fbpx
ದೇವರು

ಉಡುಪಿ ಜಿಲ್ಲೆಯಲ್ಲಿ ನೆಲೆಯಾಗಿರುವ ಶಕ್ತಿಶಾಲಿ ಉದ್ಭವ ಲಿಂಗ ಲೋಕನಾಥೇಶ್ವರ ಮಹಿಮೆ

ಕರಾವಳಿಯ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸುಮಾರು 10ಕಿ.ಮೀ ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ ಒಂದಾಗಿದೆ.

 

 

ಈ ಪ್ರಾಚೀನ ದೇವಾಲಯವು ಅಳುಪರ ಮತ್ತು ಶಾಂತರರ ಕಾಲದಲ್ಲಿ ಸ್ಥಾಪನೆ ಆಗಿರಬಹದು ಎಂದು ಶಾಸನಗಳು ತಿಳಿಸುತ್ತವೆ. ಈ ಮೊದಲು ಹಟ್ಟಿಯಂಗಡಿ ಗೆ ಪಟ್ಟಿಯ ನಗರಿ ಎಂದು ಹೆಸರಿಂದ ಕರೆಯುತ್ತಿದ್ದರು. ಈ ದೇವಸ್ಥಾನವು ಕ್ರಿ.ಶ. 8ನೇ ಶತಮಾನಕ್ಕೆ ಸೇರಿದೆ ಎಂದು ತಿಳಿಯುತ್ತದೆ. ಇಲ್ಲಿನ ಗಣಪತಿ ದೇವರು ಅತ್ಯಂತ ಪ್ರಾಚೀನತೆಯನ್ನು ಹೊಂದಿದ್ದು ಸುಂದರವಾಗಿ ಕೆತ್ತಲ್ಪಟ್ಟಿದೆ. ಮಾತ್ರವಲ್ಲದೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಿಗ್ರಹವು ಕೂಡಾ ಸುಂದರವಾಗಿದ್ದು, ವಿಜಯನಗರ ಅರಸರ ಕಾಲಕ್ಕೆ ಸೇರಿದೆ ಎಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಈ ದೇವಾಲಯದಲ್ಲಿ ‘ದದಿ ವಾಮನ’ ಎಂಬ ಜೈನ ಯಕ್ಷನ ಮೂರ್ತಿಯೊಂದು ಭಿನ್ನವಾದ ಸ್ಥಿತಿಯಲ್ಲಿದೆ.

 

ವರಾಹಿ ನದಿಯ ತೀರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಾಲಯಕೆ ಸಹಸ್ರ ವರ್ಷಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಸಾವಿರ ಮುಡಿ ಗೇಣಿ ಬರುತ್ತಿದ್ದು ರಾಜಾಶ್ರಯ ಪಡೆದ ವೈಭವದ ದಿನಗಳನ್ನು ಕಂಡಿತ್ತು. ಶ್ರೀ ಲೋಕನಾಥೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದು. ವೈಭವವನ್ನು ಕಂಡಿದ್ದ ದೇವಸ್ಥಾನ ಕಾಲದ ಹೊಡೆತಕ್ಕೆ ಸಿಕ್ಕಿ ಜೀರ್ಣಾವಸ್ಥೆ ತಲುಪಿದ್ದು ಈಗ ಊರ ಪರವೂರ ಭಕ್ತರ ಸಹಕಾರದಲ್ಲಿ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸಲು ತಿರ್ಮಾನಿಸಲಾಯಿತು.. ಅದಕ್ಕಾಗಿ ವಿವಿಧ ಜೀಣೋದ್ಧಾರ ಸಮಿತಿಗಳನ್ನು ರಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಹಟ್ಟಿಯಂಗಡಿ ಊರನ್ನು ಹಟ್ಟಿಅಂಗಡಿ ಎಂದು ಕೂಡ ಕರೆಯುತ್ತಾರೆ. ಇಲ್ಲಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನವು ತುಂಬಾ ಪ್ರಸಿದ್ಧವಾಗಿದೆ. ಹಟ್ಟಿಅಂಗಡಿಯಲ್ಲಿ ಜೈನ ಬಸದಿ, ಗೋಪಾಲಕೃಷ್ಣ , ಲೋಕನಾಥೇಶ್ವರ, ಮರಳದೇವಿ, ಶಂಕರನಾರಾಯಣ, ಶಿವಮುನೀಶ್ವರ, ಏಕನಾಥೇಶ್ವರ ಮತ್ತು ಶ್ಯಕ್ತರ ಬ್ರಹ್ಮ ದೇವಸ್ಥಾನಗಳು ಕೂಡ ನೋಡಲು ಸಿಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top