ ಗೊತ್ತಾಗದೆ ಹಾಗೆ ಕೂದಲೆಳೆಯ ಅಂತರದಲ್ಲಿ ಸಾವಿನ ಮನೆಯ ಕದವನ್ನು ತಟ್ಟಿ ಬದುಕುಳಿದು ನಿಟ್ಟುಸಿರು ಬಿಟ್ಟಿದ್ದಳು. ಈ ಅಪಘಾತದಿಂದಾಗಿ 29 ದಿನ ಕೋಮಾ ಸೇರಿದ್ದ ಅನು ನಂತರ ಪ್ರಜ್ಞೆ ಬಂದಾಗ ಕಾಡಿತ್ತು ಶಾಕ್.

ಕೋಮಾದಿಂದ ಹೊರಬಂದ ಅನುಗೆ ಕೈಯಲ್ಲಿ ಬೆರಳುಗಳು ಇರಲಿಲ್ಲ ಅಸಲಿಗೆ ಅರ್ಧ ಕೈಯೇ ನಾಶವಾಗಿಹೋಗಿತ್ತು., ಮುಖವೂ ಕೂಡ ಮೊದಲಿನ ರೀತಿ ಇರಲಿಲ್ಲ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿತ್ತು. ನಂತರ ದೇಹವನ್ನ ಮೊದಲನೇ ಸ್ಥಿತಿಗೆ ತರಲು ಹರಸಾಹಸ ಪಟ್ಟ ಅನು 24 ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಳು, ಸುಮಾರು ವರ್ಷಗಳ ನಂತರವೂ ಅವಳ ಸೌಂದರ್ಯ ಮರಳಿಸಲೇ ಇಲ್ಲ.

 

 

ಒಂದು ಕಾಲದಲ್ಲಿ ಸುರಸುಂದರಿಯಾಗಿ ಮೆರೆಯುತ್ತಿದ್ದ ಈಕೆ ತನ್ನ ಮುಖ ತಾನೇ ನೋಡಿಕೊಳ್ಳಲು ತಾನೇ ಅಸಹ್ಯಪಡುತಿದ್ದಳು ಅಷ್ಟರ ಮಟ್ಟಿಗೆ ಮುಖ ವಿಕಾರಗೊಂಡಿಬಿಟ್ಟಿತ್ತು.. ಈ ಘಟನೆಯಿಂದ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದುಕೊಂಡ ಅನು ಮನಸ್ಸಿಗೆ ತನಗೆ ತಾನೇ ಧೈರ್ಯ ತುಂಬಿಕೊಂಡು ಈಗ ಕೊಳಚೆ ಪ್ರದೇಶದ ಬಡ ಮಕ್ಕಳಿಗೆ ಉಚಿತವಾಗಿ ವಿದ್ಯೆ ಮತ್ತು ಯೋಗ ಹೇಳಿಕೊಡುತ್ತ ತನ್ನ ಸಂತೋಷವನ್ನು ಮಕ್ಕಳಲ್ಲಿ ನೋಡುತ್ತಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top