ಸಮಾಚಾರ

ಈಗಲ್‌ ಟನ್‌ ರೆಸಾರ್ಟ್ ನಲ್ಲಿ ಕಮಲದ ಭೀತಿಗೆ ಶಾಸಕರು ಹೋಗಿದ್ದೆಲ್ಲಿ

ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರಿಗೆ ಆಪರೇಷನ್ ಕಮಲದ ಭೀತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿದ್ದ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರೆಲ್ಲರೂ ಈಗ ಬೇರೆಡೆಗೆ ಸ್ಥಳಾಂತರವಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಎಲ್ಲಿ ಹೋಗಿದ್ದಾರೆ ಎನ್ನುವ ಗುಟ್ಟನ್ನು ಅವರು ಬಿಟ್ಟು ಕೊಟ್ಟಿರಲಿಲ್ಲ.

 

 

ಜೆಡಿಎಸ್ ಶಾಸಕರು ಶಾಂಗ್ರಿಲಾ ಹೋಟೆಲ್‌ ಮತ್ತು ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್‌ ಟನ್‌ ರೆಸಾರ್ಟ್‌ ನಲ್ಲಿದ್ದರು. ಅಲ್ಲಿಂದ ಪ್ರಯಾಣ ಬೆಳೆಸಿ ಈಗ ಹೈದರಾಬಾದ್‌ ಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಪಾರ್ಕ್‌ ಹಯಾತ್‌ ಹೋಟೆಲ್‌ ಮತ್ತು ಗೋಲ್ಗೊಂಡ ರೆಸಾರ್ಟ್‌ಗೆ ಶಾಸಕರು ತಲುಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಲೋಕಸಭಾ ಸದಸ್ಯ ಡಿ.ಕೆ.ಸುರೇಶ ನಾವು ಶಾಸಕರಿಗೆ ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಹಾಗು ಜೆಡಿಎಸ್ ಎರಡು ಪಕ್ಷದ ಶಾಸಕರು ಇಲ್ಲಿ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.

 

ಅತ್ತ ಬಿಜೆಪಿ ನಾಯಕರು ಕೂಡ ಬಹುಮತ ಸಾಭೀತು ಪಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಹುಮತ ಸಾಭೀತು ಪಡಿಸಲು ಬಿಜೆಪಿಗೆ 15 ದಿನಗಳ ಕಾಲವಶ ಇದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top