ಆರೋಗ್ಯ

ನೆಲ್ಲಿಕಾಯಿಯಲ್ಲಿರೋ ಈ ಔಷಧಿಯ ಗುಣಗಳೇ ಹೇಳುತ್ತವೆ ಅದು ಎಷ್ಟು ಶ್ರೇಷ್ಠ ಅಂತ.

ನೆಲ್ಲಿಕಾಯಿ ಯಾಕೆ ಶ್ರೇಷ್ಠ ಅಂತ ಈ ಔಷಧಿಯ ಗುಣಗಳೇ ಹೇಳುತ್ತವೆ!

ನೆಲ್ಲಿಕಾಯಿಯಲ್ಲಿ ರೋಗ ನಿವಾರಣೆ ಮಾಡಬಲ್ಲ ಔಷಧಿಯ ಗುಣಗಳಿವೆ.

 

 

1.ನೆಲ್ಲಿಕಾಯಿಯನ್ನು ಜಜ್ಜಿ ಅದರ ರಸವನ್ನು ಕೂದಲಿಗೆ ಹಾಕುವದರಿಂದ ಕೂದಲಿಗೆ ಹೊಳಪು ಸಿಗುತ್ತದೆ.

2. ನಾವು ಚಿಕ್ಕ ವಯಸ್ಸಿನಿಂದ ನೆಲ್ಲಿಕಾಯಿ ಸ್ನಾನ ಮಾಡುತ್ತ ಬಂದರೆ ಕೂದಲು ಬೇಗ ಬೆಳ್ಳಗಾಗುವುದನ್ನು ತಡೆಯಬಹುದು. ಬಹಳ ವರ್ಷಗಳ ಕಾಲ ಕಪ್ಪು ಕಾಂತಿಯ ಕೂದಲು ನಮ್ಮದಾಗಿಸಬಹುದು

3. ರಾತ್ರಿ ಮಲಗುವಾಗ ನೆಲ್ಲಿಕಾಯಿ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಿ ಮಲಗಿದ್ರೆ ನಿದ್ರೆ ಚೆನ್ನಾಗಿ ಬರುತ್ತದೆ. ತಲೆನೋವು ಕಡಿಮೆಯಾಗುತ್ತದೆ.

4 . ನೆಲ್ಲಿಕಾಯಿ ಪುಡಿಗೆ ಜೇನುತುಪ್ಪ ಸೇರಿಸಿ ಕುಡಿದರೆ ನಮ್ಮ ರಕ್ತ ಶುದ್ಧಿಯಾಗುತ್ತದೆ ಹಾಗು ರಕ್ತದಲ್ಲಿನ ದೋಷ ಕಡಿಮೆಯಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮ.

 

 

5. ಅಸಿಡಿಟಿ ಸಮಸ್ಯೆ ಇದ್ದರೆ ನೆಲ್ಲಿಕಾಯಿ ಪುಡಿಗೆ ಜೇನುತುಪ್ಪ ಸೇರಿಸಿ ತಿನ್ನಬೇಕು. ಇದರಿಂದ ಅಸಿಡಿಟಿ ಬೇಗನೆ ದೂರವಾಗುತ್ತದೆ.

6. ಒಣ ಚರ್ಮದ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಟೀ ಮಾಡುವಾಗ ಅದಕ್ಕೆ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಸಿ ಕುಡಿಯಬೇಕು( ಹಾಲು ಸೇರಿಸಬಾರದು )

7. ಹಿಮೋಗ್ಲೋಬಿನ್ ಕೊರತೆ ಇದ್ದವರು ನೆಲ್ಲಿಕಾಯಿ ಜ್ಯೂಸ್ ದಿನಾಲೂ ಸೇವಿಸಬೇಕು

 

 

 

8 . ನೆಲ್ಲಿಕಾಯಿ ಪೌಡರ್ ನಿಂದ ಮಾಡಿದ ಪೇಸ್ಟ್ ದಿನಾಲೂ ಮುಖಕ್ಕೆ ಹಚ್ಚಿ ತೊಳೆದರೆ ಮುಖದ ಮೊಡವೆಗಳು ಬೇಗನೆ ಕಡಿಮೆಯಾಗುತ್ತವೆ.

9. ಹೊಟ್ಟೆಯ ಬೊಜ್ಜು ಕರಗಿಸಲು ನೆಲ್ಲಿಕಾಯಿ ಪುಡಿ ಸಹಾಯಕಾರಿ

10 . ನೆಲ್ಲಿಕಾಯಿಯ ಇನ್ನೊಂದು ಮಹತ್ವದ ಗುಣವೆಂದರೆ ಕೆಮ್ಮು ಕಡಿಮೆಯಾಗುತ್ತದೆ

 

 

11. ನೆಲ್ಲಿಕಾಯಿಯಲ್ಲಿ ನಾರಿನ (ಫೈಬರ್ ಅಂಶ ) ಇರುವುದರಿಂದ ಇದು ಜೀರ್ಣ ಕ್ರಿಯೆಗೆ ಸಹಾಯಕಾರಿಯಾಗುತ್ತದೆ.

12 . ಮಲಬದ್ಧತೆಗೆ ನೆಲ್ಲಿಕಾಯಿ ಅತ್ಯುತ್ತಮ ಮದ್ದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top