ದೇವರು

ಈ ದೇವಸ್ಥಾನಕ್ಕೆ ಅಪ್ಪಿತಪ್ಪಿ ರಾತ್ರಿ ಹೊತ್ತು ಹೋದ್ರೆ ಸಾಯ್ತಾರಂತೆ ಆದ್ರಿಂದ ಇಲ್ಲಿ ರಾತ್ರಿಯ ಸಮಯ ಯಾರಿಗೂ ಪ್ರವೇಶ ಇಲ್ಲ ,ಏನಿದರ ನಿಗೂಢತೆ ಬನ್ನಿ ತಿಳಿಯೋಣ

ಈ ದೇವಾಲಯದಲ್ಲಿ ಕಾಲ ಕಳೆದರೆ ಮರಣ ಸಂಭವಿಸುತ್ತದೆಯಂತೆ ಈ ರೀತಿಯ ಒಂದು ನಂಬಿಕೆ ಅಲ್ಲಿನ ಭಕ್ತರ ನಂಬಿಕೆಯಾಗಿದೆ.

 

ಈ ದೇವಾಲಯದಲ್ಲಿ ನೀವು ಊಹಿಸಲು ಕೂಡ ಆಗದೇ ಇರುವಷ್ಟು ವಿಭಿನ್ನವಾಗಿದೆ. ಈ ದೇವಾಲಯವು ಒಂದು ಅತ್ಯಂತ ವಿಭಿನ್ನವಾದ ದೇವಾಲಯವಾಗಿದೆ. ಯಾರಾದರೂ ದೇವಾಲಯವನ್ನು ಯಾಕೆ ದರ್ಶನ ಮಾಡುತ್ತಾರೆ ಹೇಳಿ ಉತ್ತಮವಾದ ಆರೋಗ್ಯ, ಜೀವನ ಹಾಗೂ ಉತ್ತಮವಾದ ಸಂಗಾತಿ,ಸಂತಾನ  ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಕಾಮ, ಮೋಕ್ಷ ತಮ್ಮ ಇತ್ಯಾದಿ ಮನೋಕಾಮನೆಗಳನ್ನು ಈಡೇರಿಸಿಕೊಳ್ಳಲು, ದೇವರಿಗೆ ಶರಣಾಗುತ್ತಾರೆ ಮತ್ತು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನವನ್ನು ಮಾಡುತ್ತಾರೆ.

 

 

ಆದರೆ ಈ ದೇವಾಲಯದ ಬಗ್ಗೆ ನೀವು ಕೇಳಿದ್ದೀರೆ ? ಇಲ್ಲಿ ಕಾಲ ಕಳೆದರೆ ಸಾಕು, ಮರಣ ಸಂಭವಿಸುವ ಎಲ್ಲಾ  ಅವಕಾಶಗಳು ಇದೆಯಂತೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಈ ದೇವಾಲಯದ ಹೆಸರು ಮೈ ಹಾರ ದೇವಾಲಯ.ಮಧ್ಯಪ್ರದೇಶ ರಾಜ್ಯದ ಪ್ರವಾಸ ಇಲ್ಲಿ ಅಪಾರವಾದ ಅನುಭವವನ್ನು ತಂದುಕೊಡುತ್ತದೆ. ಮಧ್ಯಪ್ರದೇಶ ರಾಜ್ಯವನ್ನು ಭಾರತ ದೇಶದ ಹೃದಯ ಭಾಗವೆಂದು  ವರ್ಣಿಸಲಾಗುತ್ತದೆ. ಅಲ್ಲದೇ  ಮಧ್ಯಪ್ರದೇಶವು ತನ್ನ ಸಾಂಸ್ಕೃತಿಕ, ಭೌಗೋಳಿಕ ಸ್ಥಾನಮಾನ ಮತ್ತು ಪ್ರಾಕೃತಿಕ ಸೌಂದರ್ಯ, ಸಂಪ್ರದಾಯ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವಂತಹ ಒಂದು  ಅತ್ಯದ್ಭುತ ತಾಣವಾಗಿದೆ.

ಮಧ್ಯಪ್ರದೇಶ ದೇಶದಲ್ಲಿಯೇ ಅತ್ಯುತ್ತಮವಾದ ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿದೆ ಮಧ್ಯಪ್ರದೇಶ. ರಾಜ್ಯದ  ರಾಜಧಾನಿ ಭೂಪಾಲ್.  ಅದನ್ನು ನದಿಗಳ ನಗರ ಎಂದೇ ಕರೆಯಲಾಗುತ್ತದೆ. ವಿಂಧ್ಯಾ, ಸಾತ್ಪುರ ಪರ್ವತಗಳು, ಹಚ್ಚ ಹಸಿರಿನ ಅರಣ್ಯಗಳು, ಹಲವಾರು ಜೀವಿಗಳಿಗೆ ಇಲ್ಲಿಯೇ ನಿವಾಸವಾಗಿವೆ. ವನ್ಯ ಪ್ರಾಣಿ, ಅಭಯಾರಣ್ಯಗಳು, ಜಾತಿಯ ಪಕ್ಷಿಗಳು ಮತ್ತು ಮಧ್ಯ ಪ್ರದೇಶದಲ್ಲಿರುವ ಅನೇಕಾನೇಕ   ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸಲು ಎರಡು ಕಣ್ಣುಗಳು ಸಾಲದು.

ಇಂತಹ ಶ್ರೀಮಂತವಾದ ನಾಡು, ಈ ಮಧ್ಯ ಪ್ರದೇಶದಲ್ಲಿ ಈ ದೇವಾಲಯವಿದೆ. ಈ ದೇವಾಲಯವು ಭೂಪಾಲ್ ಸಮೀಪದಲ್ಲಿನ ಸಾತ್ನಾ ಜಿಲ್ಲೆಯಲ್ಲಿನ, ಮೈ ಹಾರದಲ್ಲಿ ಇದೆಯಂತೆ. ಈ ದೇವಾಲಯದಲ್ಲಿ  ಶಾರದಾ ಅಮ್ಮನವರು ನೆಲೆಸಿದ್ದಾರೆ. ಮೈ ಹಾರ  ಎಂದರೆ  “ಮಾ ಕಾ ಹಾರ” ಎಂದು  ಅರ್ಥವಂತೆ.

ಈ ದೇವಾಲಯವು  ತ್ರಿಕೂಟ ಎಂಬ ಪರ್ವತದ ಮಧ್ಯದಿಂದ ಹಾದು ಹೋಗಿದೆಯಂತೆ. ಪ್ರತಿ ವರ್ಷ ಇಲ್ಲಿ ಶಾರದಾ ದೇವಿಯನ್ನು ದರ್ಶನ ಮಾಡುವುದಕ್ಕೆ ಹಲವಾರು ಜನ ಭಕ್ತ ವೃಂದದವರು  ಬಂದು  ಭೇಟಿ ನೀಡಿ ದರ್ಶನ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ಎಂತಹದ್ದೇ ಭಯಂಕರವಾದ ಚಳಿ ಇದ್ದರೂ ಕೂಡ ಭಕ್ತರು ಭೇಟಿ ನೀಡವುದನ್ನು  ತಪ್ಪಿಸುವುದಿಲ್ಲವಂತೆ.

 

 

ಇನ್ನು ಈ ದೇವಾಲಯದ ಮಹಿಮೆಯ ಬಗ್ಗೆ ಅನೇಕ ಕಥೆಗಳು, ಪುರಾಣಗಳು ಪ್ರಚಾರದಲ್ಲಿವೆ. ತ್ರಿಕೂಟ ಪರ್ವತದ ಮಧ್ಯದಲ್ಲಿ ಇರುವ ಈ ಸ್ಥಾನದಲ್ಲಿ ಪ್ರತಿ ವರ್ಷ ಶಾರದಾ ದೇವಿಯನ್ನು ದರ್ಶನ ಮಾಡಿಕೊಳ್ಳುವುದಕ್ಕೆ ಶಾರದಾ ದೇವಿಯನ್ನು ಪೂಜಿಸುವುದಕ್ಕೆ ಭಕ್ತರ ಹಿಂಡು ಹಿಂಡೇ ಬಂದು ಹೋಗುತ್ತದೆ.

ಇಂದಿಗೂ ಕೂಡ ಶಾರದಾ ಮಾತೆಗೆ ಭಕ್ತರು ಅತ್ಯಂತ ದೊಡ್ಡದಾದ ಭಕ್ತನಾದ ಅಲಹಾ  ಉದಮ್  ಎಂಬ ಇಬ್ಬರು ಸಹೋದರರ ಆತ್ಮಗಳು ಇಲ್ಲೇ ತಿರುಗುತ್ತಾ ಇರುತ್ತವೆ ಎಂದು ಹೇಳಲಾಗುತ್ತದೆ. ಈ ಎರಡು ಆತ್ಮಗಳು ಅಂದಿಗೆ  ಪೃಥ್ವಿರಾಜ್ ಚೌಹಾಣ್ ಜೊತೆ ವೀರತತ್ವದಿಂದ ಹೋರಾಡಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರೂ ಮೊದಲ ಬಾರಿಗೆ ಮೈ ಹಾರ  ದೇವಾಲಯವನ್ನು ಗುಡ್ಡದ ಮೇಲೆ ಇರುವುದನ್ನು ಕಂಡು ಹಿಡಿದರು ಎಂದು ಹೇಳಲಾಗುತ್ತದೆ.

ಇಲ್ಲಿ ರಾತ್ರಿಯ ವೇಳೆಯಲ್ಲಿ ದೇವಾಲಯವನ್ನು ಮುಚ್ಚಿಬಿಡುತ್ತಾರೆ. ಇಲ್ಲಿನ ಸ್ಥಳೀಯರ ಪ್ರಕಾರ ಈ ಇಬ್ಬರು ಸಹೋದರರು ದೇವಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸುತ್ತಾರೆ. ಅದೇ ಕಾರಣಕ್ಕಾಗಿ ದೇವಾಲಯದ ಒಳ ಭಾಗದಲ್ಲಿ ಯಾರಿಗೂ ರಾತ್ರಿಯ ಸಮಯದಲ್ಲಿ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಯಾರಾದರೂ ಸಾಹಸ ಮಾಡಿ ದೇವಾಲಯಕ್ಕೆ ತೆರಳಿ ಅಲ್ಲಿ ನಿವಾಸ ಇದ್ದರೆ ಅಂಥವರು ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಎಂದು ಇಲ್ಲಿಯ ಸ್ಥಳೀಯರ ನಂಬಿಕೆಯಾಗಿದೆ.

ಅದೇನೆ  ಇರಲಿ  ಶಾರದಾ ಅಮ್ಮನವರ ನಿವಾಸ ಸ್ಥಾನವಾಗಿದೆ. ಅನೇಕ ಭಕ್ತ ಕೋಟಿಗಳು ಮೈ ಹಾರ  ಕ್ಷೇತ್ರಕ್ಕೆ ಮದ್ಯ ಪ್ರದೇಶಕ್ಕೆ  ಬಂದವರು ಅಲ್ಲಿನ  ಪ್ರಕೃತಿ ರಮಣೀಯತೆಗೆ  ಮಾರು ಹೋಗದೆ ಇರಲಾರರು. ಎಲ್ಲಿ ಸರಸ್ವತಿ ,ಶಾರದೆ ಇರುತ್ತಾರೋ ಅಲ್ಲಿ ಭಕ್ತಿ ಪರವಶತೆ ಇರುತ್ತದೆಯೋ  ಅಲ್ಲಿ  ಯಾವುದೇ  ಭಯ ಇರುವುದಿಲ್ಲ.ಇದು ಮೈ ಹಾರ ಕ್ಷೇತ್ರದ ದೇವಿಯ ದೇವಾಲಯವಾಗಿದೆ. ನೀವು ಒಂದು ಬಾರಿ ಮಧ್ಯಪ್ರದೇಶದ ಮೈ ಹಾರ  ದೇವಸ್ಥಾನಕ್ಕೆ ಹೋಗಿ ಬನ್ನಿ  ದೇವಿಯ ದರ್ಶನ ಮಾಡಿಕೊಂಡು ಪುನೀತರಾಗಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top